ETV Bharat / state

ಚಾಮರಾಜನಗರ: ಕರೆಂಟ್​ ಶಾಕ್‌ನಿಂದ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದ ನವಿಲು ರಕ್ಷಣೆ - ಚಾಮರಾಜನಗರ

ಕರೆಂಟ್ ಶಾಕ್‌ಗೊಳಗಾಗಿ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡು ನರಳುತ್ತಿದ್ದ ನವಿಲನ್ನು ಚಾಮರಾಜನಗರದಲ್ಲಿ ರಕ್ಷಿಸಲಾಗಿದೆ.

peacock-rescued-in-chamarajanagara
ಚಾಮರಾಜನಗರ: ಕರೆಂಟ್​ ಶಾಕಿನಿಂದ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದ ನವಿಲು ರಕ್ಷಣೆ
author img

By ETV Bharat Karnataka Team

Published : Sep 15, 2023, 8:37 PM IST

ವಿದ್ಯುತ್ ಪ್ರವಹಿಸಿ ಎರಡು ಕಾಲು ಸ್ವಾಧೀನ ಕಳೆದುಕೊಂಡಿದ್ದ ನವಿಲು ರಕ್ಷಣೆ

ಚಾಮರಾಜನಗರ: ವಿದ್ಯುತ್ ಪ್ರವಹಿಸಿ ಎರಡು ಕಾಲು ಸ್ವಾಧೀನ ಕಳೆದುಕೊಂಡು ನರಳುತ್ತಿದ್ದ ನವಿಲನ್ನು ರಕ್ಷಿಸಿರುವ ಘಟನೆ ಚಾಮರಾಜನಗರದ ರಾಮಸಮುದ್ರದ ತೋಟದಲ್ಲಿ ನಡೆದಿದೆ. ಇಲ್ಲಿನ ಮಹಾದೇವಪ್ಪ ಎಂಬವರ ತೋಟದಲ್ಲಿ ಆಕಸ್ಮಿಕವಾಗಿ ಕರೆಂಟ್ ಶಾಕ್‌ಗೆ ತುತ್ತಾಗಿದ್ದ ನವಿಲು ಬಿದ್ದು ಒದ್ದಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಉರಗ ರಕ್ಷಕ ಸ್ನೇಕ್ ಚಾಂಪ್, ಸ್ಥಳಕ್ಕೆ ಧಾವಿಸಿ ರಕ್ಷಿಸಿದರು.

ಅರಣ್ಯ ಇಲಾಖೆ ಸಿಬ್ಬಂದಿಯ ನೆರವು ಪಡೆದು ಚಾಮರಾಜನಗರದ ಪಶು ಆರೋಗ್ಯ ಕೇಂದ್ರದಲ್ಲಿ ನವಿಲಿಗೆ ನಿರಂತರ 3 ತಾಸು ಚಿಕಿತ್ಸೆ ಕೊಡಿಸಿ ಆರೈಕೆ ಮಾಡಲಾಗಿದೆ. ಇದೀಗ ನವಿಲು ಚೇತರಿಸಿಕೊಂಡಿದೆ. ಗ್ಲೂಕೋಸ್, ಇಂಜೆಕ್ಷನ್ ಮೂಲಕ ಹಕ್ಕಿ ಚೇತರಿಸಿಕೊಂಡ ಬಳಿಕ‌ ಅರಣ್ಯ ಇಲಾಖೆ ಸಿಬ್ಬಂದಿ ಹತ್ತಿರದ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.

ಆನೆಗೆ ಪಾದರಕ್ಷೆ ಸಿದ್ಧಪಡಿಸಿದ ಪಶುವೈದ್ಯ (ಇತ್ತೀಚಿನ ಸುದ್ದಿ): ಪಾದಕ್ಕೆ ಗಾಯವಾಗಿ ನಡೆಯಲಾಗದೇ ಒದ್ದಾಡುತ್ತಿದ್ದ ಆನೆಗೆ ಪಶುವೈದ್ಯರೊಬ್ಬರು ಪಾದರಕ್ಷೆ ತಯಾರಿಸಿ ಎಲ್ಲರ ಗಮನ ಸೆಳೆದಿದ್ದರು. ಮಣಬಾರದ ಆನೆಗೆ ಪಾದರಕ್ಷೆ ತಯಾರಿಸಲು ಸಾಧ್ಯವೇ ಎಂಬ ಅನುಮಾನಕ್ಕೆ ಈ ಪಶು ವೈದ್ಯ ತೆರೆ ಎಳೆಯುವಲ್ಲಿ ಸಕ್ಸಸ್​ ಕಂಡಿದ್ದರು. ವೈದ್ಯರ ವೈಯಕ್ತಿಕ ಆಸ್ಥೆಯಿಂದ ಪಶು ವೈದ್ಯರು ಪಾದರಕ್ಷೆ ತಯಾರಿಸಿದ್ದು, ಇದರ ಸಹಾಯದಿಂದ ಆನೆ ಮತ್ತೆ ನಡೆಯಲು ಪ್ರಾರಂಭಿಸಿತ್ತು. ಚಿಕಿತ್ಸೆ ಮೂಲಕ ಆನೆಗೆ ಮರುಜೀವ ನೀಡಿದ ಪಶುವೈದ್ಯನ ಕಾರ್ಯಕ್ಕೆ ಪ್ರಾಣಿ ಪ್ರಿಯರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.

ಮೈಸೂರು ಜಿಲ್ಲೆಯ ಹುಣಸೂರು ವನ್ಯಜೀವಿ ವಿಭಾಗದ ದೊಡ್ಡಹರವೆ ಆನೆ ಕ್ಯಾಂಪ್​​ನಲ್ಲಿ ಕುಮಾರಿ ಎಂಬ ಹೆಣ್ಣಾನೆಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿತ್ತು. ಈ ಆನೆಯನ್ನು ಸರ್ಕಸ್​ ಕಂಪನಿ ಒಂದರಿಂದ ರಕ್ಷಣೆ ಮಾಡಿ ಕರೆ ತರಲಾಗಿತ್ತು. ಸುಮಾರು 60 ವರ್ಷ ವಯಸ್ಸಿನ ಕುಮಾರಿ ಎಂಬ ಆನೆಯ ಮುಂದಿನ ಬಲಭಾಗದ ಕಾಲಿಗೆ ಗಾಯವಾಗಿತ್ತು. ಈ ಗಾಯದಿಂದ ಆನೆ ನಡೆದಾಡುವುದಕ್ಕೂ ಸಂಕಷ್ಟಪಡುತಿತ್ತು. ನೋವಿನಿಂದಾಗಿ ಪ್ರತಿ ಹೆಜ್ಜೆಯನ್ನು ಕಷ್ಟಪಟ್ಟು ಪ್ರಯಾಸದಿಂದ ಇಡುತ್ತಿತ್ತು.

ಪಶು ವೈದ್ಯರು ಆನೆಗೆ ಚಿಕಿತ್ಸೆ ನೀಡಿ, ಶೀಘ್ರ ಗುಣಮುಖವಾಗುವಂತೆ ಕಾರ್ಯೋನ್ಮುಖವಾಗಿದ್ದರು. ಈ ಸಂದರ್ಭದಲ್ಲಿ, ಆನೆಯ ಪಾದಕ್ಕೆ ಔಷಧ ಹಾಕಿದರೂ ಆ ಔಷಧ ಮಾತ್ರ ನಿಲ್ಲುತ್ತಲೇ ಇರುತ್ತಿರಲಿಲ್ಲ. ಇದರಿಂದ ಗಾಯ ವಾಸಿಯಾಗದೇ ಆನೆ ಮತ್ತಷ್ಟು ನೋವು ಅನುಭವಿಸುವಂತೆ ಆಗಿತ್ತು. ಈ ಸಂಬಂಧ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಪಶುವೈದ್ಯ ಡಾ. ರಮೇಶ್ ಆನೆಗೆ ಪಾದರಕ್ಷೆ ತಯಾರಿಸಿದ್ದರು.

ಗಾಯಗೊಂಡ ಆನೆಯ ಬಲಭಾಗದ ಪಾದಕ್ಕೆ ವಾಹನದ ಟಯರ್​​ನ ರಬ್ಬರ್​ನಿಂದ ಪಾದರಕ್ಷೆಯನ್ನು ಸಿದ್ಧಪಡಿಸಿದ್ದಾರೆ. ಬಳಿಕ ಆನೆಯ ಪಾದಕ್ಕೆ ಕಟ್ಟಿದ್ದಾರೆ. ಇದರಿಂದಾಗಿ ಆನೆ ನಡೆಯಲು ಆರಂಭಿಸಿತ್ತು. ಈ ನಡುವೆ ಗಾಯಗೊಂಡಿರುವ ಆನೆಗೆ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದರು. ಗಾಯ ಕಡಿಮೆಯಾಗಿ ಆನೆ ನಡೆಯಲು ಆರಂಭಿಸಿದೆ ಎಂದು ಪಶುವೈದ್ಯ ಡಾ.ರಮೇಶ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಮೈಸೂರು ದಸರಾ: ಕ್ಯಾಪ್ಟನ್ ಅಭಿಮನ್ಯುಗೆ ಭಾರ ಹೊರಿಸುವ ತಾಲೀಮು ಶುರು-ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.