ETV Bharat / state

ಕೊರೊನಾ ರಣಕೇಕೆ: ಸ್ವಯಂ ಲಾಕ್​ಡೌನ್ ಮಾಡಿಕೊಂಡ ಗ್ರಾಮಸ್ಥರು, ತ್ವರಿತ ಚಿಕಿತ್ಸೆಗೆ ರೆಡಿಯಾದ ಜಿಲ್ಲಾಡಳಿತ...!

ಸೋಂಕಿತ ಪ್ರಕರಣ ಮತ್ತು ಸಾವಿನ ಪ್ರಕರಣಗಳು ಹೆಚ್ಚಾದ ಕಾರಣ 19 ದಿನದಲ್ಲಿ 25 ಜನ ಸಾವನ್ನಪ್ಪಿದ್ದಾರೆ. ಕೋವಿಡ್ ಸೋಂಕಿಗೆ ಹೆದರಿ ಬೀದರ್ ತಾಲೂಕಿನ ಕೆಲ ಗ್ರಾಮದ ಜನರು ಸ್ವಯಂ ಪ್ರೇರಿತರಾಗಿ ಗ್ರಾಮವನ್ನ ಲಾಕ್​ಡೌನ್ ಮಾಡಿಕೊಂಡಿದ್ದಾರೆ.

Bidar
Bidar
author img

By

Published : Apr 22, 2021, 6:23 PM IST

Updated : Apr 22, 2021, 8:42 PM IST

ಬೀದರ್: ಮಹಾರಾಷ್ಟ್ರ ಹಾಗೂ ತೆಲಂಗಾಣ ಎರಡು ರಾಜ್ಯದ ಗಡಿಯಲ್ಲಿರುವ ಬೀದರ್ ಜಿಲ್ಲೆಯಲ್ಲಿ ಕೊರೊನಾ ವೈರಾಣು ಸೋಂಕು ಕಾಳ್ಗಿಚ್ಚಿನಂತೆ ಹರಡುತ್ತಿದ್ದು, ಎರಡನೇಯ ಅಲೆಯ ಆರಂಭದಲ್ಲೇ 25 ಕ್ಕೂ ಅಧಿಕ ಜನರು ಸಾವನಪ್ಪಿದ್ದಾರೆ. ಅತೀ ವೇಗವಾಗಿ ಹರಡುತ್ತಿರುವ ಸೋಂಕು ತಡೆಗಟ್ಟಲು ಹಳ್ಳಿ ಜನರು ಸ್ವಯಂ ಲಾಕ್ ಡೌನ್ ಮಾಡಿಕೊಂಡರೆ. ಜಿಲ್ಲಾಡಳಿತ ತ್ವರಿತ ಚಿಕಿತ್ಸೆ ನೀಡುವ ಮೂಲಕ ಕೊರೊನಾ ವಿರುದ್ಧ ಸಮರ ಸಾರಿದೆ.

ಹೌದು, ಗಡಿ ಜಿಲ್ಲೆ ಬೀದರ್​ನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜನ ತತ್ತರಿಸಿ ಹೋಗಿದ್ದಾರೆ. ದಿನ ಒಂದಕ್ಕೆ ಕಳೆದ ಒಂದು ವಾರದಿಂದ ಸೋಂಕಿತರ ಸಂಖ್ಯೆ 300 ಗಡಿ ದಾಟುತ್ತಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಪರದಾಡುವಂತ ಪರಸ್ಥಿತಿ ಉಂಟಾಗಿದೆ. ಇದರ ಮಧ್ಯೆ ಕೋವಿಡ್ ಟೆಸ್ಟ್ ಮಾಡಿಸಲು ಸಹ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ‌ ಬಂದೊದಗಿದೆ.

ಇನ್ನು ಜಿಲ್ಲೆಯಲ್ಲಿ ಸೋಂಕಿತ ಪ್ರಕರಣ ಮತ್ತು ಸಾವಿನ ಪ್ರಕರಣಗಳು ಹೆಚ್ಚಾದ ಕಾರಣ 19 ದಿನದಲ್ಲಿ 25 ಜನ ಸಾವನ್ನಪ್ಪಿದ್ದಾರೆ. ಕೋವಿಡ್ ಸೋಂಕಿಗೆ ಹೆದರಿ ಬೀದರ್ ತಾಲೂಕಿನ ಬಾವಗಿ, ನೆಲವಾಡ, ಸಂಗೋಳಗಿ, ಚಿಟಗುಪ್ಪಾ ತಾಲೂಕಿನ ರೇಕುಳಗಿ, ನಿಡವಂಚಾ, ಬಂಬುಳಗಿ, ಬಸವಕಲ್ಯಾಣ ತಾಲೂಕಿನ ನಾರಾಯಣಪೂರ ಗ್ರಾಮದ ಜನರು ಸ್ವಯಂ ಪ್ರೇರಿತರಾಗಿ ಗ್ರಾಮವನ್ನ ಲಾಕ್​ಡೌನ್ ಮಾಡಿಕೊಂಡು ರೋಗ ಹರಡದಂತೆ ಎಚ್ಚರಿಕೆ ವಹಿಸಿಕೊಂಡಿದ್ದಾರೆ.

ಸ್ವಯಂ ಲಾಕ್​ಡೌನ್ ಮಾಡಿಕೊಂಡ ಗ್ರಾಮಸ್ಥರು

ಇನ್ನು ಕೊರೊನಾ ಎರಡನೇ ಅಲೆ ಬಹಳಷ್ಟು ಭಯಂಕರವಾಗಿದೆ. ಅಲ್ಲದೇ ಬಹಳ ಬೇಗನೆ ಎಲ್ಲಡೆ ಹರಡುತ್ತಿದ್ದು, ಮರಣ ಹೊಂದುವವರ ಪ್ರಮಾಣ ಕೂಡ ಜಾಸ್ತಿಯಾಗಿ ಆತಂಕ ಸೃಷ್ಟಿಯಾಗಿದ್ದು, ಜನ ಮುಂಜಾಗ್ರತೆ ವಹಿಸಬೇಕು.

ಈಗಾಗಲೇ ಸರ್ಕಾರಿ ಮತ್ತು ಖಾಸಗಿ ಸೇರಿ 1,100 ಬೆಡ್​ಗಳ ವ್ಯವಸ್ಥೆ ಮಾಡಲಾಗಿದೆ. 90 ಬೆಡ್​ಗಳ ಐಸಿಯು ವ್ಯವಸ್ಥೆ ಮಾಡಲಾಗಿದೆ. ಕೊರೊನಾ ಪಾಸಿಟಿವ್ ಗೊತ್ತಾಗುತ್ತಿದ್ದಂತೆ ಬೇಗನೆ ಚಿಕಿತ್ಸೆ ಪಡೆದುಕೊಳ್ಳುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ ವೈದ್ಯರು.

ಒಟ್ಟಿನಲ್ಲಿ ಎರಡು ರಾಜ್ಯದ ಗಡಿ ಹಂಚಿಕೊಂಡ ಬೀದರ್ ಜಿಲ್ಲೆಯ ಜನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣದಿಂದಾಗಿ ಆತಂಕಕ್ಕೆ ಒಳಗಾಗಿದ್ದು, ಹಳ್ಳಿಗಳ ಜನ ಕೊರೊನಾ ಹರಡುವುದನ್ನ ತಡೆಗಟ್ಟುವ ಉದ್ದೇಶದಿಂದ ಲಾಕ್​ಡೌನ್ ಮೊರೆ ಹೋಗಿದ್ದು ನಗರ ಪ್ರದೇಶದ ಜನರು ಸಹಕರಿಸುವ ಅಗತ್ಯವಿದೆ.

Last Updated : Apr 22, 2021, 8:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.