ಬಳ್ಳಾರಿ: ರೌಡಿಶೀಟರ್ ಯಲ್ಲಪ್ಲ ಕೊಲೆ ಪ್ರಕರಣದಲ್ಲಿ ಭಾಗಿಯಾದ ನೆರೆಯ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಮೂವರು ಸುಪಾರಿ ಕಿಲ್ಲರ್ಗಳು ಹಾಗೂ ಓರ್ವ ರೌಡಿಶೀಟರ್ ಇಲ್ಲಿನ ಜಿಲ್ಲಾ ಜೆಎಂಎಫ್ಸಿ ಕೋರ್ಟಿಗೆ ಹಾಜರಾದರು.
![Supari killers attended JMFC court and shocked](https://etvbharatimages.akamaized.net/etvbharat/prod-images/kn-bly-1-rowdy-sheeter-murder-case-supari-killers-attend-court-7203310_21032020094758_2103f_1584764278_217.jpg)
ಸುಪಾರಿ ಕಿಲ್ಲರ್‌ಗಳಾದ ನೆರೆಯ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಬೋಯಾ ಸುಧಾಕರ್, ಬಿ. ಅಯ್ಯಣ್ಣ, ಕುರುವಾ ರಮೇಶ ಅಲಿಯಾಸ್ ತಿಕ್ಕ ರಮೇಶ ಹಾಗೂ ಬಳ್ಳಾರಿಯ ಅಂದ್ರಾಳ್‌ನ ರಾಮಾಂಜಿನಿ ಕೋರ್ಟಿಗೆ ಹಾಜರಾದವರು.
ಜಿಲ್ಲೆಯ ಪೊಲೀಸರು ಈ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ಬಂಧನ ಭೀತಿಗೊಳಗಾಗಿ ಈ ಆರೋಪಿಗಳು ನೇರವಾಗಿ ಕೋರ್ಟಿಗೆ ಹಾಜರಾಗಿ ಪೊಲೀಸರ ಹುಬ್ಬೇರಿಸಿದ್ದಾರೆ. ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.