ETV Bharat / state

ಹಾಲಿನ‌ ಹಂಚಿಕೆಯಲ್ಲೂ ರಾಜಕೀಯ.. ಸ್ಥಳೀಯ ನಗರಸಭಾ ಸದಸ್ಯೆ ವಿರುದ್ಧ ಸ್ಥಳೀಯರ ಆಕ್ರೋಶ.. - Politics in milk sharing

ಕಳೆದ ಒಂದು ವಾರದಿಂದ ವಾಡಿ೯ನಲ್ಲಿ​ ವಾಸಿಸುತ್ತಿರುವ ಅಧ೯ಕ್ಕಧ೯ ಜನರಿಗೆ ಹಾಲು ಕೊಡದೆ, ಬೇಕಾದವರಿಗೆ ಮಾತ್ರ ನಗರಸಭಾ ಸದಸ್ಯೆ ಕವಿತಾ  ಹಾಲು‌ ವಿತರಿಸುತ್ತಿದ್ದಾರೆ ಎಂದು ಕೊಳ್ಳೇಗಾಲದ ನಿವಾಸಿಗಳು ಆರೋಪಿಸಿದ್ದಾರೆ.

Politics in milk sharing: local outrage against local municipality member in kollegala
ಸ್ಥಳೀಯ ನಗರಸಭಾ ಸದಸ್ಯೆ ವಿರುದ್ಧ ಸ್ಥಳೀಯರ ಆಕ್ರೋಶ
author img

By

Published : Apr 9, 2020, 2:05 PM IST

ಕೊಳ್ಳೇಗಾಲ : ಲಾಕ್‌ಡೌನ್ ಹಿನ್ನೆಲೆ ಸಕಾ೯ರ ನಗರಸಭಾ ವ್ಯಾಪ್ತಿಯ ಕೊಳಚೆ ಪ್ರದೇಶದಲ್ಲಿ ವಾಸಿಸುವ ಬಡ ಜನರಿಗೆ ಉಚಿತವಾಗಿ ಹಾಲು ವಿತರಿಸುತ್ತಿದೆ. ಆದರೆ, ಇದರಲ್ಲೂ ಸ್ಥಳೀಯ ನಗರಸಭಾ ಸದಸ್ಯರು ರಾಜಕೀಯ ಬೆರಸಿ ರಾಡಿ ಎಬ್ಬಿಸುತ್ತಿರುವುದು ಬೆಳಕಿಗೆ ಬಂದಿದೆ.

ಹಾಲಿನ‌ ಹಂಚಿಕೆಯಲ್ಲೂ ರಾಜಕೀಯವೇ?
ಪಟ್ಟಣ ವ್ಯಾಪ್ತಿಯ 8ನೇ ವಾಡಿ೯ನ ಚಿಕ್ಕನಾಯಕರ ಬೀದಿಯಲ್ಲಿ ಸುಮಾರು ಇನ್ನೂರು ಕುಟುಂಬಗಳಿವೆ. ಕಳೆದ ಒಂದು ವಾರದಿಂದ ಈ ವಾಡಿ೯ನಲ್ಲಿ ವಾಸಿಸುತ್ತಿರುವ ಅಧ೯ಕ್ಕಧ೯ ಜನರಿಗೆ ಹಾಲು ಕೊಡದೆ, ಬೇಕಾದವರಿಗೆ ಮಾತ್ರ ನಗರಸಭಾ ಸದಸ್ಯೆ ಕವಿತಾ ಹಾಲು‌ ವಿತರಿಸುತ್ತಿದ್ದಾರೆ ಎಂದು ನಿವಾಸಿ ವಿಶ್ವನಾಥ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಹಾಲಿನ‌ ಹಂಚಿಕೆ ಸಮಯದಲ್ಲಿ ನಗರಸಭಾ ಸದಸ್ಯೆ ಕವಿತಾ ಅವರಿಗೆ ಯಾಕೇ ನಮಗೆ ಹಾಲನ್ನ ನೀಡುತ್ತಿಲ್ಲ ಎಂದು ಕೇಳಲು ಹೋದ ನಿವಾಸಿಗಳಿಗೆ, ನನಗೆ ನೀವು ವೋಟು ಹಾಕಿಲ್ಲ. ಹಾಗಾಗಿ, ನಿಮಗೆ ಹಾಲು ಕೊಡಲ್ಲ ಎಂದು ಧಮ್ಕಿ ಹಾಕುತ್ತಾರೆ ಅಂತಾರೆ ಸ್ಥಳೀಯ ನಿವಾಸಿಗಳು.
ಉಚಿತ ಹಾಲು ವಿತರಣೆಯಲ್ಲೂ ರಾಜಕೀಯ ಬೆರೆಸುತ್ತಿರುವ ಕವಿತಾರ ವಿರುದ್ಧ ಚಿಕ್ಕನಾಯಕರ ಬೀದಿ ಬಡಾವಣೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.