ಬಳ್ಳಾರಿ/ಶಿವಮೊಗ್ಗ: ಕೊರೊನಾದಿಂದ ಲಾಕ್‌ಡೌನ್ ಆಗುತ್ತಿದ್ದಂತೆ ಆಹಾರೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಆದರೆ, ಅನ್ಲಾಕ್ ನಂತರ ಕೆಲವರು ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಎಸೆದ್ರೆ, ಮತ್ತೆ ಕೆಲವರು ತಿಂಡಿಗಳನ್ನು ಬಿಡಿಬಿಡಿಯಾಗಿ ವಿಂಗಡಿಸಿ ಅದನ್ನು ಮತ್ತೆ ಮಾರಾಟಕ್ಕೆ ಮುಂದಾಗಿದ್ದು ಬಯಲಾಗಿದೆ.
ಇದನ್ನ ಗಮನಿಸಿದ ಬಳ್ಳಾರಿ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಪ್ರಾಧಿಕಾರ ಮತ್ತು ಹೊಸಪೇಟೆ ತಾಲೂಕಿನ ಅಂಕಿತ ಅಧಿಕಾರಿಗಳು, ವಿಶೇಷ ತಂಡಗಳನ್ನು ರಚಿಸಿ ದಿನಾಂಕ ಮುಗಿದ ಆಹಾರ ಪದಾರ್ಥಗಳು ಮಾರಾಟವಾಗದಂತೆ ನೋಡಿಕೊಳ್ಳಲು ಮುಂದಾದರು.
ಅವರ ಕಾರ್ಯಾಚರಣೆ ಪರಿಣಾಮ ಕಳಪೆ ಗುಣಮಟ್ಟದ ಆಹಾರ ಪದಾರ್ಥ ಮಾರಾಟಕ್ಕೆ ಸಂಬಂಧಿಸಿದಂತೆ ಕೇವಲ 7 ಪ್ರಕರಣ ಪತ್ತೆಯಾಗಿವೆ. ಆದರೆ, ದಿನಾಂಕ ಮುಗಿದ ಆಹಾರ ಪದಾರ್ಥಗಳ ಮಾರಾಟ ಕಂಡು ಬಂದಿಲ್ಲ.
ಶಿವಮೊಗ್ಗದಲ್ಲಿ ಬೇಕರಿ ಉದ್ಯಮ ಹೊಸದಾಗಿ ಆರಂಭಿಸಿದಂತಾಗಿದೆ. ಲಾಕ್‌ಡೌನ್ ಸಂದರ್ಭ ಎಲ್ಲವೂ ಹಾಳಾಗಿ ಬಹಳ ನಷ್ಟ ಅನುಭವಿಸಿದ್ದೇವೆ ಅಂತಾರೆ ಬೇಕರಿ ಮಾಲೀಕರು.
ಅನ್ಲಾಕ್ ನಂತರ ದಿನಾಂಕ ಮುಗಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ಒಂದಿಷ್ಟು ಮಂದಿ ಪ್ರಯತ್ನಿಸಿದ್ದರೂ ಕೂಡ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕಡಿವಾಣ ಹಾಕಿದ್ದಾರೆ. ಸಾರ್ವಜನಿಕರು ಕೂಡ ಖರೀದಿ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕಿದೆ.