ಬಳ್ಳಾರಿ: ಕೊಟ್ಟೂರಿನ ಶ್ರೀ ಗುರುಬಸವೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಹಾಗೂ ಬೆಳ್ಳಿ ರಥೋತ್ಸವವನ್ನು ಜಿಲ್ಲಾಧಿಕಾರಿಗಳು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ. ಇದರಿಂದ ನಮಗೆ ಬೇಸರವಾಗಿದೆಯೆಂದು ಹಗರಿಬೊಮ್ಮನಹಳ್ಳಿ ತಾಲೂಕಿನ ನಂದಿಪುರ ಕ್ಷೇತ್ರದ ಶ್ರೀ ಮಹೇಶ್ವರ ಶಿವಾಚಾರ್ಯರು ಅಸಮಾಧಾನ ಹೊರಹಾಕಿದ್ದಾರೆ.
ಜಿಲ್ಲಾಧಿಕಾರಿಗಳು ಕೊಟ್ಟೂರೇಶ್ವರರ ಕಾರ್ತಿಕೋತ್ಸವಕ್ಕೆ ಬರುವ ಭಕ್ತಾದಿಗಳನ್ನು ತಡೆಯುವ ವ್ಯವಸ್ಥೆ ಮಾಡಲಿ, ಆದ್ರೆ ರಥೋತ್ಸವ ರದ್ದುಗೊಳ್ಳಬಾರದೆಂದು ಮನವಿ ಮಾಡಿದ್ದಾರೆ. ಬಹಳ ಹಿಂದಿನಿಂದಲೂ, ಅದರಲ್ಲೂ ಕರ್ಫ್ಯೂ ಇದ್ದಾಗಲೂ ಕೂಡ ಈ ಒಂದು ಆಚರಣೆಯನ್ನು ನಡೆಸಿಕೊಂಡು ಬಂದಿದ್ದೇವೆ. ಹಾಗಾಗಿ ಈ ಉತ್ಸವಕ್ಕೆ ಯಾವುದೇ ರೀತಿಯ ಅಡ್ಡಿ ಉಂಟುಮಾಡಬಾರದು, ಭಕ್ತರ ಭಾವನೆಗೆ ನೋವಾಗದಿರಲೆಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಕರಗಾಂವ ಮತಗಟ್ಟೆಯಲ್ಲಿ ಅಭ್ಯರ್ಥಿಗಳ ಪರ ಮತಪ್ರಚಾರ ಆರೋಪ!
ಕೋವಿಡ್ ಹಿನ್ನೆಲೆ ಭಕ್ತರನ್ನು ತಮ್ಮ-ತಮ್ಮ ಮನೆಯಲ್ಲಿಯೇ ಇರುವಂತೆ ಸೂಚಿಸಿ, ಮನೆಯಿಂದಲೇ ದೇವರ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಿ. ಹಿಂದೂ ಧರ್ಮದ ಜೀವನಾಡಿಯಾಗಿರುವ ನಮ್ಮ ವೀರಶೈವ ಧರ್ಮದ ಆಚಾರ ವಿಚಾರಗಳು, ಮನುಕುಲದ ಒಳಿತಿಗಾಗಿಯೇ ಇರುವಂತಹವು. ಪಂಚಗಣಾಧೀಶ್ವರರಲ್ಲಿ ಅಗ್ರಗಣ್ಯರಾದ ಶ್ರೀ ಗುರು ಕೊಟ್ಟೂರೇಶ್ವರರು ಈ ಭಾಗದ ಜನರಿಗೆ ನಡೆದಾಡುವ ದೇವರು. ಹಾಗಾಗಿ 400 ವರ್ಷಗಳ ಹಿಂದಿನಿಂದಲೂ ಈ ಧಾರ್ಮಿಕ ಕೈಂಕರ್ಯ ನಡೆದುಕೊಂಡು ಬಂದಿದ್ದು, ಅವರು ಸೂಚಿಸಿರುವ ಮಾರ್ಗದಲ್ಲಿಯೇ ನಡೆಯಬೇಕು. ಈ ಉತ್ಸವ ಎಂದಿನಂತೆಯೇ ನಡೆಯಬೇಕೆಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಬೇರೆ ಧರ್ಮದ ಆಚರಣೆಗೆ ಅವಕಾಶವನ್ನು ಕೊಟ್ಟು, ಶ್ರೀ ಗುರು ಕೊಟ್ಟೂರೇಶ್ವರ ಬೆಳ್ಳಿ ರಥೋತ್ಸವಕ್ಕೆ ಅಡ್ಡಿ ಉಂಟುಮಾಡಬಾರದು. ತಡೆಯುವುದಾದರೆ ಎಲ್ಲವನ್ನೂ ತಡೆಯಲಿ ಎಂದು ತಿಳಿಸಿದರು.