ಬೆಳಗಾವಿ: ನಗರದ ಹೊರವಲಯದ ಸಂಗೊಳ್ಳಿ ರಾಯಣ್ಣ ಪುತ್ಥಳಿ ಜಾಗದಲ್ಲಿ ಉದ್ಧಟತನ ನಡೆಸಿದ ಆರೋಪದಡಿ 150 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಪೀರನವಾಡಿಯ ನಾಕಾ ಬಳಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಮರು ಪ್ರತಿಷ್ಠಾಪನೆಗೆ ಸ್ಥಳೀಯ ಮರಾಠಿ ಭಾಷಿಕರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಕನ್ನಡ ಸಂಘಟನೆ ಸದಸ್ಯರ ಮೇಲೆ ಕಲ್ಲು ತೂರಾಟ ನಡೆಸಿದರು ಎನ್ನಲಾಗ್ತಿದೆ. ಹೀಗಾಗಿ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐಪಿಸಿ ಸೆಕ್ಷನ್ 143,147,148, 336,149ರಡಿ ಎಫ್‌ಐಆರ್ ದಾಖಲಿಸಲಾಗಿದೆ. ಬೆಳಗ್ಗೆ ಪೀರನವಾಡಿ ಶಿವಾಜಿ ಪ್ರತಿಮೆ ಬಳಿ 200 ಕ್ಕೂ ಹೆಚ್ಚು ಜಮಾವಣೆಗೊಂಡಿದ್ದರು. ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿರೋಧಿಸಿ ಈ ಎಲ್ಲರೂ ಪ್ರತಿಭಟನೆ ನಡೆಸಿದ್ದರು.