ETV Bharat / state

Video: ಗುಂಡ್ಲುಪೇಟೆಯಲ್ಲಿ ಬಿಳಿಕಲ್ಲು ಕ್ವಾರಿ ಕುಸಿತ: ಐವರ ರಕ್ಷಣೆ, ಮಣ್ಣಿನಡಿ ಸಿಲುಕಿರುವುದೇ ಅನುಮಾನ ಎಂದ ಡಿಸಿ

author img

By

Published : Mar 4, 2022, 5:24 PM IST

Updated : Mar 4, 2022, 7:57 PM IST

ಮಹೇಂದ್ರಪ್ಪ ಎಂಬವರ ಹೆಸರಿನಲ್ಲಿ ಗಣಿಗಾರಿಕೆ ಪರವಾನಗಿ ಇದ್ದು, ಲೀಗಲ್ ಆಗಿ ನಡೆಯುತ್ತಿದೆ. ಕ್ವಾರಿ ಸಿಬ್ಬಂದಿ ಹೇಳಿದ ಪ್ರಕಾರ ಐವರು ಗುಡ್ಡದಡಿ ಸಿಲುಕಿದ್ದರು. ಈಗಾಗಲೇ ಐವರು ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ ಎಂದು ಎಸ್​ಪಿ ಟಿ.ಪಿ. ಶಿವಕುಮಾರ್​​ ಮಾಹಿತಿ ನೀಡಿದ್ದಾರೆ.

ಬಿಳಿಕಲ್ಲು ಕ್ವಾರಿ ಕುಸಿತ ಪ್ರಕರಣ
ಬಿಳಿಕಲ್ಲು ಕ್ವಾರಿ ಕುಸಿತ ಪ್ರಕರಣ

ಚಾಮರಾಜನಗರ: ಗುಂಡ್ಲುಪೇಟೆ ಬಿಳಿಕಲ್ಲು ಗುಡ್ಡ ಕುಸಿದಿರುವ ಪ್ರಕರಣದಲ್ಲಿ ಸಿಲುಕಿದ್ದ ಐವರನ್ನು ರಕ್ಷಣೆ ಮಾಡಲಾಗಿದೆ ಎಂದು ಚಾಮರಾಜನಗರ ಡಿಸಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.

ಗುಂಡ್ಲುಪೇಟೆಯಲ್ಲಿ ಬಿಳಿಕಲ್ಲು ಕ್ವಾರಿ ಕುಸಿತ

ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಹಲವರು ನಾಪತ್ತೆಯಾಗಿದ್ದು, ಅವರು ಆ ವೇಳೆ ಓಡಿಹೋಗಿದ್ದಾರೋ, ಇಲ್ಲವೇ ಗುಡ್ಡದಲ್ಲಿ ಸಿಲುಕಿದ್ದಾರೋ ಎಂಬುದು ತಿಳಿಯುತ್ತಿಲ್ಲ. ಪ್ರಾಥಮಿಕ ಮಾಹಿತಿಯಲ್ಲಿ ಗೊತ್ತಾದಂತೆ ಸಿಲುಕಿದ್ದ ಐವರನ್ನೂ ರಕ್ಷಿಸಲಾಗಿದೆ. ರಾತ್ರಿ NDRF ಮತ್ತು STRF ಪಡೆ ಬರಲಿದ್ದು, ಕಾರ್ಯಾಚರಣೆ ನಡೆಸಲಿದ್ದಾರೆ ಎಂದರು.

ಇದನ್ನೂ ಓದಿ: ಬಜೆಟ್​ನಲ್ಲಿ ರಾಜಸ್ವ, ವಿತ್ತೀಯ ಕೊರತೆ ಎಷ್ಟು?

ಇನ್ನು, ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಒಂದು ತಜ್ಞರ ತಂಡವನ್ನು ಕಳುಹಿಸುತ್ತಿದ್ದು, ನಿರಂತರವಾಗಿ ಅಧಿಕಾರಿಗಳೊಟ್ಟಿಗೆ ಸಂಪರ್ಕದಲ್ಲಿ ಇರುವುದಾಗಿ ಹೇಳಿದರು.

ಬಿಳಿಕಲ್ಲು ಕ್ವಾರಿ ಕುಸಿತ ಪ್ರಕರಣ

ಸಿಲುಕಿರುವುದೇ ಅನುಮಾನ: ಮೇಲ್ನೋಟಕ್ಕೆ ಕಂಡುಬರುತ್ತಿರುವಂತೆ ಗುಡ್ದದಲ್ಲಿ ಇನ್ನು ಯಾರೂ ಸಿಲುಕಿಲಾರರು ಎಂಬ ಶಂಕೆ ಮೂಡುತ್ತಿದೆ. ಲೈವ್ ವಿಡಿಯೋದಲ್ಲಿ ಕಾಣುವಂತೆ ಹಲವರು ಓಡಿ ಹೋಗುತ್ತಾರೆ. ಎಲ್ಲರೂ ಮಹಾರಾಷ್ಟ್ರ, ಬಿಹಾರ ಮೂಲದವರಾದ್ದರಿಂದ ಹೊರಗಡೆ ಇದ್ದಾರಾ, ಸಿಲುಕಿಕೊಂಡಿದ್ದಾರಾ ಎಂಬುದು ಗೊತ್ತಾಗುತ್ತಿಲ್ಲ ಎಂದು ಡಿಸಿ ಹೇಳಿದರು.

Last Updated : Mar 4, 2022, 7:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.