ಚಾಮರಾಜನಗರ: ಜಿಲ್ಲೆಯಲ್ಲಿಂದು 51 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 2015ಕ್ಕೆ ಏರಿಕೆಯಾಗಿದೆ ಮತ್ತು ಸೋಂಕಿಗೆ ತುತ್ತಾಗಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಕೊಳ್ಳೇಗಾಲದ 68 ವರ್ಷದ ವೃದ್ಧೆಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ. ಕೊಳ್ಳೇಗಾಲದ ಹೊಸ ಅಣಗಳ್ಳಿ ಗ್ರಾಮದ 85 ವರ್ಷದ ವೃದ್ಧ ಗುರುವಾರ ಮೃತಪಟ್ಟಿದ್ದು ಎರಡು ದಿನದ ಬಳಿಕ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕೋವಿಡ್ ಹಾಗೂ ಕೋವಿಡೇತರ ಕಾರಣದಿಂದಾಗಿ ಈವರೆಗೆ ಒಟ್ಟು 35 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಇಂದು 60 ಮಂದಿ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 492 ಆಗಿದೆ. ಐಸಿಯುನಲ್ಲಿ 36 ಸೋಂಕಿತರು ದಾಖಲಾಗಿದ್ದು, 189 ಮಂದಿ ಹೋಂ ಐಸೋಲೇಷನ್ನಲ್ಲಿದ್ದಾರೆ. 397 ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
ಇಂದು ಬಿಡುಗಡೆಯಾದ 60 ಮಂದಿಯಲ್ಲಿ 3, 16, 13 ವರ್ಷದ ಮಕ್ಕಳು ಇದ್ದಾರೆ. 60 ವರ್ಷ ದಾಟಿದ 7 ಮಂದಿ ಇದ್ದು, 75 ವರ್ಷದ ಇಬ್ಬರು ಕೊರೊನಾ ಗೆದ್ದು ಮನೆ ಸೇರಿದ್ದಾರೆ.