ಬಳ್ಳಾರಿ: ಗಣಿನಾಡು ಬಳ್ಳಾರಿ ನಗರದ ಹೊರವಲಯದ ಮನೆಯೊಂದರ ಮುಂಭಾಗದಲ್ಲಿ ಇಂದು ಮಧ್ಯಾಹ್ನ 7 ಅಡಿ ಉದ್ದದ ಕೆರೆ ಹಾವು ಪತ್ತೆಯಾಗಿತ್ತು. ಹಾವನ್ನು ಹಿಡಿದ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯ ಸಮೀರ್ ಸೇಟ್ ಸಾಬ್ರಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
ನಗರದ ಹೊರವಲಯ ಭತ್ರಿ ಪ್ರದೇಶದಿಂದ ಮನೆ ನಿರ್ಮಾಣ ಮಾಡುವ ಕಾರ್ಮಿಕನೊಬ್ಬ ಉರಗ ತಜ್ಞರಿಗೆ ಕರೆ ಮಾಡಿ, ಮನೆಯಲ್ಲಿ ಹಾವು ಬಂದಿರುವ ವಿಷಯ ತಿಳಿಸಿದ್ದಾರೆ.

ಸಮೀರ್ ಅವರು ತಮ್ಮ ರೆಡ್ ಕ್ರಾಸ್ ಸಂಸ್ಥೆಯ ಬೆಳಗಿನ ಸೇವೆ ಮುಗಿಸಿ ನಂತರ ನಗರದ ಹೊರವಲಯದ ಭತ್ರಿ ಪ್ರದೇಶದಲ್ಲಿ ಇರುವ ಹಾವನ್ನು ಹಿಡಿದು ನಗರದ ಹೊರವಲಯದ ಓಳಂಪುರ ಪ್ರದೇಶ ಪೊಲೀಸ ಫೈರಿಂಗ್ನ ಅರಣ್ಯ ಪದ್ರೇಶದಲ್ಲಿ ಬಿಟ್ಟು ಬಂದಿದ್ದಾರೆ.