ಹೊಸಪೇಟೆ: ನಗರದ ಕೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ ಹಾಗೂ ಬಡವರಿಗೆ ಅರಣ್ಯ ಸಚಿವ ಆನಂದ್ ಸಿಂಗ್ ಉಚಿತ ಹಾಲು ವಿತರಣೆ ಮಾಡಿದರು.
ಬಡವರು, ನಿರ್ಗತಿಕರು, ಅಲೆಮಾರಿ ಜನಾಂಗದವರು ಕೊರೊನಾ ವಿಚಾರವಾಗಿ ಜಾಗೃತಿ ವಹಿಸಬೇಕು. ಸ್ವಲ್ಪ ದಿನಗಳ ಕಾಲ ಮನೆಯಲ್ಲಿರಿ, ಗುಂಪು ಗುಂಪಾಗಿ ಯಾರೂ ಹೊರಗಡೆ ಬರಬಾರದು ಎಂದರು.
ಆರೋಗ್ಯ ಇಲಾಖೆ, ವೈದ್ಯರು, ಪೊಲೀಸರು ನಿಮ್ಮ ರಕ್ಷಣೆ ಮಾಡುವುದಕ್ಕೆ ತಮ್ಮ ಜೀವವನ್ನು ಮುಡಿಪಾಗಿಟ್ಟಿದ್ದಾರೆ. ಅವರಿಗೆ ಸಹಕಾರ ನೀಡಿ. ನಾಗರಿಕರು ಮುಖಗಳಿಗೆ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಸರ್ಕಾರದ ನಿಯಮವನ್ನು ಸರಿಯಾಗಿ ಪಾಲಿಸಲೇಬೇಕು ಎಂದು ಮನವಿ ಮಾಡಿದರು.