ಬಳ್ಳಾರಿ: ದಸರಾ ಮಹೋತ್ಸವದ ನಿಮಿತ್ತ ಜಿಲ್ಲೆಯ ಹರಪನಹಳ್ಳಿ ಪಟ್ಟಣ ಹೊರವಲಯದ ದೊಡ್ಡ ಮೈಲಾರಲಿಂಗೇಶ್ವರ ದೇಗುಲದಲ್ಲಿ ಕೆಲದಿನಗಳ ಹಿಂದೆ ಕಾರಣಿಕೋತ್ಸವವು ಅದ್ಧೂರಿಯಾಗಿ ನಡೆದಿದೆ.
ಬಾನೆತ್ತರಕ್ಕೆ ಮುಖಮಾಡಿರುವ ಬಿಲ್ಲನ್ನೇರಿದ ಗೋರವಯ್ಯ ಮುತ್ತಿನ ಸದರು ತೂಗುಯ್ಯಾಲೆಯಲ್ಲಿ ತೂಗುತ್ತಲೇ ಪರಾಕ್ ಎಂಬ ಕಾರಣಿಕ ನುಡಿಯನ್ನು ಗೋರವಯ್ಯ ನುಡಿದಿದ್ದಾರೆ.
ಪ್ರತಿವರ್ಷ ಎರಡು ಬಾರಿ ಈ ಕಾರ್ಣಿಕೋತ್ಸವವು ನಡೆಯುತ್ತದೆ. ರಾತ್ರಿ ವೇಳೆ ನಡೆಯುವ ಕಾರಣಿಕೋತ್ಸವದಲ್ಲಿ ದೇಗುಲದ ಧರ್ಮದರ್ಶಿಗಳು, ಗೋರವಯ್ಯ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.