ಹೊಸಪೇಟೆ/ವಿಜಯನಗರ: ಹಿಂದಿನ ಕೊರೊನಾ ವರದಿ ಐಡಿಯನ್ನು ಬಳಸಿಕೊಂಡು ನಕಲಿ ವರದಿ ಸೃಷ್ಟಿಸುತ್ತಿದ್ದ ನಗರದ ಕೋರ್ಟ್ ಬಳಿಯ ಶಿವು ಜೆರಾಕ್ಸ್ ಅಂಗಡಿಯ ಶಿವುರಾಜ್ ಎಂಬಾತನನ್ನು ಬಂಧಿಸಿ ನಗರದ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಡಿ.ಭಾಸ್ಕರ್ ತಿಳಿಸಿದರು.
ನಗರದ ತಾಲೂಕು ವೈದ್ಯಾಧಿಕಾರಿಯ ಕಚೇರಿಯಲ್ಲಿ ಸುದ್ದಿಗಾರೊಂದಿಗೆ ಅವರು ಮಾತನಾಡಿದರು. ವಿಮ್ಸ್ನಲ್ಲಿ ತ್ವರಿತಗತಿಯಲ್ಲಿ ವರದಿ ಬರದೇ ವಿಳಂಬವಾಗುತ್ತದೆ. ಇದನ್ನೇ ದುರುಪಯೋಗ ಮಾಡಿಕೊಂಡ ಕೆಲವರು, ಈ ಹಿಂದೆ ಪರೀಕ್ಷೆ ಮಾಡಿದ ವರದಿಯ ಎಸ್ಆರ್ಎಫ್ ಐಡಿಗಳನ್ನು ಬಳಸಿಕೊಂಡು ನಕಲಿ ವರದಿ ಸೃಷ್ಟಿ ಮಾಡಲು ಮುಂದಾಗಿದ್ದಾರೆ ಎಂದು ತಿಳಿಸಿದ್ರು.
![fake corona report creator arrested in hospete](https://etvbharatimages.akamaized.net/etvbharat/prod-images/kn-hpt-04-a-case-against-a-man-who-was-creating-a-fake-corona-report-vsl-ka10031_20042021161811_2004f_1618915691_480.jpg)
ಜನರು ಮೋಸ ಹೋಗಬಾರದು. ಕಡ್ಡಾಯವಾಗಿ ಪರೀಕ್ಷೆ ಮಾಡಿಕೊಂಡು ವರದಿಯನ್ನು ಪಡೆದುಕೊಳ್ಳಬೇಕು. ಇಲ್ಲದೇ ಹೋದರೆ ಕೋವಿಡ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಒಂದು ವೇಳೆ ನಕಲಿ ವರದಿಯನ್ನು ನೀಡುವುದು ಕಂಡು ಬಂದರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.