ETV Bharat / state

ಬಳ್ಳಾರಿಯಲ್ಲಿ ಆತ್ಮಹತ್ಯೆಗೆ ಶರಣಾದ ದಂಪತಿ: ಕೌಟುಂಬಿಕ ಕಲಹ ಶಂಕೆ

ಮದುವೆಯಾಗಿ ಮೂರು ವರ್ಷ ಕಳೆದರೂ ಕೂಡ ಮಕ್ಕಳಾಗಲಿಲ್ಲ ಎಂದು ಸುಧಾ ಆತ್ಮಹತ್ಯೆ ಮಾಡಿಕೊಂಡಿದ್ದು, ವಿಷಯ ತಿಳಿದ ಬಳಿಕ ಪತಿ ತೆಲಿಗರ ಹನುಮಂತಪ್ಪ ಕೂಡ ನೇಣಿಗೆ ಶರಣಾಗಿದ್ದಾನೆ. ಘಟನೆಗೆ ಕೌಟುಂಬಿಕ ಕಲಹವೇ ಕಾರಣ ಎಂದು ಶಂಕೆ ವ್ಯಕ್ತವಾಗುತ್ತಿದ್ದು, ತನಿಖೆ ಬಳಿಕ ಸತ್ಯಾಂಶ ತಿಳಿದು ಬರಲಿದೆ.

A couple committed to suicide in Ballary
ಆತ್ಮಹತ್ಯೆಗೆ ಶರಣಾದ ದಂಪತಿ
author img

By

Published : Sep 29, 2020, 6:50 AM IST

ಬಳ್ಳಾರಿ: ಪತಿ-ಪತ್ನಿ ನಡುವಿನ ಕೌಟುಂಬಿಕ ಕಲಹದ ಹಿನ್ನೆಲೆ ಇಬ್ಬರೂ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಶಿಂಗ್ರಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಶಿಂಗ್ರಿಹಳ್ಳಿ ಸುಧಾ (30) ಎಂಬುವವರು ಕ್ರಿಮಿನಾಶಕ ಸೇವಿಸಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯ ಸಾವಿನ ಆರೋಪ ಎಲ್ಲಿ ತನ್ನ ಮೇಲೆ ಬರುತ್ತೆ ಎಂದು ಹೆದರಿದ ಪತಿ ತೆಲಿಗರ ಹನುಮಂತಪ್ಪ (33) ಕೂಡ ತನ್ನ ಜಮೀನಿಗೆ ತೆರಳಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಘಟನೆಯ ವಿವರ: ವಿವಾಹವಾಗಿ ಮೂರು ವರ್ಷವಾದ್ರೂ ಕೂಡ ತನಗೆ ಮಕ್ಕಳಾಗಲಿಲ್ಲ ಎಂದು ಮನನೊಂದ ಪತ್ನಿ ಸುಧಾ, ಗಂಡನ‌‌ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯ ಸಾವಿನ ಆರೋಪವನ್ನು ತಾನೆಲ್ಲಿ ಹೊರಬೇಕಾಗುತ್ತೋ ಎಂಬ ಖಿನ್ನತೆಗೆ ಒಳಗಾಗಿ ಪತಿ ಹನುಮಂತಪ್ಪನೂ‌ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆದ್ರೆ ನಿಖರ ಕಾರಣ ತನಿಖೆ ಬಳಿಕವಷ್ಟೇ ತಿಳಿದು ಬರಲಿದೆ. ಅವರಿಬ್ಬರ ನಡುವೆ ಆಗಾಗ ಕೌಟುಂಬಿಕ ಕಲಹ ಉಂಟಾಗುತ್ತಿತ್ತೆಂಬ ಮಾಹಿತಿ ಬೆಳಕಿಗೆ ಬಂದಿದೆ.

ಸುಧಾ ಅವರ ತಂದೆ ಹಾಗೂ ಮೃತ ಹನುಮಂತಪ್ಪನ ಸಹೋದರ ಇಬ್ಬರೂ ಪ್ರತ್ಯೇಕವಾಗಿ ದೂರು ನೀಡಿದ್ದು, ಹಲುವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಹಶೀಲ್ದಾರ್​ ಅನಿಲಕುಮಾರ ಹಾಗೂ ವೃತ್ತ ನಿರೀಕ್ಷಕ ಕುಮಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.