ETV Bharat / state

ಆತ್ಮನಿರ್ಭರ ಭಾರತಕ್ಕೆ ಗಣಿನಾಡಿನ‌ ಯುವಕ ಸಾಥ್... ಕನ್ನಡದಲ್ಲೇ ಮೊದಲ ಗೇಮ್ ಆ್ಯಪ್ ಸೃಷ್ಟಿಸಿದ ಪ್ರತಿಭೆ

ಹೊಸಪೇಟೆ ನಗರದ ಯುವಕ 'ಆಡು ಆಟ ಆಡು' ಎಂಬ ಶೀರ್ಷಿಕೆಯಡಿ ಗೇಮ್ ಅ್ಯಪ್ ತಯಾರಿಸಿದ್ದಾರೆ. ಇದು ಕನ್ನಡ ಭಾಷೆಯಲ್ಲಿದ್ದು, ಕೇವಲ ಒಂದೇ ಒಂದು ದಿನದಲ್ಲಿ ಹತ್ತು ಸಾವಿರಕ್ಕೂ ಅಧಿಕ‌ ಡೌನ್ ಲೋಡ್ ಆಗಿದೆ.

kannada game app
kannada game app
author img

By

Published : Jul 8, 2020, 6:41 PM IST

ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತಕ್ಕೆ ಗಣಿನಾಡಿನ‌ ಯುವಕನೋರ್ವ ಸಾಥ್ ನೀಡಿದ್ದು, ಕನ್ನಡ ಭಾಷೆಯಲ್ಲೇ ಮೊದಲ ಗೇಮ್ ಆ್ಯಪನ್ನು‌ ಲೋಕಾರ್ಪಣೆ ಮಾಡುವ ಮೂಲಕ ವಿಶೇಷ ಗಮನ ಸೆಳೆದಿದ್ದಾರೆ.

ಗೇಮ್ ಆ್ಯಪ್ ಡೆವಲಪ್ ಮಾಡಿದ ಯುವಕ

ಜಿಲ್ಲೆಯ ಹೊಸಪೇಟೆ ನಗರದ ಮಹೀನ್ ಜೈನ್ ಎಂಬ ಯುವಕ 'ಆಡು ಆಟ ಆಡು' ಎಂಬ ಶೀರ್ಷಿಕೆಯಡಿ ಈ ಗೇಮ್ ತಯಾರಿಸಿದ್ದಾರೆ. ಗ್ರಾಮೀಣ ಕರ್ನಾಟಕ ಭಾಗದವರಿಗೆ ಈ ಕನ್ನಡ ಭಾಷೆಯುಳ್ಳ ಗೇಮ್​ನ ಅಗತ್ಯವಿತ್ತು. ಅದನ್ನ ಮನಗಂಡ ಈ ಯುವಕ‌ ಗೇಮ್ ತಯಾರಿಸಿದ್ದು, ಲಾಕ್ ಡೌನ್ ಸಮಯವನ್ನ ಅತ್ಯಂತ ಸಮರ್ಥವಾಗಿ ಬಳಸಿಕೊಂಡಿದ್ದಾರೆ.

bellary boy develops kannada gaming app
ಕನ್ನಡ ಭಾಷೆಯಲ್ಲೇ ಮೊದಲ ಗೇಮ್ ಆ್ಯಪ್

ಕಳೆದ ಒಂದೂವರೆ ತಿಂಗಳಿಂದಲೂ ಮಹೀನ್ ಜೈನ್ ಸೇರಿ ಐದಾರು ಮಂದಿ ಸೇರಿಕೊಂಡು ಈ ಗೇಮ್ ಆ್ಯಪ್ ತಯಾರಿಕೆಗೆ ಮುಂದಾಗಿದ್ದರು. ಅದರಂತೆ, ಕೇವಲ ಒಂದೇ ಒಂದು ದಿನದಲ್ಲಿ ಅಂದಾಜು 10 ಸಾವಿರಕ್ಕೂ ಅಧಿಕ‌ ಮಂದಿ ಈ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಂಡಿದ್ದಾರೆ.

bellary boy develops kannada gaming app
ಆಡು ಆಟ ಆಡು ಗೇಮ್ ಆ್ಯಪ್

ಕನ್ನಡ ಭಾಷೆಯಲ್ಲೇ ಈ ಗೇಮ್ ಆಪರೇಟ್ ಮಾಡಬಹುದು. ಕನ್ನಡ ಭಾಷೆಯ ಅಕ್ಷರಗಳು ಈ ಗೇಮ್ ಆ್ಯಪ್​ನಲ್ಲಿ ಕಾಣಿಸಿಕೊಳ್ಳುತ್ತಿವೆ. ಎಂತಹ ಅನಕ್ಷರಸ್ಥರು ಕೂಡ ಇದನ್ನು ಆಪರೇಟ್ ಮಾಡಬಹುದು. ಕನ್ನಡ ಭಾಷೆಯಲ್ಲಿ ಈ ಆ್ಯಪ್ ಡೆವಲಪ್ ಮಾಡಲಾಗಿದೆ. ಕನ್ನಡ ಮತ್ತು‌ ಇಂಗ್ಲಿಷ್ ಭಾಷೆಯಲ್ಲಿ ಗೇಮ್ ಆಡಬಹುದು.

bellary boy develops kannada gaming app
ಕನ್ನಡ ಭಾಷೆಯಲ್ಲೇ ಮೊದಲ ಗೇಮ್ ಆ್ಯಪ್
bellary boy develops kannada gaming app
ಆಡು ಆಟ ಆಡು ಗೇಮ್ ಆ್ಯಪ್

ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಮಹೀನ್ ಜೈನ್ ಅವರು, ಪ್ರಧಾನಿ ಮೋದಿಯವರ ಆತ್ಮ ನಿರ್ಭರ್​ ಭಾರತದ ಕನಸೇ ನನಗೆ ಈ ಗೇಮ್ ಆ್ಯಪ್ ರೆಡಿ ಮಾಡಲು ಸ್ಫೂರ್ತಿಯಾಯಿತು. ಅಂದಾಜು 50ಕ್ಕೂ ಅಧಿಕ ಚೀನಾ ದೇಶದ ಆ್ಯಪ್​ಗಳನ್ನ ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಪ್ರತಿಯೊಂದಕ್ಕೂ ಅನ್ಯ ದೇಶಗಳ ಆ್ಯಪ್​ಗಳತ್ತ ಮೊರೆ ಹೋಗೋದನ್ನ ಮೊದ್ಲು ನಾವೆಲ್ಲ ಕೈಬಿಡಬೇಕು.‌ ಭಾರತೀಯ ಆ್ಯಪ್‌ ಸಿದ್ಧಪಡಿಸಿವ‌ ಸಾಮರ್ಥ್ಯ‌ ನಮಗಿದೆ. ಹೀಗಾಗಿ, ಭಾರತೀಯರು ಕೂಡ ಇಂತಹ ಆ್ಯಪ್​ಗಳತ್ತ ಗಮನ ಹರಿಸಬೇಕು ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.