ಚಾಮರಾಜನಗರ: ಸಿವಿಲ್ ಗುತ್ತಿಗೆದಾರನಿಂದ ಒಂದು ಲಕ್ಷ ರೂ. ಲಂಚ ಪಡೆಯುವಾಗ ಚಾಮರಾಜನಗರದ ಇಬ್ಬರು ಎಂಜಿನಿಯರ್ಗಳು ಎಸಿಬಿ ಬಲೆಗೆ ಬಿದ್ದಿರುವ ಘಟನೆ ಮೈಸೂರಿನ ಸಿದ್ಧಾರ್ಥ ಲೇಔಟ್ನಲ್ಲಿ ನಡೆದಿದೆ.
ಚಾಮರಾಜನಗರ ಎಇ ರಾಜಶೇಖರ್ ಹಾಗೂ ಎಇಇ ಶ್ಯಾಮಸುಂದರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳು. ದೊಡ್ಡರಾಯಪೇಟೆ ಏರಿ ದುರಸ್ತಿ ಕಾಮಗಾರಿಯ 3.5 ಲಕ್ಷ ರೂ. ಬಿಲ್ ಪಾಸ್ ಮಾಡಲು ಈ ಇಬ್ಬರು ಎಂಜಿನಿಯರ್ಗಳು ಒಂದು ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗ್ತಿದೆ.
ಇದನ್ನೂ ಓದಿ: ಸರ್ಕಾರಿ ಪದವಿ ಕಾಲೇಜುಗಳಿಗೆ ಪ್ರಭಾರಿ ಪ್ರಾಂಶುಪಾಲರ ನೇಮಕ, ಉಪನ್ಯಾಸಕರ ವರ್ಗಾವಣೆಗೆ ಮತ್ತೆ ಚಾಲನೆ
ಅಧಿಕಾರಿಗಳ ಲಂಚದಾಹಕ್ಕೆ ಬೇಸತ್ತ ಗುತ್ತಿಗೆದಾರ ಎಸಿಬಿ ಪೊಲೀಸರಿಗೆ ದೂರು ಕೊಟ್ಟು ಇಬ್ಬರನ್ನೂ ಖೆಡ್ಡಾಕ್ಕೆ ಬೀಳಿಸಿದ್ದಾನೆ. ಸದ್ಯ, ಇಬ್ಬರು ಅಧಿಕಾರಿಗಳನ್ನು ಬಂಧಿಸಿರುವ ಅಧಿಕಾರಿಗಳು ಲಂಚದ ಹಣವನ್ನು ವಶಪಡಿಸಿಕೊಂಡು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.