ಚಾಮರಾಜನಗರ: ಜಿಲ್ಲೆಯಲ್ಲಿ ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್ಡೌನ್ ವಿಧಿಸಿದ್ದು ದಿನಸಿ, ತರಕಾರಿ ಕೊಳ್ಳಲು ಜನರು ಮುಗಿಬಿದ್ದಿದ್ದರು. ಇತ್ತ ಮದ್ಯಪ್ರಿಯರು ಕೂಡ ಬಾರ್ಗಳ ಮುಂದೆ ಕ್ಯೂ ನಿಂತಿದ್ದರು.
ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಗುರುವಾರ, ಶುಕ್ರವಾರ, ಶನಿವಾರ ಹಾಗು ಭಾನುವಾರ ಸಂಪೂರ್ಣ ಲಾಕ್ಡೌನ್ ಮಾಡಲು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ನಿರ್ಧಾರ ಕೈಗೊಂಡಿದೆ. ಸೋಮವಾರ, ಮಂಗಳವಾರ, ಬುಧವಾರ ರಾಜ್ಯ ಸರ್ಕಾರ ನೀಡಿರುವ ನಿಯಮದಂತೆ ಬೆಳಗ್ಗೆ 6ರಿಂದ 10ರವರೆಗೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ಇರಲಿದೆ.
ನಾಲ್ಕು ದಿನ ಸಂಪೂರ್ಣ ಲಾಕ್ಡೌನ್ ಇರಲಿದ್ದು ಜನರು ಸಾಮಾಜಿಕ ಅಂತರ ಮರೆತು ದಿನಸಿ, ತರಕಾರಿ ಹಾಗು ಮದ್ಯ ಖದೀದಿಗೆ ಗುಂಪು ಸೇರಿದ್ದರು.
ಇದನ್ನೂ ಓದಿ: 'ಟೆಸ್ಟ್ ರಿಪೋರ್ಟ್ ಕೇಳಿ ಚಿಕಿತ್ಸೆಗೆ ನಿರ್ಲಕ್ಷ್ಯ': ಕೊಪ್ಪಳದಲ್ಲಿ ಕಾರಿನಲ್ಲೇ ಕೊನೆಯುಸಿರೆಳೆದ ಮಹಿಳೆ