ETV Bharat / state

ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲು: ಜಿಲ್ಲಾಡಳಿತದ ಪ್ರಕಟಣೆ

author img

By

Published : Jun 25, 2020, 8:15 AM IST

ಜಿಲ್ಲೆಯಲ್ಲಿ ಕ್ವಾರಂಟೈನ್ ಉಲ್ಲಂಘಿಸಿದ ಹಾಗೂ ಮೊಬೈಲ್ ಸ್ವಿಚ್ಡ್​​​ ಆಫ್ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಕ್ವಾರಂಟೈನ್‌ನಲ್ಲಿರುವಂತೆ ನಿಯಂತ್ರಿಸಲಾಗುತ್ತದೆ. ಆದರೂ ಕ್ವಾರಂಟೈನ್ ಇದ್ದವರು ಮನೆಯಿಂದ ಬೇರೆ ಕಡೆಗೆ ಚಲನ ವಲನ ಮಾಡಿದರೆ ಅಂತಹವರನ್ನ ಗಮನಿಸಿ ನೋಟಿಸ್​ ನೀಡಲಾಗುವುದು.

ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲು

ಬಳ್ಳಾರಿ : ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಕ್ವಾರಂಟೈನ್ ಪ್ರದೇಶದಿಂದ ಬೇರೆ ಕಡೆಗೆ ಚಲನವಲನ ಮಾಡುವುದಾಗಲಿ ಅಥವಾ ತಮ್ಮ ಮೊಬೈಲ್‌ಗಳನ್ನು ಸ್ವಿಚ್ಡ್​​ ‌ಆಫ್ ಮಾಡುವುದಾಗಲಿ ಮಾಡಬಾರದು. ಒಂದು ವೇಳೆ, ಉದ್ದೇಶ ಪೂರ್ವಕವಾಗಿ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದ್ದು, ಕಂಡು ಬಂದಲ್ಲಿ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಎ.ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಪತ್ತು ನಿರ್ವಹಣಾ ಕಾಯ್ದೆ - 2005 ಹಾಗೂ ಐಪಿಸಿ ಸೆಕ್ಷನ್ 188ರ ಅನ್ವಯ ಎಫ್‌ಐಆರ್ ದಾಖಲಿಸಲಾಗುವುದು ಎಂದು ಸ್ಪಷ್ಟಪಡಿಸಿರುವ ಎಡಿಸಿ ಮಂಜುನಾಥ ಅವರು, ಸಾಂಕ್ರಾಮಿಕ ಪಿಡುಗಾದ ಕೊರೊನಾ ಸೋಂಕು ತಡೆಗಟ್ಟಲು ಸರ್ಕಾರ ಕೋವಿಡ್-19 ಕ್ವಾರಂಟೈನ್ ಅಲರ್ಟ್ ಸಿಸ್ಟಮ್ ಅ‌ನ್ನು ಪ್ರಾರಂಭಿಸಿದ್ದು, ಈ ವ್ಯವಸ್ಥೆಯಡಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಹೋಂ ಕ್ವಾರಂಟೈನ್‌ಗೆ ಕಳುಹಿಸಲಾಗಿರುತ್ತದೆ. ಸದರಿ ವ್ಯಕ್ತಿಗಳ ಮೊಬೈಲ್ ನಂಬರ್ ನೆಟ್‌ವರ್ಕ್ ಆಧಾರದ ಮೇಲೆ ಕ್ವಾರಂಟೈನ್‌ನಿಂದ ಹೊರಗೆ ಬರದಂತೆ ನಿಗಾವಹಿಸುವ ಸಲುವಾಗಿ ಅವರ ಚಲನವಲನಗಳನ್ನು ಗಮನಿಸಲಾಗುತ್ತದೆ ಎಂದಿದ್ದಾರೆ.

ಒಂದು ವೇಳೆ, ಕ್ವಾರಂಟೈನ್ ಮಾಡಲಾಗಿರುವ ವ್ಯಕ್ತಿಗಳು ತಮ್ಮ ಕ್ವಾರಂಟೈನ್ ಪ್ರದೇಶ ವ್ಯಾಪ್ತಿ ಮೀರಿದಲ್ಲಿ ಹಾಗೂ ತಮ್ಮ ಮೊಬೈಲ್ ಸ್ವಿಚ್ಡ್​​ ಆಫ್ ಮಾಡಿದಲ್ಲಿ ಎಚ್ಚರಿಕೆ ಸಂದೇಶವು ರಾಜ್ಯ ಸಮೀಕ್ಷಾ ಘಟಕದ ಮೂಲಕ ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಬರುತ್ತದೆ ಎಂದು ಅವರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.