ETV Bharat / state

ಬಳ್ಳಾರಿಯ ದಲಿತರ ಕಾಲೋನಿಯಲ್ಲಿ ಪೇಜಾವರ ಮಠದ ವಿಶ್ವ ಪ್ರಸನ್ನ ಸ್ವಾಮೀಜಿ ಪಾದಯಾತ್ರೆ - ಬಳ್ಳಾರಿಯಲ್ಲಿ ಪಾದಯಾತ್ರೆ ಕೈಗೊಂಡ ಪೇಜಾವರ ಮಠದ ಕಿರಿಯ ಸ್ವಾಮೀಜಿ

ಪೇಜಾವರ ಮಠದ ವಿಶ್ವ ಪ್ರಸನ್ನ ಶ್ರೀಗಳು ಬಳ್ಳಾರಿಯ ಹರಿಶ್ಚಂದ್ರ ನಗರದ ದಲಿತರ ಕಾಲೋನಿಯಲ್ಲಿ ಪಾದಯಾತ್ರೆಯನ್ನ ಕೈಗೊಂಡಿದ್ದಾರೆ. ದಿ. ಪೇಜಾವರ ಶ್ರೀಗಳ ಮಾರ್ಗವನ್ನು ವಿಶ್ವ ಪ್ರಸನ್ನ ಸ್ವಾಮೀಜಿ ಮುಂದುವರಿಸಿದ್ದಾರೆ.

bellary
ಪೇಜಾವರ ಮಠದ ಕಿರಿಯ ಸ್ವಾಮೀಜಿ
author img

By

Published : Jan 31, 2021, 9:38 AM IST

Updated : Jan 31, 2021, 10:39 AM IST

ಬಳ್ಳಾರಿ: ಇಲ್ಲಿನ ತಾಳೂರು ರಸ್ತೆಯಲ್ಲಿರುವ ರಾಮನಗರ ಕಾಲೋನಿ ಬಳಿಯ ಹರಿಶ್ಚಂದ್ರ ನಗರದ ದಲಿತರ ಕಾಲೋನಿಗೆ ಪೇಜಾವರ ಮಠದ ವಿಶ್ವ ಪ್ರಸನ್ನ ಶ್ರೀಪಾದಂಗಳವರು ಭೇಟಿ ನೀಡಿದ್ದರು.

ಪೇಜಾವರ ಮಠದ ಸ್ವಾಮೀಜಿಯಾದ ಬಳಿಕ ಮೊದಲ ಬಾರಿಗೆ ಬಳ್ಳಾರಿಯ ಹರಿಶ್ಚಂದ್ರ ನಗರದ ದಲಿತರ ಕಾಲೋನಿಯಲ್ಲಿ ಪಾದಯಾತ್ರೆಯನ್ನ ಕೈಗೊಂಡಿದ್ದಾರೆ. ಹರಿಶ್ಚಂದ್ರ ನಗರದ ಪ್ರಮುಖ ರಸ್ತೆಯಲ್ಲಿ ಪಾದಯಾತ್ರೆ ಮಾಡುವ ಮೂಲಕ ದಲಿತರ ಗಮನ ಸೆಳೆದಿದ್ದಾರೆ. ಅಲ್ಲದೇ, ದಲಿತರ ಮನೆಗಳಿಗೆ ತೆರಳಿ ಪಾದಪೂಜೆ‌ಯನ್ನೂ ನೆರವೇರಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಹರಿಶ್ಚಂದ್ರ‌ ನಗರದಿಂದ ಹುಲಿಗೆಮ್ಮ ದೇಗುಲದವರೆಗೆ ಪಾದಯಾತ್ರೆ ಕೈಗೊಂಡರು.

ಪೇಜಾವರ ಮಠದ ಕಿರಿಯ ಸ್ವಾಮೀಜಿ

ದಿ. ವಿಶ್ವೇಶ ತೀರ್ಥರ ಮಾರ್ಗವನ್ನು ವಿಶ್ವ ಪ್ರಸನ್ನ ಸ್ವಾಮೀಜಿ ಮುಂದುವರಿಸಿದ್ದಾರೆ. ಇವರ ಪಾದಯಾತ್ರೆಗೆ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ, ಬಿಜೆಪಿಯ ಮುಖಂಡರಾದ ಹೆಚ್.ಹನುಮಂತಪ್ಪ, ಎಸ್.ಮಲ್ಲನಗೌಡ, ಶ್ರೀನಿವಾಸ ಮೋತ್ಕರ್, ವೀರಶೇಖರರೆಡ್ಡಿ, ಗೋವಿಂದ, ಬಸವರಾಜ ಸೇರಿದಂತೆ ದಲಿತ ಮುಖಂಡರು ಸಾಥ್ ನೀಡಿದರು.

Last Updated : Jan 31, 2021, 10:39 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.