ಬೆಳಗಾವಿ: ನಿಮಗ್ಯಾರಿಗೋ ಬಾರ್ ವ್ಯಾಪಾರ ಆಗಬೇಕು ಎಂದು ಜನರ ಪ್ರಾಣವನ್ನು ತಗೆಯೋದು ಒಳ್ಳೆಯದಲ್ಲ ಎಂದು ಬೆಳಗಾವಿಯಲ್ಲಿ ಬಾರ್ ಮಾಲೀಕರ ವಿರುದ್ಧ ಆರ್ ಅಶೋಕ್ ಗರಂ ಆಗಿ ಪ್ರತಿಕ್ರಿಯೆ ನೀಡಿದರು.
ಅವರು ಬೆಳಗಾವಿ ನಗರದಲ್ಲಿ ಖಾಸಗಿ ಹೋಟೆಲ್‌ನಲ್ಲಿ ಕೊರೊನಾದ ಹೊಸ ನಿಯಮಗಳ ಜಾರಿಗೆ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ ಮಾತನಾಡಿದರು. ಬಾರ್, ಪಬ್‌ಗಳಲ್ಲಿ ಕುಳಿತು ಡ್ರಿಂಕ್ಸ್ ಮಾಡಲು ಸ್ಪೆಷಲ್ ಮಾಸ್ಕ್ ರಿಲೀಸ್ ಮಾಡಿದ್ದಾರೆ. ಆ ಮಾಸ್ಕ್‌ಗಳನ್ನು ಪಡೆದು ಪಬ್, ಬಾರ್‌ನವರು ಗ್ರಾಹಕರಿಗೆ ನೀಡಲಿ. ಮಾಸ್ಕ್ ಹಾಕಿಕೊಂಡೇ ಡ್ರಿಂಕ್ಸ್ ಮಾಡಬಹುದು. ಆ ರೀತಿ ಮಾಸ್ಕ್ ರಿಲೀಸ್ ಆಗಿದೆ. ಇವತ್ತು ಪತ್ರಿಕೆಯೊಂದರಲ್ಲಿ ನೋಡಿದ್ದೇನೆ. ಜನರ ಪ್ರಾಣ ಉಳಿದರೆ ಎಲ್ಲ ಸಿಗುತ್ತೆ. ಜನರ ಪ್ರಾಣಕ್ಕೆ ಕಂಟಕ ಬಿದ್ದರೆ ಏನು ಸಿಗುತ್ತೆ.. ನಾನು ಅವರಲ್ಲಿ ವಿನಂತಿ ಮಾಡ್ತೀನಿ, ದಯಮಾಡಿ ಸಹಕಾರ ನೀಡಿ ಹೇಳಿ ಎಂದು ಹೇಳಿದರು.
ನಿನ್ನೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ. ಆಸ್ಪತ್ರೆಯಲ್ಲಿರೋ ಎಲ್ಲ ಸೌಲಭ್ಯಗಳ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಇವತ್ತು ಸಹ ರಾಜ್ಯದ ಎಲ್ಲ ಕಡೆಗಳಲ್ಲಿರೋ ಆಸ್ಪತ್ರೆಗಳ ಪರಿಶೀಲನೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯದ ಯಾವ ಮೂಲೆಯಲ್ಲಿಯೂ ತೊಂದರೆ ಆಗಲು ನಮ್ಮ ಸರ್ಕಾರ ಬಿಡಲ್ಲ. ಆಂಬ್ಯುಲೆನ್ಸ್, ಮೆಡಿಸಿನ್, ಐಸಿಯು ಕೊರತೆಯುಂಟಾಗದಂತೆ ಮಾಡುತ್ತೇವೆ ಎಂದರು.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ರಚನೆ ಮಾಡಲಾಗುವುದು. ಸಾರ್ವಜನಿಕರು ಭಯ ಪಡೋದು ಬೇಡ ಸರಕಾರ ಕರ್ನಾಟಕದ ಜನತೆಯೊಂದಿಗಿದೆ. ಜನತೆಯೂ ಸರ್ಕಾರದೊಂದಿಗೆ ಸಹಕರಿಸಿಬೇಕೆಂದು ಕೇಳಿಕೊಂಡರು.
ಇದನ್ನೂ ಓದಿ: ರಾಜ್ಯಾದ್ಯಂತ ಇಂದಿನಿಂದ ಮಾಸ್ಕ್ ಕಡ್ಡಾಯ: ರಾಜ್ಯ ಸರ್ಕಾರದಿಂದ ಹೊಸ ಗೈಡ್ಲೈನ್ ಬಿಡುಗಡೆ!