ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜಸ್ತಂಭ ಅಳವಡಿಕೆ ಪ್ರತಿಯಾಗಿ ಭಗವಾಧ್ವಜ ಅಳವಡಿಸಲು ಮುಂದಾದ ಎಂಇಎಸ್ ಮಹಿಳಾ ಕಾರ್ಯಕರ್ತೆಯರ ಯತ್ನವನ್ನು ಬೆಳಗಾವಿ ಪೊಲೀಸರು ವಿಫಲಗೊಳಿಸಿದರು.
ಮಾಜಿ ಮೇಯರ್ ಹಾಗೂ ಎಂಇಎಸ್ ನಾಯಕಿ ಸರಿತಾ ಪಾಟೀಲ ನೇತೃತ್ವದಲ್ಲಿ ಪಾಲಿಕೆ ಎದುರು ಭಗವಾಧ್ವಜ ಅಳವಡಿಸಲು ಮಹಿಳೆಯರು ಮುಂದಾಗಿದ್ದರು. ಈ ವೇಳೆ ಕೃಷ್ಣದೇವರಾಯ ವೃತ್ತದಲ್ಲೇ ಎಂಇಎಸ್ ಮಹಿಳಾ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು. ಅಲ್ಲದೇ ಕೈಯಲ್ಲಿದ್ದ ಭಗವಾಧ್ವಜವನ್ನು ವಶಕ್ಕೆ ಪಡೆಯಲಾಯಿತು.
ಎಂಇಎಸ್ ಮಹಿಳಾ ಕಾರ್ಯಕರ್ತೆಯರನ್ನು ವಶಕ್ಕೆ ಪಡೆದು ಮಾಳ ಮಾರುತಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಇನ್ನು ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ಮಹಾನಗರ ಪಾಲಿಕೆ ಎದುರು ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ಇದನ್ನೂ ಓದಿ:ಗಡಿ ಜಿಲ್ಲೆಯಲ್ಲಿ ಎಂಇಎಸ್, ಶಿವಸೇನೆ ಪುಂಡಾಟ: ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಘೋಷಣೆ ಕೂಗಿ ಉದ್ಧಟತನ