ETV Bharat / state

ಹೊಸಪೇಟೆ: ಮನೆ ಮುಂದೆ ನಿಲ್ಲಿಸಿದ್ದ ನಾಲ್ಕು ಬೈಕ್​​ಗಳಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು - ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು

ಹೊಸಪೇಟೆ ನಗರದ ಸಿದ್ದಲಿಂಗಪ್ಪ ಚೌಕಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್​​ಗಳಿಗೆ ಕಿಡಿಗೇಡಿಗಳು ಬೆಂಕಿಯಿಟ್ಟಿದ್ದಾರೆ.

Unknown persons are set fire to bike
ಬೈಕ್​​ಗಳಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು
author img

By

Published : Sep 11, 2021, 5:24 PM IST

ಹೊಸಪೇಟೆ(ವಿಜಯನಗರ): ಮನೆ ಮುಂದೆ ನಿಲ್ಲಿಸಿದ್ದ ಬೈಕ್​​ಗಳಿಗೆ ಕಿಡಿಗೇಡಿಗಳು ಬೆಂಕಿಯಿಟ್ಟು ವಿಕೃತಿ ಮೆರೆದಿರುವ ಘಟನೆ ನಗರದ ಸಿದ್ದಲಿಂಗಪ್ಪ ಚೌಕಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.

ಘಟನೆ ಬಗ್ಗೆ ಮಾಹಿತಿ ನೀಡಿದ ಮಹಿಳೆ

ನಾಲ್ಕು ಬೈಕ್​​​ಗಳಿಗೆ ಬೆಂಕಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.‌ ಬೆಂಕಿಗೆ ಆಹುತಿಯಾಗಿರುವ ಬೈಕ್​ಗಳು ಮರೇಗೌಡ ಹಾಗೂ ಶರಣ ಬಸವ ಎಂಬುವವರಿಗೆ ಸೇರಿದವುಗಳಾಗಿವೆ. ಘಟನಾ ಸ್ಥಳಕ್ಕೆ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಳಗಿನ 5 ಗಂಟೆ ಸುಮಾರಿಗೆ ಓಣಿ ತುಂಬೆಲ್ಲ ಹೊಗೆ ಬರುತ್ತಿತ್ತು. ಆಗ ಹೊರ ಬಂದು ನೋಡಿದಾಗ ಬೈಕ್​ಗಳಿಗೆ ಬೆಂಕಿ ಹತ್ತಿತ್ತು. ಯಾರು ಈ‌ ಕೃತ್ಯವನ್ನು ಎಸೆಗಿದ್ದಾರೆ ಎಂಬುದು ತಿಳಿದಿಲ್ಲ. ನಮ್ಮದು ಅವಿಭಕ್ತ ಕುಟುಂಬವಾಗಿದೆ.‌ ಮನೆಯಲ್ಲಿ‌ ಮಕ್ಕಳಿದ್ದಾರೆ. ಹೊಟ್ಟೆಕಿಚ್ಚಿಗಾಗಿ ಹೀಗೆ ಮಾಡಿದ್ದಾರೆ. ಮನೆಗೆ ಬಂದು ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಮರೇಗೌಡ ಪತ್ನಿ ಮರಿಯಮ್ಮ ಮಾಹಿತಿ ನೀಡಿದ್ದಾರೆ.

ಓದಿ: ಹು-ಧಾ ಮಹಾನಗರ ಪಾಲಿಕೆ ಮೇಯರ್ ಗಾದಿ: ಬಿಜೆಪಿ ನಾಯಕರ ನಡುವೆ ಮುಸುಕಿನ ಗುದ್ದಾಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.