ಬಳ್ಳಾರಿ: ಗಣಿ ಜಿಲ್ಲೆಯಾದ್ಯಂತ ಸುರಿದ ಮಹಾ ಮಳೆಗೆ ಬಳ್ಳಾರಿ ತಾಲೂಕಿನ ಸಂಜೀವರಾಯನ ಕೋಟೆ ಗ್ರಾಮದ ಕೆರೆಗೆ ಕೋಡಿ ಬಿದ್ದಿದೆ. ಗ್ರಾಮದ ಸುತ್ತಮುತ್ತಲಿನ ಪ್ರದೇಶ ವ್ಯಾಪ್ತಿಯ ಸರಿಸುಮಾರು 30 ಎಕರೆಗೂ ಅಧಿಕ ಬೆಳೆಗೆಈ ಮಹಾಮಳೆಯ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
ದೀಪಾವಳಿ ಅಮವಾಸ್ಯೆ ದಿನವಾದ ಸೋಮವಾರ ನಸುಕಿನ ವೇಳೆ ಬಳ್ಳಾರಿ ನಗರ, ತಾಲೂಕು ಸೇರಿ ಜಿಲ್ಲಾದ್ಯಂತ ಧಾರಾಕಾರ ಮಳೆ ಸುರಿದಿದೆ. ನಗರ ವ್ಯಾಪ್ತಿಯ ಸತ್ಯನಾರಾಯಣ ಪೇಟೆ, ಕನಕದುರ್ಗಮ್ಮ ದೇಗುಲದ ಹಾಗೂ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ರಸ್ತೆಗಳ ಕೆಳಸೇತುವೆಗಳು ಸಂಪೂರ್ಣವಾಗಿ ಮಳೆ ನೀರಿನಿಂದ ಜಲಾವೃತಗೊಂಡಿದ್ದು, ಸಾರ್ವಜನಿಕ ಸಂಚಾರಕ್ಕೂ ಅಡ್ಡಿಯುಂಟಾಗಿದೆ.