ETV Bharat / state

ಕೊರೊನಾ ಭೀತಿ: ಸಂಜೆ ನಂತರ ಚಾಮರಾಜನಗರದಲ್ಲಿ ಅಘೋಷಿತ ಲಾಕ್​ಡೌನ್..! - ಚಾಮರಾಜನಗರದಲ್ಲಿ ಅಘೋಷಿತ ಲಾಕ್​ಡೌನ್

ವ್ಯಾಪಾರ ವಹಿವಾಟವನ್ನು ಬಂದ್ ಮಾಡುವುದರಿಂದ ಜಿಲ್ಲಾಕೇಂದ್ರದಲ್ಲಿ 6 ರ ಬಳಿಕ ಓಡಾಟ ಬಹಳ‌ ವಿರಳವಾಗುತ್ತಿದ್ದು, ಅಘೋಷಿತ ಲಾಕ್​ಡೌನ್ ರೀತಿ ಜನರು ವರ್ತಿಸುತ್ತಿದ್ದಾರೆ.

Chamarajanagar
ಕೊರೊನಾ ಭೀತಿ: ಸಂಜೆ ನಂತರ ಚಾಮರಾಜನಗರದಲ್ಲಿ ಅಘೋಷಿತ ಲಾಕ್​ಡೌನ್
author img

By

Published : Jun 26, 2020, 8:27 PM IST

ಚಾಮರಾಜನಗರ: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಪರಿಣಾಮ ಸಂಜೆ 6 ಬಳಿಕ ಜಿಲ್ಲಾಕೇಂದ್ರದಲ್ಲಿ ಅಘೋಷಿತ ಲಾಕ್​ಡೌನ್ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊರೊನಾ ಭೀತಿ: ಸಂಜೆ ನಂತರ ಚಾಮರಾಜನಗರದಲ್ಲಿ ಅಘೋಷಿತ ಲಾಕ್​ಡೌನ್

ಪೊಲೀಸರು ಹಾಗೂ ನಗರಸಭೆ ಅಧಿಕಾರಿಗಳು ಸಂಜೆ 6 ಆಗುತ್ತಿದ್ದಂತೆ ಡಿಸಿ ಆದೇಶದಂತೆ ಅಗತ್ಯ ವಸ್ತುಗಳ ಮಾರಾಟ ಬಿಟ್ಟು ಎಲ್ಲಾ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಿಸುತ್ತಿರುವ ಜೊತೆಗೆ ಅನಗತ್ಯವಾಗಿ ಓಡಾಡುವರಿಗೆ ಚುರುಕು ಮುಟ್ಟಿಸುತ್ತಿದ್ದಾರೆ.

ವ್ಯಾಪಾರ ವಹಿವಾಟವನ್ನು ಬಂದ್ ಮಾಡುವುದರಿಂದ ಜಿಲ್ಲಾಕೇಂದ್ರದಲ್ಲಿ 6 ರ ಬಳಿಕ ಓಡಾಟ ಬಹಳ‌ ವಿರಳವಾಗುತ್ತಿದ್ದು, ಅಘೋಷಿತ ಲಾಕ್​ಡೌನ್ ರೀತಿ ಜನರು ವರ್ತಿಸುತ್ತಿದ್ದಾರೆ.‌ ಆದರೂ, ಹಗಲಿನಲ್ಲಿ ಸಾಮಾನ್ಯವಾಗಿ ಎಲ್ಲರೂ ಮಾಸ್ಕ್ ಧರಿಸುತ್ತರಾದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರೆಯುತ್ತಿದ್ದಾರೆ. ಈ ಕುರಿತು ನಗರಸಭೆ ಅರಿವು ಮೂಡಿಸಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.