ಬಳ್ಳಾರಿ: ಆಂಧ್ರಪ್ರದೇಶದ ನಾನಾ ಭಾಗದಿಂದ ಬಳ್ಳಾರಿಗೆ ಬರುವ ರಸ್ತೆಗಳನ್ನು ಬಂದ್ ಮಾಡುವುದು ಹಾಗು ಮದ್ಯ ಮಾರಾಟದ ವಿಚಾರವಾಗಿ ಸಚಿವ ಆನಂದ್ ಸಿಂಗ್ ಮತ್ತು ಶಾಸಕ ನಾಗೇಂದ್ರ ನಡುವೆ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಟಾಪಟಿ ನಡೆಯಿತು.
ಗಡಿಭಾಗದಲ್ಲಿ ವೈನ್ಶಾಪ್ ಬಂದ್ ಮಾಡಬೇಕೆಂದು ಶಾಸಕ ನಾಗೇಂದ್ರ ಅವರನ್ನು ಒತ್ತಾಯಿಸಿದ್ದು, ಈ ವಿಚಾರವಾಗಿ ಪರಸ್ಪರ ವಾಗ್ವಾದ ನಡೆಯಿತು. ಸಚಿವ ಮತ್ತು ಶಾಸಕರ ನಡುವೆ ವಾಗ್ವಾದವನ್ನು ಸಚಿವ ಬೈರತಿ ಬಸವರಾಜ್ ಮಧ್ಯಪ್ರವೇಶಿಸಿ ತಣ್ಣಗಾಗಿಸಿದ್ದಾರೆ. ಈ ಸಭೆ ಬಳಿಕ ಒಂದಾಗಿ ಬಂದು ನಾಯಕರು ಮಾತನಾಡಿದರು.
ಈ ವೇಳೆ ಡಿಸಿ, ಎಸ್ಪಿ, ಸಿಇಒ, ಅಪರ ಜಿಲ್ಲಾಧಿಕಾರಿ, ಸಂಸದ ದೇವೆಂದ್ರಪ್ಪ, ಶಾಸಕ ಜಿ.ಸೋಮಶೇಖರ್ ರೆಡ್ಡಿ ಹಾಜರಿದ್ದರು.