ETV Bharat / state

ಈ ಸರ್ಕಾರಿ ಶಾಲೆಯಲ್ಲಿ ಕಲಿತವರು ಮೇಸ್ತ್ರಿ ಆಗೋದು ಗ್ಯಾರಂಟಿ.. ಯಾಕೆ ಅಂತೀರಾ? - ಗೊಡೆ ಕಟ್ಟುವ ಕೆಲಸ

ಸರ್ಕಾರಿ ಶಾಲೆಯಲ್ಲಿ ಕಲಿತವರು ದೊಡ್ಡ ಹುದ್ದೆ ಅಲಂಕರಿಸುತ್ತಾರೆ ಅಂತಾ ಹೆಳ್ತಾರೆ. ಆದರೆ,ಇಲ್ಲೊಂದು ಶಾಲೆಯಲ್ಲಿ ಶಿಕ್ಷಕಿಯೋರ್ವರು ಪಾಠದ ಬದಲಾಗಿ ಮಕ್ಕಳಿಗೆ ಗೋಡೆ ಕಟ್ಟುವ ಮೇಸ್ತ್ರಿ ಕೆಲಸ ಕಲಿಸುತ್ತಿದ್ದು, ಗೋಡೆ ಕಟ್ಟುವ ಕೆಲಸಕ್ಕೆ ಮಕ್ಕಳನ್ನು ಕೂಲಿ ಕಾರ್ಮಿಕರಂತೆ ಬಳಸಿಕೊಂಡ ಘಟನೆ ನಡೆದಿದೆ.

ಕೂಲಿ ಕಾರ್ಮಿಕರಂತೆ ಮಕ್ಕಳನ್ನು ಗೊಡೆ ಕಟ್ಟುವ ಕೆಲಸಕ್ಕೆ ಬಳಸಿಕೊಳ್ಳುವುದು
author img

By

Published : Aug 24, 2019, 10:41 AM IST

ಬೀದರ್: ಸರ್ಕಾರಿ ಶಾಲೆಯಲ್ಲಿ ಕಲಿತವರು ದೊಡ್ಡ ಹುದ್ದೆ ಅಲಂಕರಿಸುತ್ತಾರೆ ಅಂತಾ ಹೆಳ್ತಾರೆ. ಆದರೆ, ಇಲ್ಲೊಂದು ಶಾಲೆಯಲ್ಲಿ ಶಿಕ್ಷಕಿಯೋರ್ವರು ಪಾಠದ ಬದಲಾಗಿ ಮಕ್ಕಳಿಗೆ ಗೋಡೆ ಕಟ್ಟುವ ಮೇಸ್ತ್ರಿ ಕೆಲಸ ಕಲಿಸುತ್ತಿದ್ದು ಮಕ್ಕಳನ್ನು ಕೂಲಿ ಕಾರ್ಮಿಕರಂತೆ ಬಳಸಿಕೊಂಡ ಘಟನೆ ನಡೆದಿದೆ.

ಕೂಲಿ ಕಾರ್ಮಿಕರಂತೆ ಮಕ್ಕಳನ್ನು ಗೋಡೆ ಕಟ್ಟುವ ಕೆಲಸಕ್ಕೆ ಬಳಕೆ..

ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಸಿಂದಬಂದಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂತಹದೊಂದು ಘಟನೆ ನಡೆದಿದೆ. ಮುಖ್ಯ ಶಿಕ್ಷಕಿ ಶಾಲೆಯ ಕಾಂಪೌಂಡ್ ಗೋಡೆ ಕಟ್ಟಲು ಮಕ್ಕಳನ್ನು ಕಾರ್ಮಿಕರಂತೆ ಬಳಸಿಕೊಂಡಿದ್ದಾರೆ. ಮರಳು, ಸಿಮೆಂಟ್ ಹಾಗೂ ಕಲ್ಲುಗಳನ್ನು ಜೋಡಿಸುತ್ತಾ ವಿದ್ಯಾರ್ಥಿಗಳು ಕಾಂಪೌಂಡ್ ಗೋಡೆ ಕಟ್ಟುತ್ತಿದ್ದು, ಖುದ್ದು ಶಿಕ್ಷಕಿಯೇ ಎದುರು ನಿಂತು ಮಾರ್ಗದರ್ಶನ ನೀಡಿ ಕೆಲಸ ಮಾಡಿಸಿಕೊಳ್ಳುತ್ತಿರುವುದು ಕಂಡು ಬಂದಿದೆ. ಬಾಲ ಕಾರ್ಮಿಕ ನಿಷೇಧ ಕಾಯ್ದೆ ಜಾರಿಗೆ ಬಂದು ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆಯಲೇಬೇಕು ಎಂದು ಸರ್ಕಾರ ಕಠಿಣವಾದ ಕಾನೂನು ಜಾರಿಗೆ ತಂದರೂ ಇಂತಹ ಘಟನೆಗಳು ನಡೆಯುತ್ತಿರುವುದು ದುರಾದೃಷ್ಟಕರ ಸಂಗತಿ.

ಈ ಕುರಿತಂತೆ ಶಿಕ್ಷಕಿಯನ್ನು ಕೇಳಿದ್ರೆ, ಕಾಂಪೌಂಡ್ ಒಳಗೆ ಯಾರು ಬರಬಾರದು. ಜಾನುವಾರುಗಳು ಬರುತ್ತಿವೆ. ಹಾಗಾಗಿ ನಾವೆಲ್ಲಾ ಖುದ್ದು ಕಂಪೌಂಡ್​ ಕಟ್ಟಲು ಮುಂದಾಗಿದ್ದೇವೆ ಎನ್ನುತ್ತಾರೆ.

ಶಾಲೆ ನಿರ್ವಹಣೆಗೆ ಸರ್ಕಾರ ಅನುದಾನ ನೀಡಿದ್ರೂ, ಒಂದಿಷ್ಟು ಹಣ ಉಳಿಸಲು ಹೋಗಿ ಶಿಕ್ಷಕಿ ಇಂತಹದ್ದೊಂದು ಅವಾಂತರ ಮಾಡಿದ್ದು ಮಕ್ಕಳನ್ನು ಕೂಲಿ ಕಾರ್ಮಿಕರಂತೆ ಬಳಸಿಕೊಂಡಿರೋದು ಎಷ್ಟು ಸರಿ ಅಲ್ವೇ..

Intro:ಈ ಸರ್ಕಾರಿ ಶಾಲೆಯಲ್ಲಿ ಕಲಿತವರು ಡಿಸಿ ಆಗೊಲ್ಲ, ಮೈಸ್ರಿ ಆಗ್ತಾರೆ- ಯಾಕೆ ಅಂತಿರಾ...!

ಬೀದರ್:
ಸರ್ಕಾರಿ ಶಾಲೆಯಲ್ಲಿ ಕಲಿತವರು ದೊಡ್ಡ ಹುದ್ದೆಗೆ ಸೆರ್ತಾರೆ ಅಂತ ಹೆಳ್ತಾರೆ. ಆದ್ರೆ ಈ ಸರ್ಕಾರಿ ಶಾಲೆಯಲ್ಲಿ ಪಾಠ ಕಲಿಯಲು ಬರುವ ಬಡವರ ಮಕ್ಕಳು ದುರದೃಷ್ಠ ಎಂಥದ್ದು ನೋಡಿ. ಶಾಲೆಯಲ್ಲಿ ಪಾಠದ ಬದಲಾಗಿ ಮಕ್ಕಳಿಗೆ ಗೊಡೆ ಕಟ್ಟುವ ಮೇಸ್ತ್ರಿ ಕೆಲಸ ಕಲಿಸ್ತಿದ್ದಾರೆ ಈ ಶಿಕ್ಷಕಿ. ಸರ್ಕಾರಿ ಶಾಲೆಯ ಶಿಕ್ಷಿಯೊಬ್ಬರು ವಿಧ್ಯಾರ್ಥಿಗಳಿಗೆ ಗೊಡೆ ಕಟ್ಟುವ ಕೆಲಸಕ್ಕೆ ಕೂಲಿ ಕಾರ್ಮಿಕರಂತೆ ಬಳಸಿಕೊಂಡ ಘಟನೆ ನಡೆದಿದೆ.

ವೈ.ಓ:
ಮೈ ಮೇಲೆ ಶಾಲಾ ಸಮವಸ್ತ್ರ ಹಾಕಿಕೊಂಡು, ಕೈಯಲ್ಲಿ ಸಿಮೆಂಟ್, ಮರಳು, ಹಿಡಿದು ಭಾರವಾದ ಕಲ್ಲುಗಳನ್ನು ಎತ್ತಿ ಕಷ್ಟಪಟ್ಟು ಮೈಸ್ತ್ರಿ ಕೆಲಸ ಮಾಡ್ತಿರುವ ಈ ಅಮಾಯಕ ಮಕ್ಕಳು. ಮತ್ತೊಂದ ಕಡೆ ಪಾಠ ಮಾಡಬೇಕಾದ ಶಿಕ್ಷಕಿ ಈ ಘನಂದಾರಿ ಕೆಲಸ ದ ಮೇಲುಸ್ತುವಾರಿ ಮಾಡುತ್ತ ಮಕ್ಕಳಿಂದ ಕೂಲಿ ಕೆಲಸ ಮಾಡಿಸ್ತಿರುವುದು. ಇದೆಲ್ಲವೂ ಕಂಡು ಬಂದಿದ್ದು ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಸಿಂದಬಂದಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಅಂದ ಹಾಹೆ ಮುಖ್ಯಶಿಕ್ಷಕಿ ಶಾಲೆಯ ಕಂಪೌಂಡ ಗೋಡೆ ಕಟ್ಟಲು ಮಕ್ಕಳನ್ನು ಕಾರ್ಮಿಕರಂತೆ ಬಳಸಿಕೊಂಡಿದ್ದಾರೆ. ಮರಳು, ಸಿಮೇಂಟ್ ಹಾಗೂ ಕಲ್ಲುಗಳುನ್ನು ಜೋಡಿಸುತ್ತ ವಿಧ್ಯಾರ್ಥಿಗಳು ಕಂಪೌಡ. ಗೋಡೆ ಕಟ್ಟುವುದನ್ನು ಖುದ್ದು ಶಿಕ್ಷಕಿ ಎದುರು ನಿಂತು ಮಾರ್ಗದರ್ಶನ ಮಾಡಿಸಿ ಕೆಲಸ ಮಾಡಿಸಿಕೊಳ್ತಿರುವುದು ಕಂಡು ಬಂದಿದೆ.

ವೈ.ಓ:
ಬಾಲಕಾರ್ಮಿಕ ನಿಷೇಧ ಕಾಯ್ದೆ ಜಾರಿಗೆ ಬಂದು ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆಯಲೆಬೇಕು ಎಂದು ಸರ್ಕಾರ ಕಠಿಣವಾದ ಕಾನೂನು ಜಾರಿಗೆ ತಂದರು. ಯಾವ ಶಾಲೆಯಲ್ಲಿ ವಿಧ್ಯಾರ್ಥಿಗಳ ಭವಿಷ್ಯ ರೂಪವಾಗಬೇಕು ಅಲ್ಲೆ ಅವರನ್ನು ಬಾಲ ಕಾರ್ಮಿಕರಂತೆ ಬಳಸಿಕೊಂಡಿರುವುದು ದುರಂತ. ಕಂಪೌಂಡ್ ಒಳಗೆ ಯಾರು ಬರಬಾರದು, ಜಾನುವಾರುಗಳು ಬರ್ತಿವೆ ಅಂತ ಮೆಡಮ್ ಬಂದ್ ಮಾಡಲು ಹೇಳಿದ್ದಾರೆ ಅದಕ್ಕೆ ನಾವೆಲ್ಲಾ ಖುದ್ದು ಬಂದ್ ಮಾಡಿವಿ ಅಂತಾರೆ ವಿಧ್ಯಾರ್ಥಿಗಳು.

ಬೈಟ್-೦೧: ವಿಧ್ಯಾರ್ಥಿ( ಮುಖ ಬ್ಲರ್ ಮಾಡಿ)

ವೈ.ಓ:
ಇದಷ್ಟೇ ಅಲ್ಲ ಈ ಶಾಲೆಯಲ್ಲಿ 7 ಜನ ಶಿಕ್ಷಕರಿದ್ದಾರೆ ಆದ್ರೆ ಶಿಕ್ಷಕರು ಶಾಲೆಗೆ ಚಕ್ಕರ್ ಹೊಡೆಯುವುದರಲ್ಲಿ ನಿಸ್ಸಿಮರು. ಶಿಕ್ಷಕರ ಹಾಜರಿ ಪುಸ್ತಕದಲ್ಲಿ ವಾರಕ್ಕೊಮ್ಮೆ ಸಹಿ ಮಾಡುವ ಪದ್ದತಿ ಈ ಶಾಲೆಯ ದುರಾವಸ್ಥೆ ಎತ್ತಿ ತೊರಿಸುವಂತಿದ್ದು ಸರ್ಕಾರಿ ನೌಕರಿ ಖಯಾಲಿಯಲ್ಲಿ ನಾಮ ಕೆವಾಸ್ತೆ ಶಾಲೆಗೆ ಹಾಜರಾಗ್ತಿರುವ ಶಿಕ್ಷಕರ ಮನಸ್ಥಿತಿ ಬದಲಾಗಬೇಕಾಗಿದೆ.

ವೈ.ಓ:
ಒಟ್ಟನಲ್ಲಿ ಶಾಲೆ ನಿರ್ವಹಣೆಗೆ ಸರ್ಕಾರ ಅನುದಾನ ನೀಡಿದ್ರು ಒಂದಿಷ್ಟು ಹಣ ಉಳಿಸಲು ಹೊಗಿ ಶಿಕ್ಷಕಿ ಇಂಥದ್ದೊಂದು ಅವಾಂತರ ಮಾಡಿದ್ದು ಕೂಲಿ ಮಾಡುವ ಕಾರ್ಮಿಕರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದಿ ಡಿಸಿ ಆಗಬೇಕು ಅನ್ನೊ ಕನಸಿಟ್ಟುಕೊಂಡ ಪೋಷಕರ ಪಾಲಿಗೆ ಅಂಥ ಶಾಲೆಯಲ್ಲೂ ಮಕ್ಕಳಿಗೆ ಕೂಲಿ ಮಾಡಿಸುವ ದುರಂತ ಸ್ಥೀತಿ ಕಂಡು ಬಂದಿರುವುದು ವಿಪರ್ಯಾಸವೆ ಸರಿ.
-----ಅನೀಲಕುಮಾರ್ ದೇಶಮುಖ ಈಟಿವಿ ಭಾರತ ಬೀದರ್-------Body:AnilConclusion:Bidar
ETV Bharat Logo

Copyright © 2025 Ushodaya Enterprises Pvt. Ltd., All Rights Reserved.