ಬಳ್ಳಾರಿ: ಲಂಬಾಣಿ, ಭೋವಿ, ಕೊರಮ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿಯಿಂದ ಕೈಬಿಡದಂತೆ ಒತ್ತಾಯಿಸಿ ಬಳ್ಳಾರಿಯ ಸುತ್ತಮುತ್ತಲ ತಾಂಡಾಗಳ ಜನರು, ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆಯೋ ಮೂಲಕ ಪತ್ರ ಚಳುವಳಿ ನಡೆಸಿದ್ದಾರೆ.
ಬಳ್ಳಾರಿಯ ನಗರದ ಪ್ರಧಾನ ಅಂಚೆ ಕಚೇರಿಯ ಬಳಿ ಸುದ್ದಿಗಾರೊಂದಿಗೆ ಮಾತನಾಡಿದ ಬಂಜಾರ ಸಮುದಾಯದ ಮುಖಂಡ ಗೋವಿಂದ ನಾಯ್ಕ್, ಲಂಬಾಣಿ ಜನಾಂಗದವರು, ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳು ಎಸ್ಸಿ ಪಟ್ಟಿಯಲ್ಲೇ ಉಳಿಯಬೇಕು. ಈ ಕುರಿತು ಸುಪ್ರೀಂಕೋರ್ಟ್ನಲ್ಲಿ ಯಾವುದೇ ಅರ್ಜಿ ಬಾಕಿ ಇಲ್ಲ, ಡಾ.ಬಿ.ಆರ್ ಅಂಬೇಡ್ಕರ್ ಅವರೇ ಈ ಜಾತಿಗಳನ್ನು ಎಸ್ಸಿ ಎಂದು ಗುರುತಿಸಿದ್ದಾರೆ ಎಂದು ಬಂಜಾರ ಸಮುದಾಯದ ಮುಖಂಡರಾದ ಗೋವಿಂದ ನಾಯ್ಕ್ ತಿಳಿಸಿದರು
ಸದರಿ ಜಾತಿಗಳನ್ನು ಎಸ್ಸಿಯಿಂದ ಕೈಬಿಡಲಾಗಿದೆ ಎಂಬ ವದಂತಿ ಹಬ್ಬುತ್ತಿದೆ. ಸುಳ್ಳು ವದಂತಿಗಳನ್ನು ಹರಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಬಳ್ಳಾರಿಯ ಬೆಳಗಲ್ ತಾಂಡ, ಹೊನ್ನಳ್ಳಿ ತಾಂಡ, ಜಾನೆಕುಂಟೆ ತಾಂಡ, ಬೆಳಗಲ್ ಕ್ರಾಸ್ನ ಭಾಗದ ಲಂಬಾಣಿ ಜನಾಂಗದವರು ಭಾಗಿಯಾಗಿ, ಪತ್ರ ಚಳುವಳಿ ನಡೆಸಿದರು. ಈ ಸಮಯದಲ್ಲಿ ಬಳ್ಳಾರಿ ಸುತ್ತಮುತ್ತಲಿನ ವಿವಿಧ ಗ್ರಾಮದ ಒಟ್ಟು 5 ಸಾವಿರ ಬಂಜಾರ್ ಸಮುದಾಯದ ಜನರು ಸಿಎಂಗೆ ಪತ್ರ ಬರೆದಿದ್ದಾರೆ.