ETV Bharat / state

ಮುಂದಿನ ಸಿಎಂ ನಾನೇ ಅಂತಾ ನಾ ಎಲ್ಲಿಯೂ ಹೇಳಿಲ್ಲ : ಸಿದ್ದರಾಮಯ್ಯ - ಸಿದ್ದರಾಮಯ್ಯ

ನಾನೆಲ್ಲೂ ಸಿಎಂ ಆಗ್ತೀನಿ ಅಂತಾ ಹೇಳಿಲ್ಲ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ ಬರಬೇಕು. ಪಕ್ಷದ ಶಾಸಕಾಂಗ ಸಭೆಯಲ್ಲಿ ಚರ್ಚೆ ನಡೆಯಬೇಕು‌. ಆಗ ಮಾತ್ರ ಸಿಎಂ ಯಾರು ಅಂತಾ ಘೋಷಣೆಯಾಗಲಿದೆ.‌ ಅಲ್ಲಿಯ ತನಕ ಸಿಎಂ ಅಭ್ಯರ್ಥಿ ಘೋಷಣೆ ಅಪ್ರಸ್ತುತ..

The next CM myself said nowhere
ಸಿದ್ದರಾಮಯ್ಯ
author img

By

Published : Jun 22, 2021, 3:20 PM IST

ಬಳ್ಳಾರಿ : ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರ ಆಯ್ಕೆಯ ವಿಚಾರ ಪಕ್ಷದ ಹೈಕಮಾಂಡ್​​ಗೆ ಬಿಟ್ಟದ್ದು. ನನ್ನನ್ನು ಸಿಎಂ ಮಾಡುವ ಅಭಿಪ್ರಾಯವನ್ನು ನಮ್ಮ ಪಕ್ಷದ ಶಾಸಕರು ಹೇಳುತ್ತಿದ್ದಾರಷ್ಟೇ.. ನಾನೆಲ್ಲಾದರೂ ಸಿಎಂ ಆಗ್ತೀನಿ ಅಂತ ಹೇಳಿದ್ದೀನಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ಏರ್ಪೋರ್ಟ್​​ನಲ್ಲಿ ಅವರು ಮಾತನಾಡುತ್ತಾ, ನಾನೆಲ್ಲೂ ಸಿಎಂ ಆಗ್ತೀನಿ ಅಂತ ಹೇಳಿಲ್ಲ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ ಬರಬೇಕು. ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ನಡೆಯಬೇಕು‌. ಆಗ ಮಾತ್ರ ಸಿಎಂ ಯಾರು ಅಂತ ಘೋಷಣೆಯಾಗಲಿದೆ.‌

ಮುಂದಿನ ಸಿಎಂ ನಾನೇ ಅಂತಾ ಎಲ್ಲಿಯೂ ಹೇಳಿಲ್ಲ: ಸಿದ್ದರಾಮಯ್ಯ

ಅಲ್ಲಿಯ ತನಕ ಸಿಎಂ ಅಭ್ಯರ್ಥಿ ಘೋಷಣೆ ಅಪ್ರಸ್ತುತ ಎಂದರು. ಕೆಲ ಶಾಸಕರು ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಹೇಳುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದು ಅವರ ವೈಯಕ್ತಿಕ ಅಭಿಪ್ರಾಯ, ನನ್ನದಲ್ಲ ಎಂದು ಸ್ಪಷ್ಟಪಡಿಸಿದರು.

‘ಭೂಮಿ ಪರಭಾರೆಗೆ ನನ್ನ ವಿರೋಧವಿಲ್ಲ’

ಜಿಂದಾಲ್​ ಭೂಮಿ ಪರಭಾರೆ ಮಾಡುವುದು ಬೇಡ ಎಂದು ಈ ಹಿಂದೆ ಹಾಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರತಿಭಟನೆ ನಡೆಸಿದ್ದರು. ಅವರೇ ಈಗ ಭೂಮಿ ಪರಭಾರೆ ಮಾಡ್ತಿದ್ದಾರೆ ಎಂದು ಕಿಡಿಕಾರಿದರು. ಪರಭಾರೆ ಮಾಡುವುದಕ್ಕೆ ನನ್ನ ವಿರೋಧವಿಲ್ಲ. ಆದರೆ, ಮಾರುಕಟ್ಟೆ ದರದಲ್ಲಿ ಮಾರಾಟ ಮಾಡಬೇಕೆಂಬುದಷ್ಟೇ ನನ್ನ ವಾದ ಎಂದಿದ್ದಾರೆ.

‘ಸರ್ಕಾರದಿಂದ ರಮೇಶ್​ ರಕ್ಷಣೆ’

ಮಾಜಿ ಸಚಿವ ರಮೇಶ ಜಾರಕಿಹೊಳಿಯನ್ನ ರಾಜ್ಯ ಸರ್ಕಾರ ರಕ್ಷಿಸುತ್ತಿದೆ. ಕಾನೂನು ಎಲ್ಲರಿಗೂ ಒಂದೇ. ಮಾಜಿ ಸಚಿವರಿಗೊಂದು ನ್ಯಾಯ, ಸಾಮಾನ್ಯರಿಗೊಂದು ನ್ಯಾಯ ಇರುತ್ತದೆಯೋ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ರಾಜ್ಯದಲ್ಲಿ 1 ರಿಂದ 10ನೇ ತರಗತಿವರೆಗೆ ಶಾಲೆ ತೆರೆಯುವ ಬಗ್ಗೆ ಚರ್ಚೆ ಮಾಡಿಲ್ಲ: ಸಿಎಂ

ಮಾಜಿ ಸಚಿವರಾದ ಸಂತೋಷ ಲಾಡ್, ಮಾಜಿ ಸಂಸದ ಉಗ್ರಪ್ಪ, ಶಾಸಕರಾದ ಬಿ.ನಾಗೇಂದ್ರ, ಭೀಮಾನಾಯ್ಕ್, ಗಣೇಶ್ ಸೇರಿದಂತೆ ಇನ್ನಿತರೆ ಮುಖಂಡರು ಹಾಜರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.