ETV Bharat / state

ನಾಡಿನಾದ್ಯಂತ ಬಕ್ರೀದ್ ಸಡಗರ.. ಗಡಿನಾಡಲ್ಲಿ ಕುರಿಗಳಿಗೆ ಹೆಚ್ಚಿದ ಬೇಡಿಕೆ..

ನಾಡಿನಾದ್ಯಂತ ಬಕ್ರೀದ್ ಹಬ್ಬ ಆಚರಣೆ ಹಿನ್ನಲೆ ಕುರಿ, ಮೇಕೆಗಳ ಮಾರಾಟ ಜೋರಾಗಿದೆ. ಗಡಿನಾಡು ಬಳ್ಳಾರಿಯಲ್ಲಿ ವಿವಿಧ ತಳಿಗಳ ಕುರಿಗಳು ಲಕ್ಷ ಲಕ್ಷ ರೂಪಾಯಿಗೆ ಮಾರಾಟವಾಗುತ್ತಿವೆ.

ನಾಡಿದಾದ್ಯಂತ ಬಕ್ರೀದ್ ಸಡಗರ: ಗಡಿನಾಡಲ್ಲಿ  ಕುರಿಗಳಿಗೆ ಹೆಚ್ಚಿದ ಬೇಡಿಕೆ.
author img

By

Published : Aug 11, 2019, 7:01 PM IST

ಬಳ್ಳಾರಿ: ನಾಡಿನಾದ್ಯಂತ ನಾಳೆ( ಸೋಮವಾರ) ಬಕ್ರೀದ್ ಹಬ್ಬದ ಹಿನ್ನಲೆ ಕುರಿ, ಆಡುಗಳ ವ್ಯಾಪಾರ ರಂಗೇರಿದ್ದು ಗಡಿ ನಾಡು ಬಳ್ಳಾರಿಯಲ್ಲೂ ಭಾರಿ ಬೆಲೆಗೆ ಮಾರಾಟವಾಗುತ್ತಿವೆ.

ನಗರದ ಕೌಲ್‌ಬಜಾರ್ ಪ್ರದೇಶದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಎಂಟು ದಿನಗಳ ಮೊದಲೇ ಕುರಿಗಳ ಮಾರಾಟ ಆರಂಭಗೊಂಡಿದ್ದು, ವಿಭಿನ್ನ ತಳಿಯ ಕುರಿಗಳು 15 ಸಾವಿರದಿಂದ 1ಲಕ್ಷದವರೆಗೂ ಮಾರಾಟವಾಗುತ್ತಿವೆ.

ಕೌಲ್ ಬಜಾರ್‌ನ ಹಿರಿಯ ಕುರಿ ವ್ಯಾಪಾರಿ ವಾಜಿದ್ ಈ ಬಗ್ಗೆ ಮಾಹಿತಿ ನೀಡಿ, ಬಕ್ರೀದ್ ಹಬ್ಬದ ಪ್ರಯುಕ್ತ ಕಳೆದ 40 ವರ್ಷದಿಂದ ಕುರಿ ಮರಿಗಳ ಮಾರಾಟ ಮಾಡುತ್ತಾ ಬಂದಿದ್ದೇವೆ. ಕುರಿಗಳು ಚೆನ್ನಾಗಿದ್ದರೆ ಅವುಗಳಿಗೆ ಬೇಡಿಕೆ ಹೆಚ್ಚು, ಒಂದೊಂದು ಕುರಿಗಳಿಗೆ 15 ಸಾವಿರದಿಂದ 1 ಲಕ್ಷದವರೆಗೂ ಬೇಡಿಕೆ ಇದೆ. ಪ್ರತಿ ವರ್ಷ 20 ಕುರಿಗಳನ್ನು ಮಾರಾಟ ಮಾಡುತ್ತೇವೆ. ಬಕ್ರೀದ್ ಹಬ್ಬ ನಾಳೆ ದಿನ ಮಾರುಕಟ್ಟೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಕುರಿ ಮಾಂಸ ದೊರೆಯುತ್ತದೆ. ವ್ಯಾಪಾರ ಸಹ ಕಡಿಮೆ. ಯಾಕೆಂದರೆ, ಮುಸ್ಲಿಂ ಜನಾಂಗದವರು ಮನೆಯಲ್ಲಿ ಬಕ್ರೀದ್ ಹಬ್ಬಕ್ಕಾಗಿ ಎರಡು ‌ಮೂರು ಕುರಿಗಳ ಮಾಂಸದೂಟ ಮಾಡಿರುತ್ತಾರೆ ಎಂದು ತಿಳಿಸಿದರು.

ನಾಡಿದಾದ್ಯಂತ ಬಕ್ರೀದ್ ಸಡಗರ.. ಗಡಿನಾಡಲ್ಲಿ ಕುರಿಗಳಿಗೆ ಹೆಚ್ಚಿದ ಬೇಡಿಕೆ..

ಕುರಿಗಳ ಬೆಲೆ ಎಷ್ಟು?:

ಹಬ್ಬದ ಸಂದರ್ಭದಲ್ಲಿ ಕುರಿಗಳಿಗೆ ಬೇಡಿಕೆ ಹೆಚ್ಚಿರುತ್ತದೆ. 15,000 ರೂಪಾಯಿ ನೀಡಿ ಒಂದು ಕುರಿ ಖರೀದಿಸಿದರೆ, 20 ರಿಂದ 25 ಕೆಜಿ ಮಾಂಸ ದೊರೆಯುತ್ತದೆ. 75,000 ದಿಂದ 1ಲಕ್ಷ ರೂಪಾಯಿವರೆಗಿನ ಕುರಿ ಖರೀದಿಸಿದರೆ, 45ರಿಂದ 50 ಕೆಜಿ‌ ಮಾಂಸ ದೊರೆಯುತ್ತದೆ. ಕುರಿಗಳಿಗೆ ಪ್ರತಿನಿತ್ಯ ಆಹಾರಕ್ಕಾಗಿ ಗೋಡಂಬಿ, ದ್ರಾಕ್ಷಿ, ಗೋಧಿ ಹೊಟ್ಟು, ಶೇಂಗಾ ಸಿಪ್ಪೆ ಇನ್ನಿತರ ಪೌಷ್ಟಿಕ ಪರ್ದಾರ್ಥಗಳನ್ನು ನೀಡಿಲಾಗುತ್ತದೆ. ಆದ್ದರಿಂದ ಅವುಗಳಿಗೆ ತುಸು ಬೇಡಿಕೆ ಹೆಚ್ಚು. ನಾವು ಬೇರೆ ಬೇರೆ ಕಡೆಗಳಿಂದ ಕುರಿಗಳನ್ನು ತಂದು ಕೌಲ್ ಬಜಾರ್‌ನಲ್ಲಿ ಮಾರಾಟ ಮಾಡುತ್ತೇವೆ ಎಂದು ತಿಳಿಸಿದರು.

ಎಲ್ಲಿಂದ ಬರುತ್ತವೆ ದಷ್ಟಪುಷ್ಟ ಕುರಿಗಳು? :

ಇಷ್ಟೊಂದು ದಷ್ಟಪುಷ್ಟ ಕುರಿಗಳನ್ನು ಬಳ್ಳಾರಿ ಸುತ್ತಮುತ್ತ ಹಳ್ಳಿಗಳಿಂದ ಹಾಗೂ ಸಿಂಧನೂರು, ಹೊಸಪೇಟೆ, ಶಿವಮೊಗ್ಗ, ಬಾಗಲಕೋಟೆ, ರಾಂಪುರದ ಪ್ರದೇಶಗಳಿಂದ ತರಲಾಗುತ್ತದೆ ಎಂದರು. ಕುರಿ ಮಾಲೀಕ ಕೌಲ್ ಬಜಾರಿನ ವಾಸಿಂ ಮಾತನಾಡಿ, ಈ ಬಾರಿ ಬಕ್ರೀದ್ ಹಬ್ಬಕ್ಕೆ 24,000 ರೂಪಾಯಿ ಕೊಟ್ಟು ಕುರಿ ಖರೀದಿ ಮಾಡಿದ್ದೇನೆ. 20,000 ಸಾವಿರಕ್ಕಿಂತ ಹೆಚ್ಚು ಬೆಲೆ ನೀಡಿ ಖರೀದಿ ಮಾಡಿದರೇ ಕುರಿ ಚೆನ್ನಾಗಿರುತ್ತದೆ ಎಂದು ತಿಳಿಸಿದರು.

ಇನ್ನೋರ್ವ ಕುರಿ ಮಾಲೀಕ ಎಂ ಡಿ ಜಾವಿದ್ ಮಾತನಾಡಿ, ಈ ಬಾರಿ ಹಬ್ಬಕ್ಕೆ ₹ 40,000 ಕೊಟ್ಟು ಬಾಗಲಕೋಟೆ ಪ್ರದೇಶದ ಅಮ್ಮಿನ್‌ಗಡದಿಂದ ಕುರಿ ತೆಗೆದುಕೊಂಡು ಬಂದಿದ್ದೇವೆ. ಕಳೆದ ಎರಡು ವರ್ಷಗಳಿಂದ ಹಬ್ಬದ ಆಚರಣೆ ಮಾಡಿಲ್ಲ. ಮತ್ತೆ ಈ ಬಾರಿ ಬಕ್ರೀದ್ ಆಚರಣೆ ಮಾಡುತ್ತಿದ್ದೇವೆ ಎಂದರು.

Intro:ಗಣಿನಾಡಲ್ಲಿ ಬಕ್ರಿದ್ ಹಬ್ಬ,
ಕುರಿಗಳ ಅಂದಕ್ಕೆ ಹೆಚ್ಚಿನ ಬೇಡಿಕೆ.
( 15 ಸಾವಿರದಿಂದ 1 ಲಕ್ಷದವರೆಗೆ ಬೆಲೆಬಾಳುವ ಕುರಿಮರಿಗಳು) ಜನರು ಖರೀದಿಸದೇ ಬಿಡಲ್ಲ.

ನಗರದ ಕೌಲ್ ಬಜಾರ್ ಪ್ರದೇಶದಲ್ಲಿ ಬಕ್ರಿದ್ ಹಬ್ಬದ ಪ್ರಯುಕ್ತ ಎಂಟು ದಿನಗಳ ಮುಂಚನೆ ಕುರಿಮರಿಗಳ ಮಾರಾಟ ಜೋರಾಗಿರುತ್ತದೆ ಎಂದು ಕೌಲ್ ಬಜಾರ್ ನ ಹಿರಿಯ ಕುರಿ ಮಾರುವ ಮಾಲೀಕ ವಾಜಿದ್ ತಿಳಿಸಿದರು.

Body:ಬಕ್ರಿದ್ ಹಬ್ಬದ ಪ್ರಯುಕ್ತ ಕಳೆದ 40ವರ್ಷದಿಂದ ಕುರಿಮರಿಗಳ ಮಾರಾಟ ಮಾಡ್ತಾ ಬಂದಿರುವ ಎಂದಾ ವಾಜೀದ್ ಅವರು ಕುರಿಗಳು ಚೆನ್ನಾಗಿದ್ರೇ ಅವುಗಳ ಬೇಡಿಕೆ ಹೆಚ್ಚು , ಅದರಲ್ಲಿ 15 ಸಾವಿರದಿಂದ 1 ಲಕ್ಷದವರೆಗೂ ಕುರಿಮರಿಗಳಿಗೆ ಬೇಡಿಕೆ ಇದೆ ಎಂದರು. 8 ದಿನಗಳ ಮುಂದೆಯೇ ಕುರಿಗಳ ಮಾರಾಟವಾಗುತ್ತದೆ ನಗರದ ಕೌಲ್ ಬಜಾರ್ ಪ್ರದೇಶದಲ್ಲಿ ನಡೆಯುತ್ತದೆ ಎಂದರು.
ಪ್ರತಿವರ್ಷ 20 ಕುರಿಗಳನ್ನು ಮಾರಾಟ ಮಾಡುತ್ತೆವೆ ಎಂದು ಕೌಲ್ ಬಜಾರ್ ಕುರಿ ಮಾರುವ ಮಾಲೀಕ ವಾಜಿದ್ ತಿಳಿಸಿದರು.

ಬಕ್ರೀದ್ ಹಬ್ಬದ ನಾಳೆ ದಿನ ಕಡಿಮೆ ಪ್ರಮಾಣದಲ್ಲಿ ಕುರಿ ಮಾಂಸ ಮಾರಾಕಟ್ಟೆವಾಗುತ್ತದೆ ಹಾಗೇ ವ್ಯಾಪಾರ ಸಹ ಕಡಿಮೆ ಏಕೆಂದರೆ ಮುಸ್ಲಿಂ ಜನಾಂಗದವರು ಮನೆಯಲ್ಲಿ ಬಕ್ರಿದ್ ಹಬ್ಬಕ್ಕಾಗಿ ಎರಡು‌ಮೂರು ಕುರಿಮರಿಗಳನ್ನು ಮಾಂಸದೂಟ ಮಾಡಿರುತ್ತಾರೆ ಎಂದು ತಿಳಿಸಿದರು.

ಕುರಿಗಳ ಬೆಲೆ:-

15,000 ರೂಪಾಯಿ ನೀಡಿ ಕುರಿಮರಿ ಖರೀದಿಸಿದ್ರೇ ಈ ಕುರಿಮರಿಗೆ 20 ರಿಂದ 25 ಕೆಜಿ ಮಾಂಸ ದೊರೆಯುತ್ತದೆ. ಮತ್ತು ಅದೇ 75,000 ದಿಂದ 1 ಲಕ್ಷ ರೂಪಾಯಿ ವರೆಗೂ ಕುರಿಮರಿ ಖರೀದಿಸಿದ್ರೇ 45 ರಿಂದ 50 ಕೆಜಿ‌ ಮಾಂಸ ಇರುತ್ತೇ ಎಂದು ಹೇಳಿದರು. ಏಕೆ ? ಕೆಲ ಕುರಿಮರಿಗಳನ್ನು ಬೇಡಿಕೆ ಹೆಚ್ಚು ಅಂದ್ರೇ ಅವುಗಳಿಗೆ ಪ್ರತಿನಿತ್ಯ ಆಹಾರಕ್ಕಾಗಿ ಗೋಡಂಬಿ, ದಾಕ್ಷಿ, ಗೋಧಿ ಹೊಟ್ಟು, ಶೇಂಗಾ ಸಿಪ್ಪೆ ಇನ್ನಿತರ ಪೌಷ್ಟಿಕ ಪರ್ದಾರ್ಥ ಗಳನ್ನು ಕುರಿಮರಿಗಳಿಗೆ ನೀಡಿಲಾಗುತ್ತದೆ ಎಂದರು. ಈಬಕುರಿನರಿಗಳನ್ನು ಬೇರೆ ಕಡೆಗಳಿಂದ ತಂದು ಕೌಲ್ ಬಜಾರ್ ನಲ್ಲಿ ಮಾರಾಟ ಮಾಡುತ್ತೇವೆ ಎಂದು ತಿಳಿಸಿದರು.

ಎಲ್ಲಿಂದ ಕುರಿಗಳ ಬರುತ್ತವೆ:-

ಬಳ್ಳಾರಿ ಸುತ್ತಾಮುತ್ತಾ ಹಳ್ಳಿಯಿಂದಗಳಿಂದ ಹಾಗೇ ಸಿಂಧನೂರು, ಹೊಸಪೇಟೆ, ಶಿವಮೊಗ್ಗ, ಬಾಗಲಕೋಟೆ, ರಾಂಪುರದ ಪ್ರದೇಶಗಳಿಂದ ಕುರಿಮರಿಗಳನ್ನು ತಂದು ಮಾರಾಟ ಮಾಡುತ್ತೇವೆ ಎಂದರು.

-----------------------

೧. ವಾಸಿಂ, ಹಣ್ಣಿನ ವ್ಯಾಪಾರಿ, ಕೌಲ್ ಬಜಾರ್ , ಬಳ್ಳಾರಿ. ( ಕಪ್ಪು ಕುರಿಯ ಮಾಲೀಕ)

ಈ ಬಾರಿ ಬಕ್ರಿದ್ ಹಬ್ಬಕ್ಕೆ 24,000 /- ರೂಪಾಯಿ ಕೊಟ್ಟು ಕುರಿ ಖರೀದಿ ಮಾಡಿದ್ದೇನೆ, 20,000 ಸಾವಿರ ಮೇಲೆ ಹಣ ನೀಡಿ ಖರೀದಿ ಮಾಡಿದರೇ ಕುರಿ ಚೆನ್ನಾಗಿರುತ್ತದೆ ಎಂದು ತಿಳಿಸಿದರು. ಕುರಿಗಳ ಬೆಲೆಗಳು ಸಹ ಹೆಚ್ಚಾಗಿದೆ ಎಂದರು.

-------------------------

೨. ಎಂ.ಡಿ ಜಾವಿದ್, ಕೌಲ್ ಬಜಾರ್, ಬಳ್ಳಾರಿ. ( ಕೆಂಪು ಕುರಿಯ ಮಾಲೀಕ)

40,000/- ಬಾಗಲಕೋಟ ಪ್ರದೇಶದ ಅಮ್ಮಿನ್ ಗಡದಿಂದ ಕುರಿಮರಿ ತೆಗೆದುಕೊಂಡು ಬಂದಿದ್ದೇವೆ, ಕಳೆದ ಎರಡು ವರ್ಷಗಳಿಂದ ಹಬ್ಬದ ಆಚರಣೆ ಮಾಡಿಲ್ಲ ಮತ್ತೆ ಈ ಬಾರಿ ಬಕ್ರಿದ್ ಮಾಡ್ತಾ ಇದೀವಿ ಈ ವರ್ಷ 40,000 ಸಾವಿರ ರೂಪಾಯಿ ನೀಡಿ ಖರೀದಿ ಮಾಡಿದ್ದೇವೆ ಎಂದು ಎಂ.ಡಿ ಜಾವಿದ್ ತಿಳಿಸಿದರು.

------------------------

Conclusion:ಒಟ್ಟಾರೆಯಾಗಿ ಬಕ್ರಿದ್ ಹಬ್ಬದ ಸಮಯದಲ್ಲಿ ಕುರಿಮರಿಗಳಿಗೆ ಬೇಡಿಕೆ ಹೆಚ್ಚು, ಹಾಗೇ ಅದರ ಬೆಲೆಯು ಸಹ ಅಧಿಕ ಮತ್ತು ಕುರಿಗಳ ಅಂದಕ್ಕೆ ಹೆಚ್ಚು ಬೇಡಿಕೆ ಇದೆ ಎನ್ನುವ ಅಂಶ ತಿಳಿಯಬಹುದು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.