ಹೊಸಪೇಟೆ: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ವಜಾ ಅಸ್ತ್ರ ಪ್ರಯೋಗ ಮುಂದುವರೆದಿದ್ದು, ಹೊಸಪೇಟೆ ವಿಭಾಗದ ನಾಲ್ಕು ಟ್ರೈನಿಗಳನ್ನು ಕೆಲಸದಿಂದ ತೆಗೆದು ಹಾಕಲಾಗಿದೆ.
ಓದಿ: ತಜ್ಞರು ಲಾಕ್ ಡೌನ್ ಮಾಡಿ ಅಂತ ಹೇಳಿಲ್ಲ, ಟಫ್ ರೂಲ್ಸ್ ಜಾರಿ ಮಾಡಲು ಶಿಫಾರಸು ಮಾಡಿದ್ದಾರೆ: ಡಿಕೆಶಿ
ಇಬ್ಬರು ಕ್ಲೀನರ್ಗಳು, ಇಬ್ಬರು ಚಾಲಕರು ಕಂ ನಿರ್ವಾಹಕರನ್ನು ಕೆಲಸದಿಂದ ತಗೆದು ಹಾಕಲಾಗಿದೆ. ಮುಷ್ಕರಕ್ಕೆ ಪ್ರಚೋದನೆ ನೀಡಿದ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೊಸಪೇಟೆ ಎನ್ಈಕೆಎಸ್ಆರ್ಟಿಸಿ ವಿಭಾಗದ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.