ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ ಶಿವಮೊಗ್ಗ ಸಂಸದ ರಾಘವೇಂದ್ರ, ಕುಟುಂಬ ಸಮೇತರಾಗಿ ಬಂದು ವೀಕ್ಷಣೆ ಮಾಡಿದರು.
ಪತ್ನಿ ತೇಜಸ್ವಿನಿ ಹಾಗೂ ಪುತ್ರನೊಂದಿಗೆ ಜಲಾಶಯದ ಕೆಳ ಭಾಗದ ಸೌಂದರ್ಯವನ್ನು ಕಂಡು ಖುಷಿ ಪಟ್ಟರು. ಜಲಾಶಯದ ಕ್ರಸ್ಟ್ ಗೇಟ್ ಬಳಿ ನಿಂತು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು. ನಂತರ ಜಲಾಶಯದ ವೈಕುಂಠ ಪ್ರವಾಸಿ ಮಂದಿರಕ್ಕೆ ತೆರಳಿ, ಅಲ್ಲಿಂದ ವಿಹಂಗಮನ ನೋಟವನ್ನು ಕಣ್ತುಂಬಿಕೊಂಡರು.
ಈ ವೇಳೆ ತುಂಗಭದ್ರಾ ಮಂಡಳಿಯ ಇಇ ಮಧುಸೂದನ್, ಸೆಕ್ಷನ್ ಅಧಿಕಾರಿ ವಿಶ್ವನಾಥ ಇನ್ನಿತರರಿದ್ದರು.