ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದ ಕರಡಿಕಲ್ಲು ಬೆಟ್ಟದ ಬಳಿ ಬೆಂಕಿ ಬಿದ್ದು ಅಪಾರ ಪ್ರಮಾಣದ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ.
ಬೇರಂಬಾಡಿ ಗ್ರಾಮದ ದಕ್ಷಿಣ ಭಾಗದಲ್ಲಿ ಕಾಣಿಸಿಕೊಂಡ ಬೆಂಕಿ ಪಶ್ಚಿಮಾಭಿಮುಖವಾಗಿ ಬೀಸಿದ ಗಾಳಿಯ ವೇಗಕ್ಕೆ ಇನ್ನಷ್ಟು ಹರಡಿದೆ. ಹೀಗಾಗಿ ಕರಡಿಕಲ್ಲು ಗುಡ್ಡಕ್ಕೆ ಬೆಂಕಿ ವ್ಯಾಪಿಸಿ, ಹತ್ತಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ.
ವಿಷಯ ತಿಳಿದ ಅರ್ಧತಾಸಿನಲ್ಲಿ ವಿವಿಧ ವಲಯಗಳ ವಲಯ ಅರಣ್ಯಾಧಿಕಾರಿಗಳು, ಡಿಆರ್ಎಫ್ಒ, ನೌಕರರು ಸೇರಿ 240 ಮಂದಿ ಕಾರ್ಯಪೃವೃತ್ತರಾಗಿ ಫೈರ್ ಬೀಟರ್, ಹಸಿರು ಸೊಪ್ಪು ಬಳಸಿ ಬೆಂಕಿ ನಂದಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆಂಕಿ ಪಶ್ಚಿಮ ಭಾಗದ ದಟ್ಟ ಕಾಡಿನತ್ತ ವ್ಯಾಪಿಸುವುದು ಸಕಾಲಿಕ ಕ್ರಮಗಳಿಂದ ತಪ್ಪಿದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಅತ್ಯಧಿಕ 43,183 ಕೋವಿಡ್ ಕೇಸ್; ಮುಂಬೈನಲ್ಲೇ 8,646 ಪ್ರಕರಣ!