ಬಳ್ಳಾರಿ: ಬಳ್ಳಾರಿಯಲ್ಲಿ ನಿನ್ನೆ ಸಂಜೆಯಿಂದ ಮೋಡ ಕವಿದ ವಾತಾವರಣವಿದೆ. ಇಂದು ಬೆಳಿಗ್ಗೆ ಆರು ಗಂಟೆಯಿಂದಲೇ ಬಿಡದೆ ಒಂದೂವರೆ ಗಂಟೆ ಜಿಟಿ-ಜಿಟಿ ಮಳೆಯಾಗಿದೆ.
ನಗರದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ರೈಲ್ವೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಮಳೆಯಲ್ಲಿ ನೆನೆಯುವ ಪರಿಸ್ಥಿತಿ ಉಂಟಾಯಿತು. ನಗರದ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಕೌಲ್ ಬಜಾರ್, ಸತ್ಯನಾರಾಯಣ ಪೇಟೆಗಳಲ್ಲಿ ನೀರು ತುಂಬಿ ರಸ್ತೆ ಸಂಚಾರಕ್ಕೆ ತೊಂದರೆಯಾಗಿತ್ತು.
ನಗರದಲ್ಲಿ ಮಳೆಯಿಲ್ಲದೆ ಎಂದು ಮೂಲೆ ಸೇರಿಸಿದ್ದ ಕ್ಯಾಪ್, ಜರ್ಕೀನ್, ಛತ್ರಿಗಳು ಹೊರಗಡೆ ಬಂದಿದ್ದವು. ಕೆಲವರು ಮಳೆಯಲ್ಲಿಯೇ ನೆನೆದು ತಮ್ಮ ಮನೆಗಳಿಗೆ, ಊರುಗಳಿಗೆ ಪ್ರಯಾಣ ಬೆಳೆಸಿದರು.