ETV Bharat / state

ಮತದಾನ ಬಹಿಷ್ಕರಿಸಿದ್ರೂ ಈ ಗ್ರಾಮಕ್ಕಿಲ್ಲ ಶಾಶ್ವತ ಕುಡಿಯುವ ನೀರು ಪೂರೈಕೆ!

ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆಗಳಿಗೆ ಕೊನೆಯೇ ಇಲ್ಲದಂತಾಗಿದೆ. ತಾಲೂಕಿನ ಹರಗಿನಡೋಣಿ ಗ್ರಾಮದ ಜನ ಇನ್ನೂ ಕೂಡ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಇದೆ.

ಕುಡಿಯುವ ನೀರು ಪೂರೈಕೆ
author img

By

Published : Mar 19, 2019, 4:57 PM IST

ಬಳ್ಳಾರಿ: ದಶಕದಿಂದಲೂ ಆ ಗ್ರಾಮದಲ್ಲಿ ಕುಡಿಯುವ ನೀರಿಗೆ ತತ್ವಾರವಿದೆಯಾದ್ರೂ, ಈವರೆಗೂ ಶಾಶ್ವತ ಕುಡಿಯುವ ನೀರು ಪೂರೈಕೆಗೆ ಜಿಲ್ಲಾಡಳಿತ ಅಥವಾ ಜನಪ್ರತಿನಿಧಿಗಳು ಚಿಂತನೆಯನ್ನೇ ನಡೆಸಿಲ್ಲ.

ಈ ಹಿಂದೆ ನಡೆದಿದ್ದ ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಆ ಗ್ರಾಮದ ಮತದಾರರು ಮತದಾನ ಬಹಿಷ್ಕರಿಸಿ ತಮಗೆ ಮೂಲಸೌಲಭ್ಯ ಕಲ್ಪಿಸಿಕೊಡಿ ಎಂದು ಆಗ್ರಹಿಸಿದ್ದರು. ಆದರೆ ಮತ್ತೊಂದು ಚುನಾವಣೆ ಬಂದರೂ ಈ ಗ್ರಾಮಸ್ಥರಿಗೆ ಕುಡಿಯುವ ನೀರಿನ ಬವಣೆ ಜೀವಂತವಾಗಿದೆ.

ಕುಡಿಯುವ ನೀರು ಪೂರೈಕೆ

ಹೌದು, ಬಳ್ಳಾರಿ ತಾಲೂಕಿನ ಹರಗಿನಡೋಣಿ ಗ್ರಾಮಸ್ಥರು ಶಾಶ್ವತ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಕಳೆದ ಉಪಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವ ಮುಖೇನ ಜನಪ್ರತಿನಿಧಿಗಳಿಗೆ ತಕ್ಕಪಾಠ ಕಲಿಸಿದ್ದ ಗ್ರಾಮಸ್ಥರು ಇದೀಗ ಲೋಕಸಭಾ ಸಾರ್ವತ್ರಿಕ ಚುನಾವಣೆ ಎದುರಾಗಿದೆಯಾದ್ರೂ, ಟ್ಯಾಂಕರ್ ಮೂಲಕವೇ ಈವರೆಗೂ ಕುಡಿಯುವ ನೀರು ಪೂರೈಕೆಸಲಾಗುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಗ್ರಾಮಸ್ಥರ ನಿಲುವು ಏನಿದೆ ಎಂಬುದನ್ನು ಕಾದು ನೋಡಬೇಕಿದೆ.

ರೈತನ ಬೋರ್​ವೆಲ್ ಆಸರೆ:

ಗ್ರಾಮದ ಹೊರ ವಲಯದ ಪ್ರಕಾಶಪ್ಪ ಎಂಬುವರ ಜಮೀನಿನಲ್ಲಿರುವ ಬೋರ್​ವೆಲ್​ ಈ ಗ್ರಾಮದ ಜನರಿಗೆ ಕುಡಿಯುವ ನೀರು ಪೂರೈಕೆಗೆ ಆಸರೆಯಾಗಿದೆ. ಸತತ ಎಂಟು ತಿಂಗಳಿಂದಲೂ ಗ್ರಾಮಕ್ಕೆ ಕರ್ನಾಟಕ ಗ್ರಾಮೀಣ ಮತ್ತು ನಗರ ನೀರು ಪೂರೈಕೆ ಇಲಾಖೆಯ ವಾಹನವು ಸೇರಿದಂತೆ ಸುಮಾರು ನಾಲ್ಕು ವಾಹನಗಳು ದಿನಾಲೂ ನೀರು ಪೂರೈಸುತ್ತಿವೆ. ಬೆಳಗ್ಗೆ 10 ಗಂಟೆಗೆ ನೀರು ಪೂರೈಕೆ ಕಾರ್ಯಾರಂಭ ಮಾಡಿದರೆ, ಸಂಜೆ ಐದಾರು ಗಂಟೆಯವರೆಗೂ ನೀರು ಪೂರೈಸಲಾಗುತ್ತದೆ. ಈ ವೇಳೆ ನಾಮುಂದು ತಾಮುಂದು ಎಂಬಂತೆ ಜನರು ಟ್ಯಾಂಕರ್​ಗಳಿಗೆ ಮುಗಿಬೀಳುವ ದೃಶ್ಯ ಕಂಡುಬರುತ್ತಿದೆ.

Intro:ಗಣಿನಾಡಿನಲ್ಲಿ ಕುಡಿಯುವ ನೀರಿಗೆ ತತ್ವಾರ
ಮತದಾನ ಬಹಿಷ್ಕರಿಸಿದ್ರೂ ಈ ಗ್ರಾಮಕ್ಕಿಲ್ಲ ಶಾಶ್ವತ ಕುಡಿಯುವ ನೀರು ಪೂರೈಕೆ!
ಬಳ್ಳಾರಿ: ದಶಕದಿಂದಲೂ ಆ ಗ್ರಾಮದಲ್ಲಿ ಕುಡಿಯುವ ನೀರಿಗೆ ತತ್ವಾರವಿದೆಯಾದ್ರೂ, ಈವರೆಗೂ ಶಾಶ್ವತ ಕುಡಿಯುವ ನೀರು ಪೂರೈಕೆಗೆ ಚಿಂತನೆಯೇ ನಡೆದಿಲ್ಲ.
ಆಗಾಗಿ, ಬಳ್ಳಾರಿ ಲೋಕಸಭಾ ಉಪಚುನಾವಣೆಯಲಿ ಆ ಗ್ರಾಮದ ಮತದಾರರು ಮತದಾನ ಬಹಿಷ್ಕರಿಸಿದ್ದರು. ಕೇವಲ ಚುನಾವಣೆ ಬಂದಾಗ ಮಾತ್ರ ಮತಯಾಚನೆಗೆ ಬರುವ ಜನ ಪ್ರತಿನಿಧಿಗಳಿಗೆ ಆ ಗ್ರಾಮದ ಗ್ರಾಮಸ್ಥರು ಒಕ್ಕೊರಲಿನಿಂದ ಮತದಾನ ಬಹಿಷ್ಕರಿಸುವುದು ನಾಚಿಗೇಡಿನ ಸಂಗತಿಯಾಗಿ ಪರಿಣಮಿಸಿತು. ಈವರೆಗೂ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಗೆ ಜಿಲ್ಲಾ ಪಂಚಾಯಿತಿ ಕಿಂಚಿತ್ತೂ ಕಾಳಜಿ ವಹಿಸದೇ ಟ್ಯಾಂಕರ್ ಗಳ ಮೊರೆ ಹೋಗಿದೆ.
ಹೌದು, ಇಂಥದೊಂದು ಅಪರೂಪದ ಸನ್ನಿವೇಶಕ್ಕೆ ಗಣಿಜಿಲ್ಲೆಯ ಬಳ್ಳಾರಿ ತಾಲೂಕಿನ ಹರಗಿನಡೋಣಿ ಗ್ರಾಮವು ಸಾಕ್ಷಿಯಾಗಿದೆ.
ಕಳೆದ ಉಪಚುನಾವಣೆಯಲಿ ಮತದಾನ ಬಹಿಷ್ಕರಿಸುವ ಮುಖೇನ ಜನಪ್ರತಿನಿಧಿಗಳಿಗೆ ತಕ್ಕಪಾಠ ಕಲಿಸಿದ್ದ ಗ್ರಾಮಸ್ಥರು ಇದೀಗ ಲೋಕಸಭಾ ಸಾರ್ವತ್ರಿಕ ಚುನಾವಣೆ ಎದುರಾಗಿದೆಯಾ ದ್ರೂ, ಟ್ಯಾಂಕರ್ ಮೂಲಕವೇ ಈವರೆಗೂ ಕುಡಿಯುವ ನೀರು ಪೂರೈಕೆಯಾಗುತ್ತದೆ. ಈ ಬಾರಿಯ ಚುನಾವಣೆಯಲಿ ಗ್ರಾಮ ಸ್ಥರ ನಿಲುವು ಏನಿದೆ ಎಂಬುದು ಕಾದು ನೋಡಬೇಕಿದೆ.

Body:ಪ್ರಕಾಶಪ್ಪನ ಹೊಲದ ಬೋರ್ ವಲ್ ಆಸರೆ: ಗ್ರಾಮ ಹೊರ ವಲಯದ ಪ್ರಕಾಶಪ್ಪನ ಹೊಲದಲ್ಲಿನ ಬೋರ್ ವಲ್ ಗಳೇ ಈ ಗ್ರಾಮದ ಕುಡಿಯುವ ನೀರು ಪೂರೈಕೆಗೆ ಆಸರೆಯಾಗಿದೆ. ಸತತ ಎಂಟು ತಿಂಗಳಿಂದಲೂ ಗ್ರಾಮಕ್ಕೆ ಕರ್ನಾಟಕ ಗ್ರಾಮೀಣ ಮತ್ತು ನಗರ ನೀರು ಪೂರೈಕೆ ಇಲಾಖೆಯ ವಾಹನವು ಸೇರಿದಂತೆ ಸರಿ ಸುಮಾರು ನಾಲ್ಕು ಟ್ರ್ಯಾಕ್ಟರ್ ಗಳು ದಿನಾಲೂ ನೀರು ಪೂರೈಕೆ ಕಾಯಕದಲಿ ತೊಡಗಿಕೊಂಡಿವೆ. ಈ ನಾಲ್ಕು ವಾಹನಗಳು ಐದಾರು ವಂತಿಗೆಯ ನೀರನ್ನು ಪೂರೈಕೆ ಮಾಡುತ್ತಿವೆ. ಬೆಳಿಗ್ಗೆ 10 ಗಂಟೆಗೆ ನೀರು ಪೂರೈಕೆ ಕಾರ್ಯಾರಂಭ ಮಾಡಿದರೆ, ಸಂಜೆ ಐದಾರು ಗಂಟೆಯವರೆಗೂ ನೀರು ಪೂರೈಕೆ ಮಾಡಲಾಗುತ್ತದೆ. ಆದರೂ, ನಾಮುಂದು..ತಾಮುಂದು ಎಂಬಂತೆ ಟ್ಯಾಂಕರ್ ಗಳು ಬರಬರುತ್ತಿದ್ದಂತೆಯೇ ಮುಗಿಬೀಳುವ ದೃಶ್ಯವಂತೂ ಸಾಮಾನ್ಯವಾಗಿ ಬಿಟ್ಟಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:ಪವರ್ ಡೈರೆಕ್ಟರ್ ನಲ್ಲಿ ಈ ವಿಡಿಯೊ ಕಳಿಸಲಾಗಿದೆ.
R_KN_BEL_02_190319_HARGIN_DONI_WATER_SUPPLY_STORY
ETV Bharat Logo

Copyright © 2024 Ushodaya Enterprises Pvt. Ltd., All Rights Reserved.