ಬಳ್ಳಾರಿ: ಸ್ನಾನಕ್ಕೆಂದು ನದಿಗೆ ತೆರಳಿದ್ದ ಯುವಕನೋರ್ವ ಮೊಸಳೆ ಬಾಯಿಗೆ ಆಹಾರವಾದ ಘಟನೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ವಿನಾಯಕನಗರ ಕ್ಯಾಂಪ್ ಬಳಿಯ ಹರಿಗೋಲು ಘಾಟ್ನಲ್ಲಿ ನಡೆದಿದೆ.
ರೆಹಮತ್ ಅಲಿ (35) ಎಂಬಾತ ಮೃತ ವ್ಯಕ್ತಿ ಎನ್ನಲಾಗಿದೆ.
ಸ್ನಾನಕ್ಕೆಂದು ನದಿಯಲ್ಲಿ ಹರಿಗೋಲು ಹಾಕಿಕೊಂಡು ತೆರಳಿದ್ದನಂತೆ. ಮಧ್ಯಾಹ್ನದ ವೇಳೆಗೆ ಮೊಸಳೆ ದಾಳಿ ನಡೆಸಿದ್ದು, ಅಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ಅಂಬಿಗರ ಸಹಾಯದಿಂದ ಮೃತದೇಹವನ್ನು ಹೊರ ತೆಗೆಯಲಾಗಿದೆ. ಸಿರಗುಪ್ಪ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ.