ETV Bharat / state

ಚಾಮರಾಜನಗರ : ಕೌಶಲ ವಿಕಾಸ್ ಯೋಜನೆಯಡಿ ನೀಡಲಾಗುವ ತರಬೇತಿಗೆ ಚಾಲನೆ - ಕೌಶಲ ವಿಕಾಸ್ ಯೋಜನೆಯಡಿ ತರಬೇತಿ

ಒಟ್ಟು 6 ಜಾಬ್‍ರೋಲ್‍ಗಳಿಗೆ ಜಿಲ್ಲೆಯಲ್ಲಿ 474 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಒಟ್ಟು 332 ಗುರಿಯಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಉದ್ಯೋಗವಾರು ಬೇಡಿಕೆ ಪಟ್ಟಿ ಪಡೆಯಲಾಗಿದೆ..

Drive for training offered under PM Kaushal Vikas Yojana
ಕೌಶಲ ವಿಕಾಸ್ ಯೋಜನೆಯಡಿ ನೀಡಲಾಗುವ ತರಬೇತಿಗೆ ಚಾಲನೆ
author img

By

Published : Jun 18, 2021, 4:58 PM IST

ಚಾಮರಾಜನಗರ : ಕೌಶಲ ವಿಕಾಸ್ ಯೋಜನೆಯ ಆರೋಗ್ಯ ವಲಯದಡಿ ನೀಡಲಾಗುವ ತರಬೇತಿಗೆ ವರ್ಚುವಲ್​ ವೇದಿಕೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು. ಪ್ರಧಾನಮಂತ್ರಿ ಕೌಶಲ ವಿಕಾಸ್ ಯೋಜನೆ 3.0 ಕಾರ್ಯಕ್ರಮದಡಿ ಕೋವಿಡ್ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ವಿವಿಧ 6 ವಿಷಯಗಳಲ್ಲಿ ಕೌಶಲ್ಯ ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ. ದೇಶದ 26 ಜಿಲ್ಲೆಗಳ 111 ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತದೆ. ಕರ್ನಾಟಕ ರಾಜ್ಯದಿಂದ ಈ ತರಬೇತಿಗೆ ಆಯ್ಕೆಯಾಗಿರುವ ಏಕೈಕ ಜಿಲ್ಲೆ ಚಾಮರಾಜನಗರವಾಗಿದೆ.

ಕೌಶಲ ವಿಕಾಸ್ ಯೋಜನೆಯಡಿ ನೀಡಲಾಗುವ ತರಬೇತಿಗೆ ಚಾಲನೆ

ಚಾಮರಾಜನಗರದ ಕೆ ಪಿ ಮೊಹಲ್ಲಾದಲ್ಲಿರುವ ಭರಣಿ ಫೌಂಡೇಶನ್ ತರಬೇತಿ ಕೇಂದ್ರದಲ್ಲಿ 6 ಜಾಬ್ ರೋಲ್‍ಗಳ ಪೈಕಿ ಜನರಲ್ ಡ್ಯೂಟಿ ಅಸಿಸ್ಟೆಂಟ್ ತರಬೇತಿಗೆ ಮೊದಲ ಹಂತದಲ್ಲಿ 40 ಅಭ್ಯರ್ಥಿಗಳಿಗೆ 21 ದಿನಗಳ ತರಬೇತಿ ಆರಂಭವಾಗಲಿದೆ. ಸದ್ಯದ ಸನ್ನಿವೇಶ ಆಧರಿಸಿ ರೂಪಿಸಲಾಗಿರುವ ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಷಿಯನ್ (ಬೇಸಿಕ್), ಜನರಲ್ ಡ್ಯೂಟಿ ಅಸಿಸ್ಟೆಂಟ್, ಜಿಡಿಎ-ಅಡ್ವಾನ್ಸ್ಡ್(ಕ್ರಿಟಿಕಲ್ ಕೇರ್), ಹೋಂ ಹೆಲ್ತ್ ಎಡ್​​, ಮೆಡಿಕಲ್ ಎಕ್ವಿಪ್‍ಮೆಂಟ್ ಟೆಕ್ನಾಲಜಿ ಅಸಿಸ್ಟೆಂಟ್, ಫ್ಲೆಬೋಟೊಮಿಸ್ಟ್ ಈ ಜಾಬ್‍ರೋಲ್‍ಗಳಿಗೆ ತರಬೇತಿ ನೀಡಲಾಗುತ್ತಿದೆ.

ಒಟ್ಟು 6 ಜಾಬ್‍ರೋಲ್‍ಗಳಿಗೆ ಜಿಲ್ಲೆಯಲ್ಲಿ 474 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಒಟ್ಟು 332 ಗುರಿಯಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಉದ್ಯೋಗವಾರು ಬೇಡಿಕೆ ಪಟ್ಟಿ ಪಡೆಯಲಾಗಿದೆ.

ಇದನ್ನೂ ಓದಿ: ಸೋಂಕಿತರ ಜೊತೆ ಇರಲು ಅವಕಾಶ ನೀಡಿ: ಮೆಗ್ಗಾನ್ ಆಸ್ಪತ್ರೆ ಮುಂದೆ ಪ್ರತಿಭಟನೆ

ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 3 ತರಬೇತಿ ಕೇಂದ್ರಗಳನ್ನು ಗುರುತಿಸಿ ಜಾಬ್‍ರೋಲ್‍ಗಳಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಜೆಎಸ್‌ಎಸ್ ನರ್ಸಿಂಗ್ ಕಾಲೇಜಿನಲ್ಲಿ ಜನರಲ್ ಡ್ಯೂಟಿ ಅಸಿಸ್ಟೆಂಟ್, ಹೋಂ ಹೆಲ್ತ್ ಎಡ್, ಭರಣಿ ಫೌಂಡೇಶನ್​ನಲ್ಲಿ ಜನರಲ್ ಡ್ಯೂಟಿ ಅಸಿಸ್ಟೆಂಟ್, ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಷಿಯನ್ (ಬೇಸಿಕ್), ಜನರಲ್ ಡ್ಯೂಟಿ ಅಸಿಸ್ಟೆಂಟ್, ಜಿಡಿಎ-ಅಡ್ವಾನ್ಸ್ಡ್(ಕ್ರಿಟಿಕಲ್ ಕೇರ್), ಹೋಂ ಹೆಲ್ತ್ ಎಡ್, ಮೆಡಿಕಲ್ ಎಕ್ವಿಪ್‍ಮೆಂಟ್ ಟೆಕ್ನಾಲಜಿ ಅಸಿಸ್ಟೆಂಟ್, ಫ್ಲೆಬೋಟೊಮಿಸ್ಟ್ ಜಾಬ್‍ರೋಲ್ ತರಬೇತಿ ನೀಡಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.