ಬೀದರ್: ಜಿಲ್ಲೆಯಲ್ಲಿ ಕೋವಿಡ್-19 ಅಟ್ಟಹಾಸ ಮುಂದುವರೆದಿದ್ದು, ಮಹಾರಾಷ್ಟ್ರದಿಂದ ವಾಪಸಾದ 10 ಜನ ಅಪ್ರಾಪ್ತರು ಸೇರಿ ಒಟ್ಟು 39 ಜನರಲ್ಲಿ ಕೊರೊನಾ ಪತ್ತೆಯಾಗಿದೆ. ಇದೀಗ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 214ಕ್ಕೆ ಏರಿಕೆಯಾಗಿದೆ.
ಇಂದು ಬಿಡುಗಡೆಯಾದ ಕೊರೊನಾ ಬುಲೆಟಿನ್ನಲ್ಲಿ ಪಿ. 4351ರಿಂದ 4389ರವರೆಗೆ ಪತ್ತೆಯಾದ ಎಲ್ಲಾ ಸೋಂಕಿತರು ಮಹಾರಾಷ್ಟ್ರ ಪ್ರವಾಸ ಮಾಡಿದವರಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 214ಕ್ಕೆ ಏರಿಕೆಯಾಗಿದ್ದು, ಈ ಪೈಕಿ 41 ಜನ ಗುಣಮುಖರಾಗಿದ್ದಾರೆ.
(59) ವಯಸ್ಸಿನ ಮಹಿಳೆ ಸಾವು: ಅಲ್ಲದೇ ನಗರದ ಓಲ್ಡ್ ಸಿಟಿ ನಿವಾಸಿಯಾಗಿದ್ದ (59) ಮಹಿಳೆಯೊಬ್ಬಳು ಇಂದು ಬೆಳಿಗ್ಗೆ ಸೋಂಕಿನಿಂದ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಅಲ್ಲದೇ 168 ಜನ ಕೋವಿಡ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.