ETV Bharat / state

ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ ಎದುರಿಸಲಿದ್ದೇವೆ: ಸಚಿವ ಶ್ರೀರಾಮುಲು

ಬಿಜೆಪಿ ಅಧಿಕಾರಕ್ಕೆ ಬಂದರೆ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಲು ಆರ್​ಎಸ್​ಎಸ್​​ ಪ್ಲಾನ್​ ಮಾಡಿದೆ ಎಂಬ ವಿಚಾರಕ್ಕೆ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿ ಮುಂದಿನ ಚುನಾವಣೆಯನ್ನು ಬೊಮ್ಮಾಯಿ ಅವರ ನೇತೃತ್ವದಲ್ಲೇ ಎದುರಿಸಲಿದ್ದೇವೆ ಎಂದು ಹೇಳಿದ್ದಾರೆ.

ಸಚಿವ ಶ್ರೀರಾಮುಲು
ಸಚಿವ ಶ್ರೀರಾಮುಲು
author img

By

Published : Feb 6, 2023, 5:19 PM IST

ಹೆಚ್​ಡಿಕೆ ಹೇಳಿಕೆಗೆ ಶ್ರೀರಾಮುಲು ಪ್ರತಿಕ್ರಿಯೆ

ಬಳ್ಳಾರಿ: 2023ರ ವಿಧಾನಸಭೆ ಚುನಾವಣೆಯನ್ನು ನಾವು ಸಿಎಂ ಬಸವರಾಜ ಬೊಮ್ಮಯಿ ಅವರ ನೇತೃತ್ವದಲ್ಲೇ ಎದುರಿಸುತ್ತೇವೆ ಎಂದು ಸಚಿವ ಶ್ರೀರಾಮುಲು ಹೇಳಿದರು. ಬಿಜೆಪಿ ಅಧಿಕಾರಿಕ್ಕೆ ಬಂದರೆ ಪ್ರಹ್ಲಾದ್​ ಜೋಶಿ ಅವರನ್ನು ಸಿಎಂ ಮಾಡಲು ಆರ್‌ಎಸ್‌ಎಸ್ ಪ್ಲಾನ್ ಮಾಡಿದೆ ಎನ್ನುವ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ನಗರದಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣಾ ಸ್ಪರ್ಧೆ ನಮ್ಮ ಮುಖ್ಯಮಂತ್ರಿಗಳ ಮುಂದಾಳತ್ವದಲ್ಲಿಯೇ ನಡೆಯಲಿದೆ. ಕುಮಾರಸ್ವಾಮಿ ಅವರು ಯಾವುದೇ ದಾಖಲೆ ಬಿಚ್ಚಿಡೋದು ಬೇಕಾಗಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಸಚಿವ ಶ್ರೀರಾಮುಲು ತಿರುಗೇಟು ನೀಡಿದರು.

ಕುಮಾರಸ್ವಾಮಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಶ್ರೀರಾಮುಲು: ಪ್ರಹ್ಲಾದ್​ ಜೋಶಿ ಅವರು ಮೋದಿ ಅವರ ಕ್ಯಾಬಿನೆಟ್ ಅಲ್ಲಿ ಪಾರ್ಲಿಮೆಂಟ್ ಅಫೇರ್ ಮಂತ್ರಿಯಾಗಿದ್ದಾರೆ. ಕುಮಾರಸ್ವಾಮಿ ಅವರು ಜನರ ದಿಕ್ಕು ತಪ್ಪಿಸಲು ಪ್ರಹ್ಲಾದ್​ ಜೋಶಿ ಅವರು ಸಿಎಂ ಆಗ್ತಾರೆ ಎಂದು ಹೇಳುತ್ತಿದ್ದಾರೆ ಎಂದು ಶ್ರೀರಾಮುಲು ಹೇಳಿದರು. ಇನ್ನು ಕೇಂದ್ರ ನಾಯಕರು ರಾಜ್ಯ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಕಾರ್ಯಕ್ರಮಗಳಿಗಾಗಿ ಹಲವು ನಾಯಕರು ರಾಜ್ಯಕ್ಕೆ ಬರುತ್ತಿದ್ದಾರೆ. ಇದೇ ತಿಂಗಳು 21 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳ್ಳಾರಿಗೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಸಂಡೂರಿನಲ್ಲಿ ಶ್ರೀರಾಮುಲು ಹಾಗೂ ಸಂತೋಷ್ ಲಾಡ್‌ರವರ ಬಹಿರಂಗ ಆತ್ಮೀಯತೆಯ ಪ್ರದರ್ಶನದ ಹಿಂದೆ ರಾಜಕೀಯ ಉದ್ಧೇಶಗಳೇನಾದರೂ ಇವೆಯಾ ಎಂಬ ಪ್ರಶ್ನೆಗೆ, ಸಂತೋಷ್ ಲಾಡ್ ಹಾಗೂ ನಾನು ರಾಜಕೀಯ ಹೊರತುಪಡಿಸಿಯೂ ಸ್ನೇಹಿತರು. ಜಾತ್ರೆಗೆ ಹೋದಾಗ ಲಾಡ್ ಸಿಕ್ಕರು, ಸ್ನೇಹ ಮನೋಭಾವನೆಯಿಂದ ಅಪ್ಪಿಕೊಂಡಿದ್ದೇನೆ ಅಷ್ಟೇ. ರಾಜಕೀಯದಿಂದ ಅಥವಾ ಯಾವುದೇ ಉದ್ದೇಶಕ್ಕೆ ಅಪ್ಪಿಕೊಂಡಿಲ್ಲ ಎಂದು ಶ್ರೀರಾಮುಲು ಹೇಳಿದರು.

ಈ ಬಾರಿಯ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮಾಂತರ ಅಥವಾ ಸಂಡೂರಿನ ನಡುವೆ ಯಾವ ಕ್ಷೇತ್ರವನ್ನು ಆರಿಸಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದಾಗ, ಚುನಾವಣೆಯಲ್ಲಿ ನನ್ನ ಸ್ಪರ್ಧೆ ವಿಚಾರ ಬಂದಾಗ ಪಕ್ಷ ತೀರ್ಮಾನ ಮಾಡಲಿದ್ದು, ಅದೇ ಅಂತಿಮ. ಹೈಕಮಾಂಡ್ ಸೂಚಿಸಿದ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಸಚಿವರು ತಿಳಿಸಿದರು.

ಫೆ.21 ರಂದು ಬಳ್ಳಾರಿ ನಗರಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ: ಇನ್ನೂ ಈ ತಿಂಗಳು 21 ರಂದು ಬಳ್ಳಾರಿ ನಗರಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆಯ ಸಮಾವೇಶಕ್ಕೆ ಆಗಮಿಸಲಿದ್ದಾರೆ ಎಂದು ಸಚಿವ ಶ್ರೀರಾಮುಲು ಅವರು ತಿಳಿಸಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಮತ್ತು ಅಮಿತ್ ಶಾ ಅವರು ನಿರಂತರವಾಗಿ ರಾಜ್ಯಕ್ಕೆ ಭೇಟಿ ನೀಡಿ ಪಕ್ಷವನ್ನು ಮತ್ತೇ ರಾಜ್ಯದಲ್ಲಿ ಅಧಿಕಾರಕ್ಕೆ ತರುವ ಪ್ರಯತ್ನ ನಡೆಸಿದ್ದಾರೆಂದು ಸಚಿವ ಶ್ರೀರಾಮುಲು ತಿಳಿಸಿದರು.

ಇದನ್ನೂ ಓದಿ: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ನೇತೃತ್ವದ ಸಮಿತಿಯಿಂದ ಅದಾನಿ ಸಮೂಹ ವಿರುದ್ಧ ತನಿಖೆಗೆ ಕಾಂಗ್ರೆಸ್ ನಾಯಕರ ಒತ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.