ETV Bharat / state

ಬಳ್ಳಾರಿಯಲ್ಲಿ ಹಾಡಹಗಲೇ ಗೋ ಮಾಂಸ ರವಾನೆ : ವಿಡಿಯೋ ವೈರಲ್​​ - ಗೋ ಪ್ರೇಮಿಗಳ ಆಕ್ರೋಶ

ಬಳ್ಳಾರಿಯಲ್ಲಿ ಆಟೋರಿಕ್ಷಾವೊಂದರಲ್ಲಿ ಗೋ ಮಾಂಸ ಸಾಗಣೆ ಮಾಡುವ ದೃಶ್ಯವೊಂದು ಕಂಡು ಬಂದಿದೆ. ಬಳ್ಳಾರಿಯ ಕೌಲ್ ಬಜಾರ್ ಪ್ರದೇಶದಿಂದ ಗುಗ್ಗರಹಟ್ಟಿ ಪ್ರದೇಶದತ್ತ ಗೋವಿನ ಮಾಂಸವನ್ನು ಸಾಗಣೆ ಮಾಡುವಂತಹ ದೃಶ್ಯದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲ ತಾಣದಲ್ಲೀಗ ವೈರಲ್ ಆಗಿದೆ

ಬಳ್ಳಾರಿಯಲ್ಲಿ ಹಾಡಹಗಲೇ ಗೋ ಮಾಂಸ ರವಾನೆ
author img

By

Published : Aug 15, 2019, 5:53 AM IST

ಬಳ್ಳಾರಿ: ಗಣಿನಗರಿ ಬಳ್ಳಾರಿಯಲಿ ಸದ್ದಿಲ್ಲದೇ ಗೋಹತ್ಯೆ ನಡೆದಿರೋದು ಬೆಳಕಿಗೆ ಬಂದಿದೆ. ಬಕ್ರೀದ್ ಹಬ್ಬದ ನಿಮಿತ್ತ ದನದ ಮಾಂಸ ಮಾರಾಟದ ಭರಾಟೆಯೂ ಎಗ್ಗಿಲ್ಲದೇ ಸಾಗಿದೆ. ಬಳ್ಳಾರಿ ನಗರ ಹೊರವಲಯದ ಕಸಾಯಿ ಖಾನೆಯೊಂದರಲ್ಲಿ ಹತ್ತಾರು ಗೋವುಗಳನ್ನು ಹತ್ಯೆಗೈಯ್ಯಲಾಗಿದೆ.

ಕೆಎ- 35, ಸಿ- 4113 ಸಂಖ್ಯೆಯ ಆಟೋರಿಕ್ಷಾವೊಂದರಲ್ಲಿ ಗೋ ಮಾಂಸ ಸಾಗಣೆ ಮಾಡುವ ದೃಶ್ಯವೊಂದು ಕಂಡು ಬಂದಿದೆ. ಬಳ್ಳಾರಿಯ ಕೌಲ್ ಬಜಾರ್ ಪ್ರದೇಶದಿಂದ ಗುಗ್ಗರಹಟ್ಟಿ ಪ್ರದೇಶದತ್ತ ಗೋವಿನ ಮಾಂಸವನ್ನು ಸಾಗಣೆ ಮಾಡುವಂತಹ ದೃಶ್ಯದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲ ತಾಣದಲ್ಲೀಗ ವೈರಲ್ ಆಗಿದೆ. ಅದನ್ನು ವೀಕ್ಷಣೆ ಮಾಡಿದ ಗೋ ಪ್ರೇಮಿಗಳು ಕಟುಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಕ್ರೀದ್ ಹಬ್ಬದ ಆಸುಪಾಸಿನಲ್ಲಿ ಈ ಘಟನೆಯು ನಡೆದಿರಬಹುದೆಂದು ಶಂಕಿಸಲಾಗಿದೆ. ಹಬ್ಬ ಆಚರಣೆ ಎರಡು ದಿನಗಳ ಹಿಂದಷ್ಟೇ ಜಿಲ್ಲಾ ಪೊಲೀಸ್ ಇಲಾಖೆಯ ಗಮನ ಸೆಳೆದಿತ್ತಾದ್ರೂ ಅದನ್ನ ತಡೆಯುವಲ್ಲಿ ಪೊಲೀಸ್ ಇಲಾಖೆ ವಿಫಲಗೊಂಡಿದೆ. ಇದೀಗ ಗೋಹತ್ಯೆಗೈದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಗೋ ಪ್ರೇಮಿಗಳು ಆಗ್ರಹಿಸಿದ್ದಾರೆ,

Intro:ಗಣಿನಾಡಿನಲಿ ಸದ್ದಿಲ್ಲದೇ ನಡಿತೆ ಗೋವುಗಳ ಹತ್ಯೆ: ರಕ್ಷಕರೇ ಭಕ್ಷಕರಾದಾಗ..!
ಬಳ್ಳಾರಿ: ಗಣಿನಗರಿ ಬಳ್ಳಾರಿಯಲಿ ಸದ್ದಿಲ್ಲದೇ ಗೋಹತ್ಯೆ ನಡೆದಿರೋದು ಬೆಳಕಿಗೆ ಬಂದಿದೆ. ಬಕ್ರೀದ್ ಹಬ್ಬದ ನಿಮಿತ್ತ
ದನದ ಮಾಂಸ ಮಾರಾಟದ ಭರಾಟೆಯೂ ಎಗ್ಗಿಲ್ಲದೇ ಸಾಗಿದೆ.
ಬಳ್ಳಾರಿ ನಗರ ಹೊರವಲಯದ ಕಸಾಯಿ ಖಾನೆಯೊಂದರಲ್ಲಿ ಹತ್ತಾರು ಗೋವುಗಳನ್ನು ಹತ್ಯೆಗೈದು ದೇಹ ಮತ್ತು ಚರ್ಮವನ್ನು ಬೇರ್ಪಡಿಸಲಾಗಿದೆ. ಕೆಎ- 35, ಸಿ- 4113 ಸಂಖ್ಯೆಯುಳ್ಳ ಸರಕು ಸಾಗಣೆ ಆಟೋರಿಕ್ಷಾವೊಂದರಲ್ಲಿ ಗೋಹತ್ಯೆಯ ಮಾಂಸದ ದೊಡ್ಡ ಗಾತ್ರದ ತುಂಡುಗಳನ್ನು ಸಾಗಣೆ ಮಾಡುವ ದೃಶ್ಯವೊಂದು ಕಂಡು ಬಂದಿದೆ.
ಬಳ್ಳಾರಿಯ ಕೌಲ್ ಬಜಾರ್ ಪ್ರದೇಶ ವ್ಯಾಪ್ತಿಯಿಂದ ಗುಗ್ಗರಹಟ್ಟಿ ಪ್ರದೇಶದತ್ತ ಈ ಗೋವಿನ ಮಾಂಸವನ್ನು ಸಾಗಣೆ ಮಾಡುವಂತಹ ದೃಶ್ಯದ ವಿಡಿಯೊ ಹಾಗೂ ಪೋಟೋಗಳು ಸಾಮಾಜಿಕ ಜಾಲ ತಾಣದಲ್ಲೀಗ ವೈರಲ್ ಆಗಿದೆ. ಅದನ್ನು ವೀಕ್ಷಣೆ ಮಾಡಿದ ಗೋವಿನ ಪ್ರೇಮಿಗಳು ಕಟುಕರ ವಿರುದ್ಧ ಅತೀವ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಕ್ರೀದ್ ಹಬ್ಬದ ಆಸುಪಾಸಿನಲ್ಲಿ ಈ ಘಟನೆಯು ನಡೆದಿರ ಬಹುದೆಂದು ಶಂಕಿಸಲಾಗಿದೆ. ಈ ಹಬ್ಬ ಆಚರಣೆ ಎರಡು ದಿನಗಳ ಹಿಂದಷ್ಟೇ ಜಿಲ್ಲಾ ಪೊಲೀಸ್ ಇಲಾಖೆಯ ಗಮನ ಸೆಳೆದಿತ್ತಾದ್ರೂ ಅದನ್ನ ತಡೆಯುವಲ್ಲಿ ಪೊಲೀಸ್ ಇಲಾಖೆ ವಿಫಲಗೊಂಡಿದೆಂದು ಗೋಪ್ರೇಮಿ ಹೆಚ್.ಡಿ.ಗೋವಿಂದರಾಜ ದೂರಿದ್ದಾರೆ.
Body:ರಕ್ಷಕರೇ ಭಕ್ಷಕರಾದ್ರೆ ಹ್ಯಾಂಗ: ಗೋಹತ್ಯೆ ಹಾಗೂ ಗೋ ಮಾಂಸ ಮಾರಾಟದ ಜಾಲಪತ್ತೆ ಹಚ್ಚುವಂತೆ ಜಿಲ್ಲಾ ಪೊಲೀಸ್ ಇಲಾಖೆಯ ಗಮನ ಸೆಳೆದರೂ ಪ್ರಯೋಜನ ಆಗಿಲ್ಲ.‌ ಗೋಹತ್ಯೆಯನ್ನು ತಡೆದು, ಗೋವುಗಳನ್ನು ರಕ್ಷಣೆ ಮಾಡುವಂತೆ ಪೊಲೀಸ್ ಇಲಾಖೆ ಕಚೇರಿಗೆ ಎಡತಾಕಿದ್ರೂ, ಅದನ್ನು ತಡೆಯಲು ಪೊಲೀಸರು ವಿಫಲರಾಗಿದ್ದು, ಕೂಡಲೇ ಗೋಹತ್ಯೆಗೈದವರ ವಿರುದ್ಧ ಕಠಿಣ ಕಾನೂನು ರಿತ್ಯಾಕ್ರಮ ಜರುಗಿಸಬೇಕೆಂದು ಹೆಚ್.ಡಿ.ಗೋವಿಂದರಾಜ ಆಗ್ರಹಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_3_COW_DEATH_VISUALS_7203310

KN_BLY_3a_COW_DEATH_PHOTOS_7203310

KN_BLY_3b_COW_DEATH_VISUALS_7203310

KN_BLY_3c_COW_DEATH_VISUALS_7203310

KN_BLY_3d_COW_DEATH_PHOTOS_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.