ETV Bharat / state

ಶತ ಕೋಟ್ಯಧಿಪತಿ ಬಳಿ ಕಾರಿಲ್ಲ:  ಹಾಲಿ ಶಾಸಕರಿಗೆ ಇದೆಯಂತೆ 8 ಕೋಟಿ ಸಾಲ

author img

By

Published : Apr 17, 2023, 7:31 PM IST

ಚಾಮರಾಜನಗರದಲ್ಲಿ ಬಿಜೆಪಿ, ಕಾಂಗ್ರೆಸ್​ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಅಫಿಡವಿಟ್​ನಲ್ಲಿ ತಮ್ಮ ಆಸ್ತಿ ವಿವರ ಘೋಷಿಸಿದ್ದಾರೆ.

ನಾಮಿನೇಷನ್ ಸಲ್ಲಿಕೆ
ನಾಮಿನೇಷನ್ ಸಲ್ಲಿಕೆ
ಉಮೇದುವಾರಿಕೆಯಲ್ಲೇ ಬಲ ಪ್ರದರ್ಶನ ಮಾಡಿದ ಅಭ್ಯರ್ಥಿಗಳು

ಚಾಮರಾಜನಗರ : ಇಂದು ಚಾಮರಾಜನಗರ ಜಿಲ್ಲೆಯಲ್ಲಿ ನಾಮಿನೇಷನ್ ಜಾತ್ರೆಯೇ ನಡೆದಿದೆ. ಶುಭ ಮುಹೂರ್ತದಲ್ಲಿ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಅಫಿಡವಿಟ್​ನಲ್ಲಿ ತಮ್ಮ ಆಸ್ತಿ ವಿವರವನ್ನು ಘೋಷಣೆ ಮಾಡಿಕೊಂಡಿದ್ದು, ಪ್ರಮುಖ ಅಭ್ಯರ್ಥಿಗಳ ಆಸ್ತಿ, ಸಾಲ ಅಚ್ಚರಿ ತರಿಸಿದೆ.

ಶತ ಕೋಟ್ಯಧಿಪತಿ ಮಂಜುನಾಥ್: ಹನೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಅವರಿಂದು ನಾಮಪತ್ರ ಸಲ್ಲಿಸಿದ್ದು, ಒಟ್ಟು ಚರಾಸ್ಥಿ ತಮ್ಮ ಬಳಿ 53,09,15,860 ರೂ ಇದ್ದು ಪತ್ನಿ ಬಳಿ 6,43,13,235 ‌ಮಗಳ ಬಳಿ 16,51,151 ರೂ. ಹಾಗೂ ಮಗನ ಹತ್ತಿರ 61,132 ರೂ. ಮೌಲ್ಯದ ಚರಾಸ್ಥಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.

ನಾಮಪತ್ರ ಸಲ್ಲಿಕೆ
ನಾಮಪತ್ರ ಸಲ್ಲಿಕೆ

ಸ್ವಯಾರ್ಜಿತವಾಗಿ 123,32,45,833 ಆಸ್ತಿ ಇದ್ದು, ಪಿತ್ರಾರ್ಜಿತವಾಗಿ 62 ಕೋಟಿ ಮೌಲ್ಯದ ಆಸ್ತಿ ಬಂದಿದೆ. ಪತ್ನಿಗೂ ಕೂಡ ಪಿತ್ರಾರ್ಜಿತವಾಗಿ 71.5 ಕೋಟಿ ಮೌಲ್ಯದ ಆಸ್ತಿ ಇದೆ. ಅಭ್ಯರ್ಥಿ ಮಂಜುನಾಥ್ ಅವರಿಗೆ 59 ಕೋಟಿ ಸಾಲವಿದ್ದು, ಪತ್ನಿಗೆ 1 ಕೋಟಿ ರೂ. ನಷ್ಟು ಸಾಲ ಇದೆ ಎಂದು ತಿಳಿಸಿದ್ದಾರೆ.

ಇನ್ನು ಚರಾಸ್ತಿ ವಿಚಾರಕ್ಕೆ ಬಂದರೆ ಶತ ಕೋಟ್ಯಧಿಪತಿ ಮಂಜುನಾಥ್ ಹೆಸರಿನಲ್ಲಿ ಯಾವುದೇ ಕಾರು ಮತ್ತಿತರ ವಾಹನಗಳಿಲ್ಲ. ಅವರ ಮಗಳ ಬಳಿ ಒಂದು ಕಾರಿದೆ. ತಮ್ಮ ಬಳಿ 500 ಗ್ರಾಂ ಚಿನ್ನ, 3 ಕೆಜಿಯಷ್ಟು ಬೆಳ್ಳಿ ಇದ್ದು, ಪತ್ನಿ ಹೆಸರಿನಲ್ಲಿ 600 ಗ್ರಾಂ ಚಿನ್ನ, 3 ಕೆಜಿ ಬೆಳ್ಳಿ, ಮಗಳ ಬಳಿ 100 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ ಇದೆ ಎಂದು ಉಮೇದುವಾರಿಕೆ ವೇಳೆ ಘೋಷಣೆ ಮಾಡಿಕೊಂಡಿದ್ದಾರೆ.

ರೋಡ್ ಶೋ ನಡೆಸಿದ ಅಭ್ಯರ್ಥಿಗಳು
ರೋಡ್ ಶೋ ನಡೆಸಿದ ಅಭ್ಯರ್ಥಿಗಳು

ಪ್ರೀತಮ್​ ನಾಗಪ್ಪ: ಹನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರೀತನ್ ನಾಗಪ್ಪ 1.45 ಕೋಟಿ ಸ್ವಯಾರ್ಜಿತ 1.67 ಕೋಟಿ ಪಿತ್ರಾರ್ಜಿತ ಆಸ್ತಿ ಘೋಷಣೆ ಮಾಡಿಕೊಂಡಿದ್ದು, ಪತ್ನಿ ಬಳಿ 35 ಲಕ್ಷ ಸ್ವಯಾರ್ಜಿತ ಆಸ್ತಿ ಹಾಗೂ 40 ಲಕ್ಷ ಪಿತ್ರಾರ್ಜಿತ ಆಸ್ತಿ ಇರುವುದಾಗಿ ತಿಳಿಸಿದ್ದಾರೆ. ಇನ್ನು, ತಮಗೆ 42 ಲಕ್ಷ ರೂ. ಸಾಲವಿದ್ದು, ಪತ್ನಿ 49 ಸಾಲ ಮಾಡಿದ್ದಾರೆ ಎಂದಿದ್ದಾರೆ.

ಪ್ರಸ್ತುತ ಮಾರುಕಟ್ಟೆ ಮೌಲ್ಯದ ಇರುವ ಸ್ಥಿರಾಸ್ಥಿ 3,12,52,000 ರೂ. ಇದ್ದು, ಪತ್ನಿ ಬಳಿ 75 ಲಕ್ಷ ಮೌಲ್ಯದ ಆಸ್ತಿ ಇದೆ. ತಮ್ಮ ಬಳಿ ಟ್ರ್ಯಾಕ್ಟರ್ ಹಾಗೂ ಕಾರು, ಪತ್ನಿ ಬಳಿ ಕಾರಿದ್ದು, ಇಬ್ಬರ ಹತ್ತಿರವೂ ಸೇರಿದಂತೆ 2.5 ಕೆಜಿ ಬೆಳ್ಳಿ, 900 ಗ್ರಾಂ ನಷ್ಟು ಚಿನ್ನ ಹೊಂದಿದ್ದಾರೆ. ಇದರ ಜೊತೆ ಕೈಯಲ್ಲಿ 2 ಲಕ್ಷ ನಗದು ಇದ್ದು ಪತ್ನಿ ಬಳಿ 1 ಲಕ್ಷ ರೂ. ಇದೆ ಎಂದು ಉಮೇದುವಾರಿಕೆಯಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ.

ಸಿ.ಪುಟ್ಟರ‌ಂಗಶೆಟ್ಟಿ: ಸತತ ಮೂರು ಬಾರಿ ಜಯಗಳಿಸಿ ನಾಲ್ಕನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಚಾಮರಾಜನಗರದ ಹಾಲಿ ಶಾಸಕ ಸಿ ಪುಟ್ಟರಂಗಶೆಟ್ಟಿ ಇಂದು ಉಮೇದುವಾರಿಕೆ ಸಲ್ಲಿಸಿದ್ದಾರೆ. ತಮ್ಮ ಕೈಯಲ್ಲಿ ಒಟ್ಟು 10 ಲಕ್ಷ ರೂ. ನಗದು ಇದ್ದು, ಪತ್ನಿ ಮತ್ತು ಇಬ್ಬರ ಮಕ್ಕಳ ಕೈಯಲ್ಲಿ ಒಂದೂವರೆ ಲಕ್ಷ ಹಣ ಇದೆ ಎಂದು ತಿಳಿಸಿದ್ದಾರೆ.

ತಮ್ಮ ಹೆಸರಿನಲ್ಲಿ 1 ಟ್ರ್ಯಾಕ್ಟರ್, 1 ಬೈಕ್, 2 ಕಾರಿದ್ದು ಇಬ್ಬರ ಮಕ್ಕಳು ಒಂದೊಂದು ಕಾರನ್ನು ಹೊಂದಿದ್ದಾರೆ. ತಮ್ಮಲ್ಲಿ 58 ಗ್ರಾಂ ಚಿನ್ನ, 1.7 ಲಕ್ಷ ಮೌಲ್ಯದ ವಾಚ್ ಇದೆ. ಪತ್ನಿ ಬಳಿ 127 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ, ಹಿರಿಯ ಪುತ್ರನ ಬಳಿ 125 ಗ್ರಾಂ ಚಿನ್ನ, ಕಿರಿಯ ಪುತ್ರನ ಬಳಿ 45 ಗ್ರಾಂ ಚಿನ್ನ ಇದೆ. ಚರಾಸ್ಥಿಗಳ ಒಟ್ಟು ಮೌಲ್ಯ ತಮ್ಮ ಬಳಿ 79.55 ಲಕ್ಷ, ಪತ್ನಿ ಬಳಿ 8.96 ಸಾವಿರ ಮೌಲ್ಯದ ವಸ್ತುಗಳಿವೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ.

ಸ್ಥಿರಾಸ್ತಿಗಳು ತಮ್ಮ ಹೆಸರಿನಲ್ಲಿ 8.74 ಕೋಟಿ ರೂ. ಮೌಲ್ಯದಷ್ಟಿದ್ದು ಪತ್ನಿ ಹೆಸರಿನಲ್ಲಿ 3 ಕೋಟಿ, ಹಿರಿಯ ಮಗನ ಬಳಿ 92 ಲಕ್ಷ, ಕಿರಿಯ ಮಗನ ಬಳಿ 25 ಲಕ್ಷ ಮೌಲ್ಯದ ಸ್ಥಿರಾಸ್ಥಿ ಇದೆ. ಜೊತೆಗೆ, ಜಂಟಿ ಖಾತೆಯಲ್ಲಿ 4.52 ಕೋಟಿ ಸಾಲ ಇದ್ದು ತಮ್ಮ ಹೆಸರಿನಲ್ಲಿ 3.57 ಕೋಟಿ ಸಾಲ ಇದೆ, ತಮಗೆ ಒಟ್ಟು 8.9 ಕೋಟಿ ರೂ. ನಷ್ಟು ಸಾಲ ಇದೆ ಎಂದು ಎಂದು ತಿಳಿಸಿದ್ದಾರೆ.

ಹ ರಾ ಮಹೇಶ್: ಚಾಮರಾಜನಗರ ಕ್ಷೇತ್ರದಿಂದ ಬಿಎಸ್​ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹ ರಾ ಮಹೇಶ್ ಇಂದು ಉಮೇದುವಾರಿಕೆ ಸಲ್ಲಿಸಿದ್ದು, ತಮ್ಮ ಕೈಯಲ್ಲಿ 1 ಲಕ್ಷ ನಗದು, 2 ಕಾರು ಒಂದು ಬೈಕ್, 18 ಗ್ರಾಂ ಚಿನ್ನ ಸೇರಿದಂತೆ ಒಟ್ಟು ಚರಾಸ್ಥಿ 17.25 ಲಕ್ಷದ್ದಾಗಿದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ವಿವಿಧ ಬ್ಯಾಂಕ್​ಗಳಲ್ಲಿ 31 ಲಕ್ಷ ಸಾಲ ಇದೆ ಎಂತಲೂ ತಿಳಿಸಿದ್ದಾರೆ.

ನಾಮಿನೇಷನ್ ಭರಾಟೆ: ಉಮೇದುವಾರಿಕೆಯಲ್ಲೇ ಬಲ ಪ್ರದರ್ಶನ ಮಾಡಿದ ಅಭ್ಯರ್ಥಿಗಳು: ರೋಡ್ ಶೋ ಮೂಲಕ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸುವ ಮೂಲಕ ಚಾಮರಾಜನಗರ ಜಿಲ್ಲೆಯಲ್ಲಿ ನಾಮಿನೇಷನ್​ನಲ್ಲೇ ಹುರಿಯಾಳುಗಳು ಬಲ ಪ್ರದರ್ಶನ ಮಾಡಿದರು.

ಚಾಮರಾಜನಗರದ ಕಾಂಗ್ರೆಸ್ ಅಭ್ಯರ್ಥಿ, ನಾಲ್ಕನೇ ಗೆಲುವಿಗಾಗಿ ಕಾಯುತ್ತಿರುವ ಸಿ ಪುಟ್ಟರಂಗಶೆಟ್ಟಿ ಚಾಮರಾಜೇಶ್ವರ, ಗಣಪತಿ ದೇವಾಲಯಕ್ಕೆ ತೆರಳಿ ‌ಪೂಜೆ ಸಲ್ಲಿಸಿ 10 ಸಾವಿರದಷ್ಟು ಬೆಂಬಲಿಗರೊಂದಿಗೆ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಿದರು.

ಕೊಳ್ಳೇಗಾಲದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಸ್ಪರ್ಧೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ ಆರ್ ಕೃಷ್ಣಮೂರ್ತಿ ಪಾದಯಾತ್ರೆ ನಡೆಸಿ ಮಂಗಳವಾದ್ಯಗಳ ಮೂಲಕ ತಾಲೂಕು ಕಚೇರಿಗೆ ತೆರಳಿ ನಾಮಿನೇಷನ್ ಫೈಲ್ ಮಾಡಿದ್ದಾರೆ. ಗುಂಡ್ಲುಪೇಟೆಯಲ್ಲಿ ಹಾಲಿ ಶಾಸಕ ಸಿ.ಎಸ್.ನಿರಂಜನಕುಮಾರ್ ಕೂಡ ನಾಮಪತ್ರ ಸಲ್ಲಿಕೆ ವೇಳೆ ಬಲ ಪ್ರದರ್ಶನ ಮಾಡಿದ್ದು, ಭರ್ಜರಿ ರೋಡ್ ಶೋ ನಡೆಸಿದ್ದಾರೆ.

ಹನೂರಿನಲ್ಲಿ ಹಾಲಿ ಕಾಂಗ್ರೆಸ್ ಶಾಸಕ ನರೇಂದ್ರ ಪುತ್ರ ನವನೀತ್ ಗೌಡ ಪಕ್ಷೇತರನಾಗಿ ನಾಮಪತ್ರ ಸಲ್ಲಿಸಿದ್ದಾರೆ. ‌ಜೊತೆಗೆ, ಬಿಜೆಪಿ ಹುರಿಯಾಳು ಪ್ರೀತಮ್​ ಗೌಡ, ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಕೂಡ ಬಲ ಪ್ರದರ್ಶನ ಮಾಡಿ ನಾಮಪತ್ರ ಸಲ್ಲಿಸಿದ್ದು, ಹನೂರಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಕೊಳ್ಳೇಗಾಲದಲ್ಲಿ ಬಂಡಾಯ ಅಭ್ಯರ್ಥಿ ಕಣಕ್ಕೆ: ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಸಿಗದಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಿನಕಹಳ್ಳಿ ರಾಚಯ್ಯ ಇಂದು ಸಾವಿರಾರು ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ. ಕೊಳ್ಳೇಗಾಲ ಕ್ಷೇತ್ರದಲ್ಲಿ ತನ್ನದೇ ಆದ ಹಿಡಿತ ಹೊಂದಿರುವ ರಾಚಯ್ಯ ಬಂಡಾಯ ಎದ್ದಿರುವುದು ಬಿಜೆಪಿಗೆ ಬಿಸಿ ತುಪ್ಪವಾಗಲಿದೆ.

ಇದನ್ನೂ ಓದಿ: ಶಾಮನೂರು ಶಿವಶಂಕರಪ್ಪ, ಪುತ್ರ ಮಲ್ಲಿಕಾರ್ಜುನ್, ಜಗಳೂರು ಶಾಸಕ ರಾಮಚಂದ್ರ ನಾಮಿನೇಷನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.