ಚಾಮರಾಜನಗರ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ರೋಜರ್ ಬಿನ್ನಿ ಅವರು ಕೃಷಿಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವುದು ವಿಷಯ ಗೊತ್ತಿರುವಂಥದ್ದೇ. ಇದರ ಜೊತೆಗೆ ಅವರು ಬೀದಿನಾಯಿಗಳ ಮೇಲೂ ವಿಶೇಷ ಅಕ್ಕರೆ ಹೊಂದಿದ್ದು, ಆಹಾರ, ಔಷಧ ನೀಡುವ ಮೂಲಕ ಪ್ರಾಣಿ ಪ್ರೀತಿ ಮೆರೆಯುತ್ತಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಜಮೀನು ಖರೀದಿಸಿ ಕೃಷಿ ನಡೆಸುತ್ತಿರುವ ಬಿನ್ನಿ, ತಾವು ಇಲ್ಲಿಗೆ ಬಂದಾಗಲೆಲ್ಲ ಬೀದಿನಾಯಿಗಳಿಗೆ ಆಹಾರ ನೀಡುವರು. ಕೆಲ ದಿನಗಳ ಹಿಂದಷ್ಟೇ, ಬೀದಿನಾಯಿಗಳಿಗೆ ಚುಚ್ಚುಮದ್ದು ಹಾಕಿಸಿದ್ದರು. ತಾವು ಕೃಷಿ ಭೂಮಿಗೆ ತೆರಳುವ ಮಾರ್ಗಮಧ್ಯೆ ಸಿಗುವ ಬೀದಿನಾಯಿಗಳಿಗೆ ಆಹಾರ ನೀಡುತ್ತಾ ಸಾಗುವ ಬಿನ್ನಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
2023ರ ಜೂನ್ ತಿಂಗಳ ಸಂದರ್ಭದಲ್ಲಿ ಗುಂಡ್ಲುಪೇಟೆ ಮತ್ತು ಮೈಸೂರು ರಸ್ತೆಯಲ್ಲಿರುವ ಮಹೀಂದ್ರಾ ಟ್ರಾಕ್ಟರ್ ಶೋರೂಂನಲ್ಲಿ ಬಿನ್ನಿ ಟ್ರಾಕ್ಟರ್ ಖರೀದಿಸಿದ್ದರು. ಈ ವೇಳೆ ಮಾತನಾಡಿದ್ದ ಅವರು, ನಮ್ಮ ಪೂರ್ವಿಕರು ಕೃಷಿಕರಲ್ಲ. ನಾನು ಇತ್ತೀಚೆಗೆ ಕೃಷಿ ಮೇಲೆ ಉತ್ಸಾಹ ಹೊಂದಿದ್ದೇನೆ. ಗುಂಡ್ಲುಪೇಟೆಯ ಸಮೀಪದಲ್ಲಿ ಜಮೀನು ಖರೀದಿಸಿದ್ದೇನೆ. ಈಗ ಶೋ ರೂಂನಲ್ಲಿ ಟ್ರಾಕ್ಟರ್ ಖರೀದಿ ಮಾಡಿರುವುದು ತುಂಬಾ ಖುಷಿ ತಂದಿದೆ ಎಂದಿದ್ದರು.
ಇದನ್ನೂ ಓದಿ: Roger Binny: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಸೋಲು; ಬಿಸಿಸಿಐ ಬಾಸ್ ರೋಜರ್ ಬಿನ್ನಿ ಕೊಟ್ಟ ಕಾರಣ ಹೀಗಿತ್ತು..