ETV Bharat / state

ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ಪ್ರವಾಸಿಗರ ಹುಚ್ಚಾಟ

author img

By

Published : Jul 25, 2021, 6:00 PM IST

ವೆಸ್ಲಿ ಸೇತುವೆ, ಗಗನಚುಕ್ಕಿ ಹಾಗೂ ಭರಚುಕ್ಕಿಯಲ್ಲಿ ಕಾವೇರಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಪ್ರಾಣದ ಭೀತಿ ಮರೆತ ಜನರು ರಭಸವಾಗಿ ಹರಿಯುವ ನದಿಯಲ್ಲಿ ಸೆಲ್ಪಿ ಹಾಗೂ ಫೋಟೋ ತೆಗೆದುಕೊಳ್ಳುವ ಮೂಲಕ ಚಲ್ಲಾಟವಾಡುತ್ತಿದ್ದಾರೆ.

kaveri-river-flowing-over-wellesley-bridge
ಕಾವೇರಿ ನದಿkaveri-river-flowing-over-wellesley-bridge

ಕೊಳ್ಳೇಗಾಲ: ನಿರಂತರ ಮಳೆ ಹಾಗೂ ಕಬಿನಿ ಹೊರಹರಿವು ಹೆಚ್ಚಾಗಿರುವುದ್ದರಿಂದ ಕಾವೇರಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ಐತಿಹಾಸಿಕ ವೆಸ್ಲಿ ಸೇತುವೆ, ಗಗನಚುಕ್ಕಿ ಹಾಗೂ ಭರಚುಕ್ಕಿ ವೀಕ್ಷಿಸಲು ಪ್ರವಾಸಿಗರ ದಂಡು ಆಗಮಿಸುತ್ತಿದೆ. ಧುಮ್ಮುಕ್ಕಿ ಹರಿಯುತ್ತಿರುವ ನೀರಿನಲ್ಲಿ ಸೆಲ್ಫಿಗೆ ತೆಗೆದುಕೊಳ್ಳುವ ಮೂಲಕ ಜನರು ಪ್ರಾಣದ ಜೊತೆ ಚಲ್ಲಾಟವಾಡುತ್ತಿದ್ದಾರೆ.

ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ಪ್ರವಾಸಿಗರ 'ಹುಚ್ಚಾಟ'

ಕೆಲ ವರ್ಷ ಹಿಂದಷ್ಟೆ ಕಾವೇರಿ ಪ್ರವಾಹದಿಂದಾಗಿ ವೆಸ್ಲಿ ಸೇತುವೆ ಸುಮಾರು 50 ಮೀಟರ್ ಕುಸಿದುಹೋಗಿತ್ತು. ಬಳಿಕ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಕಳೆದ ವರ್ಷವಷ್ಟೇ ದುರಸ್ತಿ ಕಾರ್ಯ ಮಾಡಲಾಗಿದೆ. ಆದರೆ, ಇದೀಗ ನಿರಂತರ ಮಳೆ ಹಾಗೂ ಕಬಿನಿ ಹೊರ ಹರಿವು ಹೆಚ್ಚಾಗಿರುವುದರಿಂದ ಕಾವೇರಿ ನದಿ ಹರಿವು ಅಧಿಕವಾಗಿದೆ.

ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ವೆಸ್ಲಿ ಸೇತುವೆ ಬಳಿ ಕಾವೇರಿ ಅಪಾಯಕಾರಿಯಾಗಿ ಹರಿಯುತ್ತಿದೆ. ಆದ್ರೆ ಇದನ್ನೆಲ್ಲ ಲೆಕ್ಕಸದ ಪ್ರವಾಸಿಗರು ಮಾತ್ರ ಸೆಲ್ಫಿ ತೆಗೆದುಕೊಳ್ಳವುದು, ಸೇತುವೆ ಕೆಳಗೆ ವಿರಮಿಸುವಂತ ದುಸ್ಸಾಸಕ್ಕೆ ಮುಂದಾಗಿದ್ದಾರೆ. ಅಲ್ಲದೆ ತಂಡೋಪತಂಡವಾಗಿ ನೀರಲ್ಲಿ ಸ್ನಾನ ಮಾಡುತ್ತ ಚೆಲ್ಲಾಟವಾಡುತ್ತಿದ್ದಾರೆ.

ನದಿ ಹೊರ ಮತ್ತು ಒಳ ಹರಿವು ಹೆಚ್ಚಾಗಿದ್ದರೂ ಸಹ ಹುಚ್ಚಾಟಕ್ಕೆ ಮುಂದಾಗಿರುವ ಜನ ಬಂಡೆ ಮೇಲೆ ನಿಂತು ಸೆಲ್ಫಿ ಹಾಗೂ ಫೋಟೋ ಕ್ಲಿಕ್ಕಿಸಿಕೊಳ್ಳುವ ಮೂಲಕ ಹುಂಬತನ ಪ್ರದರ್ಶಿಸುತ್ತಿದ್ದಾರೆ. ಆದ್ರೆ ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಂಡೂ ಕಾಣದಂತಿರುವುದು ವಿಪರ್ಯಾಸ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.