ETV Bharat / state

ಪತ್ನಿ ಸಾವು.. 5 ವರ್ಷದ ಕಂದನನ್ನು ಕೊಂದು ತಂದೆ ಆತ್ಮಹತ್ಯೆ! - ಆತ್ಮಹತ್ಯೆ

ಪತ್ನಿ ಸಾವಿನಿಂದ ಮನನೊಂದ ಪತಿ. 5 ವರ್ಷದ ಮಗನನ್ನು ಕೊಂದು ಆತ್ಮಹತ್ಯೆ. ಬಳ್ಳಾರಿ ತಾಲೂಕಿನ ಕೊಳಗಲ್ ಗ್ರಾಮದಲ್ಲಿ ಘಟನೆ.

Father commits suicide after killing his son
ಯೆಂಕಪ್ಪ ಈಡಿಗೇರ್ -ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
author img

By

Published : Nov 1, 2022, 6:50 PM IST

ಬಳ್ಳಾರಿ: ಮಗನನ್ನು ಕೊಂದು ತಂದೆ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಬಳ್ಳಾರಿ ತಾಲೂಕಿನ ಕೊಳಗಲ್ ಗ್ರಾಮದಲ್ಲಿ ನಡೆದಿದೆ. ಯೆಂಕಪ್ಪ ಈಡಿಗೇರ್ (32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ತನ್ನ 5 ವರ್ಷದ ಮಗ ವಿಜಯ್‌ನನ್ನು ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಸೆ. 14 ರಂದು ಜಮೀನಿಗೆ ತೆರಳುವ ವೇಳೆ ಆಟೋ ಕಾಲುವೆಗೆ ಮಗುಚಿ ಬಿದ್ದ ಪರಿಣಾಮ ಯಂಕಪ್ಪ ಈಡಿಗೇರ್ ಪತ್ನಿ ಹುಲಿಗೆಮ್ಮ ಸಾವಿಗೀಡಾಗಿದ್ದರು. ಪತ್ನಿ ಸಾವಿನಿಂದ ಮನನೊಂದಿದ್ದ ಈತ ಇನ್ನೊಬ್ಬ ಮಗ ಆಟವಾಡಲು ಹೊರಗೆ ಹೋಗಿದ್ದ ವೇಳೆ ಸಣ್ಣ ಮಗ (ವಿಜಯ್‌)ನನ್ನು ಕೊಂದು ಸಾವಿಗೆ ಶರಣಾಗಿದ್ದಾನೆ ಎನ್ನಲಾಗ್ತಿದೆ.

ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಎರಡೂ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಮ್ಸ್​ಗೆ ಕಳುಹಿಸಲಾಗಿದೆ.

ಇದನ್ನೂ ಓದಿ: ಹಾಸನ: ಹಾಸ್ಟೆಲ್​ನಲ್ಲಿ ವಿದ್ಯಾರ್ಥಿ ನೇಣಿಗೆ ಶರಣು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.