ETV Bharat / state

ತೋಟದ ಮನೆಯಲ್ಲೇ ಲಸಿಕೆ ಕೇಂದ್ರ ಸ್ಥಾಪಿಸಿ 50 ಮಂದಿಗೆ ಲಸಿಕೆ ನೀಡಿದ ಆರೋಗ್ಯ ಸಿಬ್ಬಂದಿ

ಕೃಷಿ ಕಾರ್ಮಿಕರಿಗೆ ತೋಟದಲ್ಲೇ ಲಸಿಕೆ ಹಾಕುವ ಮೂಲಕ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಆರೋಗ್ಯ ಸಿಬ್ಬಂದಿ ವಿಶೇಷ ಪ್ರಯತ್ನ ಮಾಡಿದ್ದಾರೆ.

vaccine center in the Plant
ತೋಟದ ಮನೆಯಲ್ಲಿ ಲಸಿಕೆ
author img

By

Published : Jun 15, 2021, 10:12 AM IST

ಬಳ್ಳಾರಿ: ಊಹಾಪೋಹಗಳಿಗೆ ಕಿವಿಗೊಟ್ಟು ಕೋವಿಡ್ ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದ ಕಾರ್ಮಿಕರ ಬಳಿಗೆ ತೆರಳಿ ಲಸಿಕೆ ಹಾಕಿಸುವ ಮೂಲಕ ಜಿಲ್ಲೆಯ ಸಂಡೂರು ತಾಲೂಕು ಆರೋಗ್ಯ ಇಲಾಖೆ ವಿಶೇಷ ಪ್ರಯತ್ನ ಮಾಡಿದೆ.

ತಾಲೂಕಿನ ಕುರೇಕುಪ್ಪ ಗ್ರಾಮದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 50 ಮಂದಿ ಕಾರ್ಮಿಕರಿಗೆ ಲಸಿಕೆ ಹಾಕಲಾಗಿದೆ. ಕುರೇಕುಪ್ಪ ಗ್ರಾಮದ ವಾರ್ಡ್ ನಂಬರ್ 1ರ ತೋಟದಲ್ಲಿ ಕೃಷಿ ಕೆಲಸ ಮಾಡಿಕೊಂಡು ಸುಮಾರು 50 ಜನ ಅಲ್ಲೇ ವಾಸವಿದ್ದರು. ಇವರು ನಿಗದಿತ ಲಸಿಕಾ ಕೇಂದ್ರಗಳಿಗೆ ತೆರಳಿ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದರು. ಹಾಗಾಗಿ, ತಾಲೂಕು ಆರೋಗ್ಯಾಧಿಕಾರಿ ಡಾ. ಕುಶಾಲ್ ರಾಜ್ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಲಸಿಕೆ ಕುರಿತು ಜಾಗೃತಿ ಮೂಡಿಸಿದ್ದರು.

ಜಾಗೃತಿಯ ಪರಿಣಾಮ, ಜನರು ಲಸಿಕೆ ಹಾಕಿಸಿಕೊಳ್ಳಲು ಒಪ್ಪಿದ್ದರು. ಹಾಗಾಗಿ, ತೋಟದ ಮನೆಯಲ್ಲೇ ತಾತ್ಕಾಲಿಕ ಲಸಿಕಾ ಕೇಂದ್ರ ಸ್ಥಾಪಿಸಿ 50 ಮಂದಿಗೆ ಲಸಿಕೆ ನೀಡುವ ಕಾರ್ಯ ಮಾಡಲಾಗಿದೆ. ಆರೋಗ್ಯ ಸಿಬ್ಬಂದಿಯ ವಿಶೇಷ ಪ್ರಯತ್ನ ಈ ಮೂಲಕ ಫಲ ಕಂಡಿದೆ.

ಈ ಬಗ್ಗೆ ಈಟಿವಿ ಭಾರತ್​ನೊಂದಿಗೆ ಮಾತನಾಡಿದ ಸಂಡೂರು ತಾಲೂಕು ಆರೋಗ್ಯಾಧಿಕಾರಿ ಡಾ. ಕುಶಾಲ್ ರಾಜ್, ಕಳೆದ ಶನಿವಾರದಂದು ಆರೋಗ್ಯ ಇಲಾಖೆ ಸಿಬ್ಬಂದಿ ಕುರೇಕುಪ್ಪ ಗ್ರಾಮಕ್ಕೆ ತೆರಳಿದಾಗ, ಸಾಕಷ್ಟು ರೈತರು ಹೊಲಕ್ಕೆ ಹೋಗುವ ನೆಪ ಹೇಳಿ ಲಸಿಕೆ ಪಡೆಯಲು ಹಿಂದೇಟು ಹಾಕಿದ್ದನ್ನು ನಾನು ಕಣ್ಣಾರೆ ಕಂಡಿದ್ದೆ.

ಹಾಗಾಗಿ, ನಾವೇ ನೇರವಾಗಿ ತೋಟದ ಮನೆಗೆ ತೆರಳಿ, ಅಲ್ಲಿಯೇ ತಾತ್ಕಾಲಿಕ ಲಸಿಕೆ ಕೇಂದ್ರ ಸ್ಥಾಪಿಸಿ ರೈತರಿಗೆ ಲಸಿಕೆ ಹಾಕಿದ್ದೇವೆ. ಲಸಿಕೆ ಕೇಂದ್ರ ಸ್ಥಾಪಿಸುವಾಗ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿದ್ದೇವೆ ಎಂದು ತಿಳಿಸಿದ್ದಾರೆ.

ಓದಿ : ಡಾ. ಅಶ್ವತ್ಥ ನಾರಾಯಣ್‌ ಫೌಂಡೇಶನ್‌ನಿಂದ ಮಲ್ಲೇಶ್ವರ ಕ್ಷೇತ್ರದಲ್ಲಿ 25,000 ಲಸಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.