ಬಳ್ಳಾರಿ: ನಾಟಕ ಯಾವಾಗಲೂ ಚಿರಂಜೀವಿಯಾಗಿರುತ್ತದೆ. ಅಕ್ಷರಸ್ಥ ವ್ಯಕ್ತಿಗಿಂತ ಅನಕ್ಷರಸ್ಥ ರಾಜಕೀಯ ವ್ಯಕ್ತಿ ಬಹಳ ಅಪಾಯಕಾರಿ ಎಂದು ಹಿರಿಯ ರಂಗಕರ್ಮಿ ಮತ್ತು ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಬಸವಲಿಂಗಯ್ಯ ದೂರಿದರು.
ನಗರದ ಡಾ.ಜೋಳದರಾಶಿ ದೊಡ್ಡನ ಗೌಡರ ರಂಗಮಂದಿರದಲ್ಲಿ ರಂಗತೋರಣದ 13ನೇ ರಾಜ್ಯ ವಿದ್ಯಾರ್ಥಿ ನಾಟಕೋತ್ಸವ ಸಮಾರೋಪ ಸಮಾರಂಭ ಮತ್ತು ಗಣ್ಯರಿಂದ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಪೆಟ್ರೋಲ್, ಡಿಸೇಲ್, ಬೆಳೆ ಮತ್ತು ಇನ್ನಿತರ ವಸ್ತುಗಳ ಬಗ್ಗೆ ಪ್ರಶ್ನೆ ಮಾಡಿದ್ರೇ ಅನಾಗರಿಕ ಎಂದು ಕರೆಯುತ್ತಾರೆ.
ಅಂಥ ಅನಾಗರಿಕತೆ ತೆಗೆಯಲು ರಂಗಭೂಮಿ ಬೇಕಾಗಿದೆ. ನಾಟಕ ನೋಡುವ, ಅಭಿನಯ ಮಾಡುವುದು ಬಹಳ ಮುಖ್ಯ. ಇದರಿಂದ ಕ್ರಾಂತಿ ಆಗುತ್ತದೆ. ಕ್ರಾಂತಿ ಎಂದರೆ ಬದಲಾವಣೆ ಎಂದು ಅರ್ಥ. ಸಿಂಹ ಅಹಂಕಾಲದಿಂದ ನಾನೇ ರಾಜ ಎಂದು ತಿರ್ಮಾನ ಮಾಡಿದರೆ, ಮನುಷ್ಯರು, ಸ್ವರ್ಗ ಮತ್ತು ನರಕ ಎಲ್ಲಾವನ್ನು ಸೃಷ್ಟಿ ಮಾಡಿದವರು ನಾವು. ಕೊರೊನಾವನ್ನು ಸೃಷ್ಟಿ ಮಾಡಿದ್ದು ನಾವು ಎಂದು ತಿಳಿಸಿದರು.
13ನೇ ರಾಜ್ಯ ವಿದ್ಯಾರ್ಥಿ ನಾಟಕೋತ್ಸವ ನಾಟಕ/ಪ್ರಶಸ್ತಿ ನಗದು ಮತ್ತು ಬಹುಮಾನ ವಿತರಣೆ :
ಪ್ರಥಮ ಉತ್ತಮ ನಾಟಕ - ಅಂಧಯುಗ - ಮೈಸೂರು - ಎಸ್.ಬಿ.ಆರ್.ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜ್ ಗೆ ಪ್ರಶಸ್ತಿ ಮತ್ತು 25 ಸಾವಿರ ನಗದು ಹಣವನ್ನು ನೀಡಲಾಯಿತು.
ದ್ವೀತಿಯ ಉತ್ತಮ ನಾಟಕ - ಪ್ರಮೀಳಾರ್ಜುನೀಯಂ - ಬೆಂಗಳೂರು- ನ್ಯಾಷನಲ್ ಕಾಲೇಜ್ 15 ಸಾವಿರ ಮತ್ತು ಪ್ರಶಸ್ತಿ ಫಲಕ ನೀಡಲಾಯಿತು.
ತೃತೀಯ ಉತ್ತಮ ನಾಟಕ - ಸಹ್ಯಾದ್ರಿ ಕಲಾ ಕಾಲೇಜು - ಶಿವಮೊಗ್ಗ.10ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕ ನೀಡಿ ಗೌರವಿಸಿದರು.
ಉತ್ತಮ ನಟ - ನಾಟಕ ಸಂಜೀವಿ - ತೀರ್ಥೆಶ್, ಉತ್ತಮ ನಟಿ - ನಾಟಕ ರಾವಿ ನದಿಯ ದಂಡೆಯಲ್ಲಿ - ವಿ. ಪಲ್ಲವಿ, ಉತ್ತಮ ರಂಗಸಜ್ಜಿಕೆ ಕೆ.ಸಂತೋಷ, ಉತ್ತಮ ನಿರ್ದೇಶಕ ಡಿ.ಶ್ರೇಯಸ್, ಉತ್ತಮ ಸಂಗೀತ ನೇತ್ರ, ಉತ್ತಮ ಧ್ವನಿ + ಬೆಳಕು ವಿ.ದೇವರಾಜ, ಉತ್ತಮ ಪ್ರಸಾಧನ ಡಿ. ಶ್ರೇಯಸ್, ಉತ್ತಮ ವೇಷ ಭೂಷಣ ವಿಸ್ತಾರ ರಂಗ ಶಾಲೆ ಕೊಪ್ಪಳ.
ಈ ಎಲ್ಲಾ ನಾಟಕಗಳ ನಿರ್ಣಯಕರಾಗಿ ಆರತಿ ದೇವಶಿಖಾಮಣಿ, ವಿಜಯ ಕುಮಾರ ಜಿತೂರಿ, ಮುರುಘೇಂದ್ರ ಹಡಪದ ಕಾರ್ಯನಿರ್ವಹಿಸಿದರು.