ಬಳ್ಳಾರಿ: ಜಿಲ್ಲೆಯಲ್ಲಿರುವ ಜಿಂದಾಲ್ ಸಮೂಹ ಸಂಸ್ಥೆ ಆವರಣದಲ್ಲಿನ ಕೊರೆಕ್ಸ್ ಅನಿಲ, ಬ್ಲಾಸ್ಟ್ ಫರ್ನೀಸ್, ಕಾರ್ಬನ್ ಡೈಆಕ್ಸೈಡ್ನಂತಹ ವಿಷಾನಿಲಗಳು ಮಾನವ ಜೀವಕ್ಕೆ ಹಾನಿಕಾರಕ, ಕೂಡಲೇ ಆ ಘಟಕಗಳನ್ನು ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಬೇಕೆಂದು ಕಾಂಗ್ರೆಸ್ ಮುಖಂಡ ಕುಡಿತಿನಿ ಶ್ರೀನಿವಾಸ ಆಗ್ರಹಿಸಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಭೋಪಾಲ್ ವಿಷಾನಿಲ ದುರಂತ ಹಾಗೂ ವೈಜಾಗ್ ಎಲ್ಜಿ ಪಾಲಿಮರ್ಸ್ ದುರಂತಗಳು ಮತ್ತೆ ಮರುಕಳಿಸಬಾರದು. ಹಾಗಾಗಿ ಕೇಂದ್ರ- ರಾಜ್ಯ ಸರ್ಕಾರಗಳು ಜಿಂದಾಲ್ ಸಮೂಹ ಸಂಸ್ಥೆಯ ಆವರಣದಲ್ಲಿನ ಕೊರೆಕ್ಸ್ ವಿಷಾನಿಲ ಸೇರಿದಂತೆ ನಾಲ್ಕು ವಿಷಾನಿಲ ಘಟಕಗಳನ್ನು ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.
ಜಿಂದಾಲ್ ಸಮೂಹ ಸಂಸ್ಥೆಯ ಕುರಿತು ರಾಜ್ಯದ ಜನಪ್ರತಿನಿಧಿಗಳಿಗೆ ಮೃದುಧೋರಣೆ ಇದೆ. ಜಿಂದಾಲ್ ಉಕ್ಕು ಕಾರ್ಖಾನೆಯ ಮಾಲೀಕರು ನಡಿದಿದ್ದೇ ಹಾದಿ. ಅದರ ವಿರುದ್ಧ ಪಕ್ಷಾತೀತವಾಗಿ ಧ್ವನಿ ಎತ್ತುವ ಅನಿವಾರ್ಯತೆ ಬಂದಿದೆ. ಜಿಂದಾಲ್ ವಿರುದ್ಧ ಧ್ವನಿ ಎತ್ತದ ಜನಪ್ರತಿನಿಧಿಗಳ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.