ETV Bharat / state

ಪಾದಚಾರಿಗಳಿಗೆ ಗೂಡ್ಸ್ ಆಟೋ ಡಿಕ್ಕಿ: ಯುವತಿ ಸಾವು, ಮೂವರ ಸ್ಥಿತಿ ಗಂಭೀರ

ಗೂಡ್ಸ್ ಆಟೋ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಪಾದಚಾರಿಗಳಿಗೆ ಗಭೀರ ಗಾಯಗಳಾಗಿದ್ದು, ಈ ಪೈಕಿ ಒರ್ವ ಯುವತಿ ಮೃತ‌ಪಟ್ಟಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.

womans death
ಪಾದಚಾರಿಗಳಿಗೆ ಗುದ್ದಿದ್ದ ಗೂಡ್ಸ್ ಆಟೋ: ಯುವತಿ ಸಾವು..
author img

By

Published : Sep 30, 2020, 1:43 PM IST

Updated : Sep 30, 2020, 2:30 PM IST

ಕೊಳ್ಳೇಗಾಲ: ಪಟ್ಟಣದ ಮುಂಡಿಗುಂಡ ಗ್ರಾಮದ ಕಡೆಗೆ ಕೊಳ್ಳೇಗಾಲದಿಂದ ತೆರಳುತ್ತಿದ್ದ ಗೂಡ್ಸ್ ಆಟೋ ರಸ್ತೆ ಬದಿಯಲ್ಲಿ ಸಂಚರಿಸುತ್ತಿದ್ದ ನಾಲ್ವರು ಪಾದಚಾರಿ ಮಹಿಳೆಯರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಓರ್ವ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.

ಪಾದಚಾರಿಗಳಿಗೆ ಗುದ್ದಿದ ಗೂಡ್ಸ್ ಆಟೋ: ಯುವತಿ ಸಾವು..

ಪಟ್ಟಣದ ಮುಡಿಗುಂಡ ಗ್ರಾಮದವರಾದ ನಿವೇದಿತಾ(38), ಪವಿತ್ರ(36), ರಕ್ಷಿತಾ(12), ಪವಿತ್ರ(21) ಅಪಘಾತಕ್ಕೊಳಗಾದವರು. ಈ ನಾಲ್ವರ ಪೈಕಿ ಯುವತಿ ಪವಿತ್ರ (21)ಮೃತಪಟ್ಟಿದ್ದಾಳೆ.

ಇಲ್ಲಿನ ಮುಡಿಗುಂಡ ಗ್ರಾಮದಲ್ಲಿರುವ ಮುಳ್ಳಾಚ್ಚಮ್ಮ ದೇವಾಲಯಕ್ಕೆ ಪೂಜೆಗೆಂದು ತೆರಳುತ್ತಿದ್ದ ನಿವೇದಿತಾ, ಪವಿತ್ರ, ರಕ್ಷಿತಾ, ಪವಿತ್ರ (21) ಎಂಬುವರು ಪಾದಚಾರಿ ಮಾರ್ಗದಲ್ಲಿ ಹೋಗುತ್ತಿದ್ದರು. ಈ ವೇಳೆ ಕೊಳ್ಳೇಗಾಲದ ಕಡೆಯಿಂದ ಬಂದ ಗೂಡ್ಸ್ ಆಟೋ ಡಿಕ್ಕಿ ಹೊಡೆದ ಪರಿಣಾಮ ನಾಲ್ವರಿಗೂ ತೀವ್ರ ಪೆಟ್ಟಾಗಿದೆ. ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿ ಪವಿತ್ರ(21) ಅಸುನೀಗಿದ್ದಾಳೆ. ಉಳಿದ ಮೂವರ‌ ಪರಿಸ್ಥಿತಿ ಗಭೀರವಾಗಿದ್ದು, ಜೆಎಸ್ ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

Last Updated : Sep 30, 2020, 2:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.