ಬಳ್ಳಾರಿ: ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪನವರು ಕೋಟ್ಯಂತರ ರೂ.ಗಳ ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿಯನ್ನ ಹೊಂದಿದ್ದಾರೆ.
ಉಗ್ರಪ್ಪನವರ ಪತ್ನಿ ಮಂಜುಳಾ ಅವರು ಪತಿರಾಯರಿಗಿಂತಲೂ ಕಡಿಮೆ ಮೊತ್ತದ ಸ್ಥಿರಾಸ್ತಿ, ಚರಾಸ್ತಿ ಹೊಂದಿರುವುದಾಗಿ ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿನ್ನೆ ಜಿಲ್ಲಾ ಚುನಾವಣಾಧಿಕಾರಿ ಡಾ. ವಿ.ರಾಮಪ್ರಸಾತ್ ಮನೋಹರಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಘೋಷಿಸಿಕೊಂಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪನವರು ಒಟ್ಟಾರೆಯಾಗಿ 2,63, 82,490 ಕೋಟಿ ರೂ. ಆಸ್ತಿಯನ್ನು ಹೊಂದಿದ್ದಾರೆ.ಅವರ ಪತ್ನಿ 44,00,218 ಲಕ್ಷ ರೂ.ಗಳ ಮೌಲ್ಯದ ಚರಾಸ್ತಿ, 7.5 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 7.99 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.
ಮಗಳು ದೀಪಿಕಾ 24,34,617 ಲಕ್ಷ ರೂ. ಮೌಲ್ಯದ ಚರಾಸ್ತಿಯನ್ನು ಹೊಂದಿದ್ದಾರೆ. ಅಲ್ಲದೇ, ಉಗ್ರಪ್ಪನವರು ಪಿತ್ರಾರ್ಜಿತವಾಗಿ ಬಂದಿರುವ 14.14 ಎಕರೆ ಕೃಷಿ ಭೂಮಿಯನ್ನ ಹೊಂದಿದ್ದಾರೆ. ಕೈಯಲ್ಲಿ 1.95 ಲಕ್ಷ ರೂ. ನಗದು ಹಣ ಹೊಂದಿದ್ದಾರೆ. ಬೆಂಗಳೂರು ವಿಧಾನಸೌಧದಲ್ಲಿರುವ ಅಪೆಕ್ಸ್ ಬ್ಯಾಂಕ್‍ನಲ್ಲಿ 15,24,960 ರೂ., ಬೆಂಗಳೂರಿನ ಎಸ್‍ಬಿಐ ಬ್ಯಾಂಕ್ ನಲ್ಲಿ 36,655 ರೂ., ಬೆಂಗಳೂರಿನ ಹೆಚ್‍ಎಸ್‍ಆರ್ ಲೇಔಟ್‍ನಲ್ಲಿನ ಯುಕೊ ಬ್ಯಾಂಕ್‍ನಲ್ಲಿ 10,23,588 ಲಕ್ಷ ರೂ., ಬಳ್ಳಾರಿ ನಗರದ ಆಂಧ್ರ ಬ್ಯಾಂಕಿನಲ್ಲಿ 8,09,740 ಲಕ್ಷ ರೂ., ನವದೆಹಲಿಯ ಪಾರ್ಲಿಮೆಂಟ್ ಹೌಸ್ ಎಸ್‍ಬಿಐ ಶಾಖೆಯಲ್ಲಿ 7,29,352 ಲಕ್ಷ ರೂ. ಠೇವಣಿ ಹೊಂದಿದ್ದಾರೆ.
ಪತ್ನಿ ಮಂಜುಳಾ ಅವರ ಬಳಿ 1.88 ಲಕ್ಷ ರೂ. ನಗದು ಹಣವಿದ್ದು, ಬೆಂಗಳೂರಿನ ಹೆಚ್‍ಎಸ್‍ಆರ್ ಲೇಔಟ್‍ನ ಯುಕೊ ಬ್ಯಾಂಕ್‍ನಲ್ಲಿ 8,55,007 ಲಕ್ಷ ರೂ., ಮಗಳು ದೀಪಿಕಾ ಬಳಿ 15 ಲಕ್ಷ ರೂ.ನಗದು ಹಣವಿದ್ದು, ಬೆಂಗಳೂರಿನ ಹೆಚ್‍ಎಸ್‍ಆರ್ ಲೇಔಟ್‍ನ ಯುಕೊ ಬ್ಯಾಂಕ್‍ನಲ್ಲಿ 92,714 ರೂ. ಠೇವಣಿಯನ್ನ ಹೊಂದಿದ್ದಾರೆ. ಇನ್ನು ಅಪೆಕ್ಸ್ ಬ್ಯಾಂಕಿನಲ್ಲಿ 1,18,153 ರೂ., 1,19,982, 67, 233 ರೂ. ಸೇರಿ ಒಟ್ಟು 3,05,368 ರೂ.ಗಳನ್ನು ಫಿಕ್ಸೆಡ್ ಡೆಪಾಜಿಟ್ ಮಾಡಲಾಗಿದೆ.
ಉಗ್ರಪ್ಪ ಅವರು 33 ಲಕ್ಷ ರೂ. ಮೌಲ್ಯದ ಟಯೋಟಾ ಕಂಪನಿಯ ಫಾರ್ಚುನರ್ ಕಾರು ಮತ್ತು 100 ಗ್ರಾಂ ಚಿನ್ನಾಭರಣವನ್ನು ಹೊಂದಿದ್ದಾರೆ. ಪತ್ನಿ ಮಂಜುಳಾ ಬಳಿ 1.25 ಕೆಜಿ ಚಿನ್ನಾಭರಣ, 7.50 ಲಕ್ಷ ರೂ. ಮೌಲ್ಯದ 16 ಕೆಜಿ ಬೆಳ್ಳಿ ಆಭರಣ ಹೊಂದಿದ್ದಾರೆ. ಮಗಳು ದೀಪಿಕಾ ಹೆಸರಲ್ಲಿ 5 ಲಕ್ಷ ರೂ. ಮೌಲ್ಯದ 600 ಗ್ರಾಂ ಚಿನ್ನಾಭರಣ, 75 ಸಾವಿರ ರೂ. ಮೌಲ್ಯದ 1.5 ಕೆಜಿ ಬೆಳ್ಳಿ ಆಭರಣವಿದೆ.
ಉಗ್ರಪ್ಪ ಅವರು ವಿಧಾನ ಪರಿಷತ್ ಮತ್ತು ಸಂಸತ್‍ನಿಂದ ವಾರ್ಷಿಕವಾಗಿ 4.80 ಲಕ್ಷ ರೂ. ಮತ್ತು ಕೃಷಿಯಿಂದಾಗಿ 9.60 ಲಕ್ಷ ರೂ. ವಾರ್ಷಿಕ ಆದಾಯ ಹೊಂದಿದ್ದಾರೆ. ವಿವಿಧ ಬ್ಯಾಂಕುಗಳಿಂದ 1,72,574 ರೂ. ಬಡ್ಡಿ ದೊರೆಯಲಿದೆ. ಇನ್ನು ಪತ್ನಿ ಮಂಜುಳಾ ಅವರು ವೃತ್ತಿಯಿಂದಾಗಿ ವಾರ್ಷಿಕವಾಗಿ 2,91,087 ರೂ. ಆದಾಯವಿದ್ದು, ವಿವಿಧ ಕಟ್ಟಡಗಳಿಂದ ವಾರ್ಷಿಕವಾಗಿ 3,31,200 ರೂ. ಬಾಡಿಗೆ ಬರಲಿದೆ. ಬ್ಯಾಂಕ್‍ನಿಂದ 7637 ರೂ. ಬಡ್ಡಿ ದೊರೆಯಲಿದೆ ಎಂದು ತಿಳಿಸಿದ್ದಾರೆ. ಉಗ್ರಪ್ಪನವರು ಬ್ಯಾಚುಲರ್ ಆಫ್ ಸೈನ್ಸ್ ಹಾಗೂ ಬ್ಯಾಚುಲರ್ ಆಫ್ ಲಾ ಶಿಕ್ಷಣವನ್ನ ಪೂರ್ಣಗೊಳಿಸಿದ್ದಾರೆ.