ಹೊಸಪೇಟೆ (ವಿಜಯನಗರ) : ಹರಪನಹಳ್ಳಿ ಶಾಸಕ ಕರುಣಾಕರ್ ರೆಡ್ಡಿ ಅವರಿಗೆ ಕೊರೊನಾ ಸೋಂಕು ತಗುಲಿದೆ.
ಈ ಬಗ್ಗೆ ವಿಡಿಯೋ ಮೂಲಕ ಮಾಹಿತಿ ನೀಡಿರುವ ಶಾಸಕರು, ನನಗೆ ಕೊರೊನಾ ಪಾಸಿಟಿವ್ ಬಂದಿದೆ. ನಾನು ಹೋಮ್ ಐಸೋಲೇಷನ್ನಲ್ಲಿದ್ದೇನೆ.
ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಲಾಗುತ್ತಿದೆ. ಮನೆಯಲ್ಲೇ ಇದ್ರೂ ಸಹ ಹರಪನಹಳ್ಳಿ ಕ್ಷೇತ್ರದ ಮಾಹಿತಿ ಪಡೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಹರಪನಹಳ್ಳಿ ಆಕ್ಸಿಜನ್ ಘಟಕ ಸ್ಥಾಪನೆ ಬಗ್ಗೆ ಜಿಲ್ಲಾಡಳಿತಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಈ ಕುರಿತು ಉತ್ತಮ ಸ್ಪಂದನೆ ದೊರೆತಿದೆ. ಅಲ್ಲದೇ ಹರಪನಹಳ್ಳಿಯಲ್ಲಿ ನೂರು ಬೆಡ್ ಹಾಸಿಗೆ ಆಸ್ಪತ್ರೆ ತಯಾರಿ ಪ್ರಕ್ರಿಯೆ ನಡೆದಿದೆ. ಆದರೆ, ಸದ್ಯ ಜನರಿಗೆ ತೊಂದರೆ ಆಗಬಾರದು ಎಂದು ಜಿಂದಾಲ್ ಆಸ್ಪತ್ರೆಗೆ ಕಳುಹಿಸಿ ಕೊಡಲಾಗುತ್ತಿದೆ ಎಂದಿದ್ದಾರೆ.