ETV Bharat / state

ಸ್ಮಾರ್ಟ್​ಸಿಟಿ ಯೋಜನೆ ಮೂಲಕ ಜನಸ್ನೇಹಿ ವಾತಾವರಣ, ಕುಂದಾನಗರಿ ಸಿಟಿ ಬಸ್‌ಗಳ ಮೇಲೆ ಜಿಪಿಎಸ್​ ಕಣ್ಣು..!

ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಸ್ಮಾರ್ಟ್​ಸಿಟಿ ಯೋಜನೆಯಡಿ, ಬೆಳಗಾವಿ ಮಹಾನಗರದಲ್ಲಿ ಮೊದಲ ಹಂತದಲ್ಲಿ ಈಗಾಗಲೇ 66 ಬಸ್‌ಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಈ ಮೂಲಕ ಸಾರ್ವಜನಿಕರಿಗೆ ಸಿಟಿ ಬಸ್‌ಗಳು ಎಲ್ಲಿವೆ? ಯಾವ ಸಮಯಕ್ಕೆ ಬರಲಿವೆ? ಎಂಬ ಸಂಪೂರ್ಣ ಮಾಹಿತಿಯನ್ನು ಈ ಸಿಟಿಜನ್ ಆ್ಯಪ್‌ನಲ್ಲಿ ಅಳವಡಿಸಲಾಗಿದೆ..

smart-city-project-belagavi-bus-gps-control-news
ಕುಂದಾನಗರಿ ಸಿಟಿ ಬಸ್‌ಗಳ ಮೇಲೆ ಜಿಪಿಎಸ್​ ಕಣ್ಣು
author img

By

Published : Nov 22, 2020, 5:27 PM IST

ಬೆಳಗಾವಿ : ಸಾರ್ವಜನಿಕರಿಗೆ ಉತ್ತಮ ಸೇವೆಯ ಜತೆಗೆ, ಜನಸ್ನೇಹಿ ವಾತಾವರಣಕ್ಕೆ ನಗರದಲ್ಲಿನ ಸಿಟಿ ಬಸ್‌ಗಳಿಗೆ ಹೈಟೆಕ್ ಟಚ್ ನೀಡಲು ಸ್ಮಾರ್ಟ್​ಸಿಟಿ ಇಲಾಖೆ ಮುಂದಾಗಿದೆ. ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ ಸಿಟಿಜನ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡರೆ ಸಾಕು, ಅದರಲ್ಲಿ ದಿನನಿತ್ಯ ಬೆಳಗಾವಿ ಸಿಟಿ ಬಸ್‌ಗಳಲ್ಲಿ ಓಡಾಡುವವರಿಗೆ ಯಾವ ಬಸ್ ಎಲ್ಲಿಗೆ, ಎಷ್ಟು ಗಂಟೆಗೆ ಬರಲಿದೆ ಎಂಬ ಮಾಹಿತಿ ಸೇರಿಸಲಾಗಿದೆ.

ಕುಂದಾನಗರಿ ಸಿಟಿ ಬಸ್‌ಗಳ ಮೇಲೆ ಜಿಪಿಎಸ್​ ಕಣ್ಣು

ಇಂದಿನ ತಂತ್ರಜ್ಞಾನ ಯುಗದಲ್ಲಿ ಮನುಷ್ಯನ ಕೈಯಲ್ಲಿ ಸ್ಮಾರ್ಟ್ ಮೊಬೈಲ್ ಇದ್ದರೆ ಸಾಕು, ವಿಶ್ವದ ಆಗುಹೋಗುಗಳನ್ನು ಕ್ಷಣಾರ್ಧದಲ್ಲಿ ತನ್ನ ಅಂಗೈಯಲ್ಲಿಯೇ ಸಿಗುತ್ತವೆ. ಅಂತಹ ತಂತ್ರಜ್ಞಾನ ಬಳಸಿ ಬೆಳಗಾವಿ ಸ್ಮಾರ್ಟ್​ಸಿಟಿ ಇಲಾಖೆ ತನ್ನ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸಲು ಹಾಗೂ ಕಾಮಗಾರಿಗಳನ್ನು ಜಿಲ್ಲೆಯ ಪ್ರತಿಯೊಬ್ಬರಿಗೆ ಗೊತ್ತಾಗಬೇಕೆಂಬ ಕಾರಣಕ್ಕಾಗಿ ಸಿಟಿಜನ್ ಆ್ಯಪ್ ಬಿಡುಗಡೆ ಮಾಡಿತ್ತು.

ಇದೇ ಸಿಟಿಜನ್ ಆ್ಯಪ್‌ ಅನ್ನು ಜಿಲ್ಲೆಯ ಜನರು ತಮ್ಮ ಮೊಬೈಲ್‌ನಲ್ಲಿ ಡೌನಲೋಡ್ ಮಾಡಿಕೊಂಡರೆ, ಇದೀಗ ನಗರದಲ್ಲಿನ ಸಿಟಿ ಬಸ್‌ಗಳ ರೂಟ್‌ಮ್ಯಾಪ್ ತಿಳಿದುಕೊಳ್ಳಬಹುದು. ಈ ಆ್ಯಪ್ ಬಳಕೆಯಿಂದ ಸಾರ್ವಜನಿಕರಿಗೆ ಬಸ್‌ಗಳಿಗಾಗಿ ಕಾಯುವ ಕಿರಿಕಿರಿ ತಪ್ಪಲಿದೆ.

ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಸ್ಮಾರ್ಟ್​ಸಿಟಿ ಯೋಜನೆಯಡಿ, ಬೆಳಗಾವಿ ಮಹಾನಗರದಲ್ಲಿ ಮೊದಲ ಹಂತದಲ್ಲಿ ಈಗಾಗಲೇ 66 ಬಸ್‌ಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಈ ಮೂಲಕ ಸಾರ್ವಜನಿಕರಿಗೆ ಸಿಟಿ ಬಸ್‌ಗಳು ಎಲ್ಲಿವೆ? ಯಾವ ಸಮಯಕ್ಕೆ ಬರಲಿವೆ? ಎಂಬ ಸಂಪೂರ್ಣ ಮಾಹಿತಿಯನ್ನು ಈ ಸಿಟಿಜನ್ ಆ್ಯಪ್‌ನಲ್ಲಿ ಅಳವಡಿಸಲಾಗಿದೆ.

ಇದರಿಂದ ಮಹಾನಗರದ ಜನರಿಗೆ ಸಮಯ ಉಳಿಯುವುದರ ಜೊತೆಗೆ ತಾವು ಸಂಚರಿಸಲಿರುವ ರೂಟ್ ನಂಬರ್‌ನ ಬಸ್ ಎಲ್ಲಿದೆ? ಎಷ್ಟು ಗಂಟೆಗೆ ಬರಲಿದೆ? ಎಂಬುವುದನ್ನು ಮನೆಯಲ್ಲಿಯೇ ಕುಳಿತು ನಮ್ಮ ಮೊಬೈಲ್‌ನಲ್ಲೇ ನೋಡಬಹುದು. ಇದೇ ಮೊದಲ ಬಾರಿಗೆ ಬೆಳಗಾವಿಯಲ್ಲಿ ಸಿಟಿ ಬಸ್ ಪ್ರಯಾಣಿಕರಿಗೆ ಅನುಕೂಲವಾಗಲು ಸಿಟಿಜನ್ ಆ್ಯಪ್‌ನಲ್ಲಿ ಈ ಮಾಹಿತಿಗಳನ್ನು ಪರಿಚಯಿಸಲಾಗಿದೆ.

smart-city-project-belagavi-bus-gps-control-news
ಕುಂದಾನಗರಿ ಸಿಟಿ ಬಸ್‌ಗಳ ಮೇಲೆ ಜಿಪಿಎಸ್​ ಕಣ್ಣು

66 ಬಸ್‌ಗಳಿಗೆ ಜಿಪಿಎಸ್ ಅಳವಡಿಕೆ : ಸ್ಮಾರ್ಟ್​ಸಿಟಿ ಯೋಜನೆಯಡಿ ಮಹಾನಗರದ ಪ್ರಯಾಣಿಕರಿಗೆ, ಸಿಟಿಬಸ್‌ಗಳು ಮತ್ತಷ್ಟು ಹತ್ತಿರವಾಗಲಿ ಎಂಬ ಕಾರಣಕ್ಕೆ ಸಾರಿಗೆ ಇಲಾಖೆಯ 66 ಬಸ್‌ಗಳಿಗೆ ಜಿಪಿಎಸ್ ತಂತ್ರಜ್ಞಾನ ಅಳವಡಿಸಲಾಗಿದೆ. ಪ್ರಯಾಣಿಕ ಸ್ನೇಹಿ ಸಾರಿಗೆ ವ್ಯವಸ್ಥೆಯ ಮೊದಲನೇ ಹೆಜ್ಜೆಯಾಗಿ ಮಹಾನಗರ ಸಿಟಿ ಬಸ್‌ಗಳನ್ನು, ಸಿಜಿಜನ್ ಆ್ಯಪ್ ಮೂಲಕ ಟ್ರ್ಯಾಕಿಂಗ್ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಈಗಾಗಲೇ ಸಿಟಿಜನ್ ಆ್ಯಪ್ ಬಳಕೆಯಲ್ಲಿದೆ.

ಲೈವ್ ಟ್ರ‍್ಯಾಕಿಂಗ್ ವ್ಯವಸ್ಥೆ : ಮಹಾನಗರದಲ್ಲಿನ ಸಿಟಿ ಬಸ್‌ಗಳು, ಆ್ಯಂಬುಲೆನ್ಸ್ ಹಾಗೂ ಅಗ್ನಿಶಾಮಕದಳದ ವಾಹನಗಳ ರೂಟ್ ಮ್ಯಾಪ್ ಪಡೆದುಕೊಂಡು ಸ್ಮಾರ್ಟ್​ಸಿಟಿ ಇಲಾಖೆ ವತಿಯಿಂದ, ಅವುಗಳಿಗೆ ಜಿಪಿಎಸ್ ತಂತ್ರಜ್ಞಾನ ಅಳವಡಿಸಲಾಗಿದೆ. ಆ ಬಸ್‌ಗಳನ್ನು ಲೈವ್ ಟ್ರ‍್ಯಾಕಿಂಗ್ ಮಾಡಲು ಸಿಟಿಜನ್ ಆ್ಯಪ್‌ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಪಿಎಸ್ ಆಧಾರದ ಮೇಲೆ ಬಸ್‌ಗಳ ನಿಖರ ಮಾಹಿತಿ ಮೊಬೈಲ್‌ನಲ್ಲಿ ದೊರಕಲಿದೆ.

ಮ್ಯಾಪ್‌ನಲ್ಲಿ ಸದ್ಯ ಬಸ್ ಎಲ್ಲಿದೆ?, ಎಷ್ಟು ಗಂಟೆಗೆ ನಿಲ್ದಾಣಕ್ಕೆ ಆಗಮಿಸುತ್ತದೆ?, ಚಾಲಕ ಎಷ್ಟು ಕಿ.ಮೀ ವೇಗದಲ್ಲಿ ಚಲಾಯಿಸುತ್ತಿದ್ದಾನೆ? ರೂಟ್ ಬದಲಾವಣೆ ಮಾಡಿದ್ರೂ ಮಾಹಿತಿಯನ್ನು ಪಡೆಯಲು ಸಾಧ್ಯವಾಗಲಿದೆ. ಇದರ ಜೊತೆಗೆ ಒಂದು ಕಡೆಯಿಂದ ಮತ್ತೊಂದೆಡೆ ಚಲಿಸಲು ಎಷ್ಟು ಸಮಯ ಬೇಕು?, ಮುಂದಿನ ನಿಲ್ದಾಣ ಸಹಿತ ಹಲವಾರು ಮಾಹಿತಿಗಳು ಸಿಟಿಜನ್ ಆ್ಯಪ್‌ನಲ್ಲಿ ಸೇರಿಸಲಾಗಿದೆ ಎಂದು ಸ್ಮಾರ್ಟ್​ಸಿಟಿ ಎಂಡಿ ಶಶಿಧರ್ ಕುರೇರ್ ತಿಳಿಸಿದರು.

ಇಂಟಿಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ : ಸ್ಮಾರ್ಟ್​ಸಿಟಿ ಯೋಜನೆಗಳ ಮಾಹಿತಿಯನ್ನು ಒಂದೇ ಕಡೆಯಿಂದ ಕಂಟ್ರೋಲ್ ಮಾಡುವ ನಿರ್ವಹಣಾ ಕೇಂದ್ರ ಇದಾಗಿದ್ದು, ಈ ಕೇಂದ್ರದಿಂದ ಸಂಚಾರ ನಿಯಂತ್ರಣಕ್ಕೆ ಬೇಕಾದ ವ್ಯವಸ್ಥೆ ಇದರಲ್ಲಿದೆ. ಇದರ ಜೊತೆಗೆ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ ಸಾಕು, ತ್ವರಿತಗತಿಯಲ್ಲಿ ಈ ಕೇಂದ್ರ ಸೇವೆ ನೀಡಲಿದೆ.

ಜತೆಗೆ ಘನತ್ಯಾಜ್ಯ ನಿರ್ವಹಣೆ, ಕುಡಿಯುವ ನೀರು, ವಿದ್ಯುತ್, ಬೀದಿ ದೀಪ ಸೇರಿ ಇತರ ಮಾಹಿತಿಗಳ ಬಗ್ಗೆಯೂ ನಿರ್ವಹಣೆ ಮಾಡುತ್ತದೆ. ಏನೇ ಆಗಲಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕೆಂದು ಪಣತೊಟ್ಟಿರುವ ಸ್ಮಾರ್ಟ್ ಸಿಟಿ ಇಲಾಖಾ ಅಧಿಕಾರಿಗಳ ಕಾರ್ಯಕ್ಕೆ ಇದೀಗ ಜಿಲ್ಲೆಯ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.